ಉತ್ತರ ಸಿಕ್ಕಿಂ ಗಡಿ ಭಾಗದಲ್ಲಿ ಚೀನಾ- ಭಾರತ ಸೈನಿಕರ ನಡುವೆ ಘರ್ಷಣೆ| ಉದ್ಧಟತನ ಮೆರೆದ ಚೀನಾ ಸೈನಿಕರು| ಏಕಾಏಕಿ ಭಾರತದ ಗಡಿ ಪ್ರವೇಶಿಸಿದ ಚೀನಿಯರು| ಚೀನಾ ಸೈನಿಕರ ಉದ್ಧಟತನಕ್ಕೆ ಭಾರತೀಯ ಯೋಧರಿಂದ ತಕ್ಕ ಪ್ರತ್ಯುತ್ತರ
ಸಿಕ್ಕಿಂ(ಮೇ.10): ಉತ್ತರ ಸಿಕ್ಕಿಂ ಗಡಿಯಲ್ಲಿ ಭಾರತೀಯ ಸೇನೆ ಹಾಗೂ ಚೀನಾದ ಸೈನಿಕರ ನಡುವೆ ಘರ್ಷಣೆ ನಡೆದಿದೆ. ಇಲ್ಲಿನ ನಾಕು ಲಾ ಪ್ರಾಂತ್ಯದಲ್ಲಿ ಸೈನಿಕರ ನಡುವಿನ ಈ ಘರ್ಷಣೆ ನಡೆದಿದ್ದು, ವರದಿಗಳನ್ವಯ ಎರಡೂ ಕಡೆಗಳಲ್ಲಿ ಅನೇಕ ಸೈನಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಗೊಂಡಿಲ್ಲವಾದರೂ, ಚೀನಾ ಸೇನೆಗೆ ಭಾರತೀಯ ಯೋಧರು ತಕ್ಕ ಉತ್ತರ ನೀಡಿದ್ದು, ಅವರನ್ನು ಗಡಿಯಿಂದ ಹೊರದಬ್ಬುವಲ್ಲಿ ಯಶಸ್ವಿಯಾಗಿದ್ದಾರೆನ್ನಲಾಗಿದೆ.
ಏಕಾಏಕಿ ಚೀನಿ ಸೈನಿಕರ ಗುಂಪು ಭಾರತೀಯ ಗಡಿ ಪ್ರವೇಶಿಸಿ, ಸೈನಿಕರೊಂದಿಗೆ ವಿನಾಕಾರಣ ಜಗಳಕ್ಕಿಳಿದಿದ್ದಾರೆ. ಇದಕ್ಕೆ ತಕ್ಕ ಉತ್ತರನೀಡಿದ ಭಾರತೀಯ ಸೈನಿಕರು, ದೈಹಿಕ ಬಲದಿಂದಲೇ ಚೀನಿ ಸೈನಿಕರನ್ನು ಹಿಮ್ಮೆಟ್ಟಿಸಿ ಗಡಿಯಿಂದಾಚೆ ದಬ್ಬಿದ್ದಾರೆ. ಭಾರತ-ಚೀನಾ ಸೇನೆ ನಡುವಿನ ಈ ತಿಕ್ಕಾಟ ತಾತ್ಕಾಲಿಕವಾಗಿತ್ತು ಎಂದು ಭಾರತೀಯ ಸೇನೆ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
undefined
ಲಾಕ್‌ಡೌನ್ ಎಫೆಕ್ಟ್: ಈ ಒಂದು ವಿಚಾರದಲ್ಲಿ ಅಮೆರಿಕವನ್ನೇ ಮೀರಿಸಿದ ಭಾರತ!
ಕಳೆದ ವರ್ಷವೂ ಭಾರತ ಹಾಗೂ ಚೀನಾ ಸೈನಿಕರ ನಡುವೆ ಘರ್ಷಣೆಯಾದ ಸುದ್ದಿ ಬಹಿರಂಗವಾಗಿದ್ದವು. ಲಡಾಖ್‌ನ ಪೆಂಗಾಂಗ್ ಸರೋವರದ ಬಳಿ ಗಸ್ತು ತಿರುಗುವ ಕುರಿತು ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿತ್ತು. ಈ ಕಾರಣದಿಂದಾಗಿ ಉಭಯ ದೇಶಗಳ ನಡುವೆ 'ಫೇಸ್‌ಆಫ್' ಸನ್ನಿವೇಶ ಸೃಷ್ಟಿಯಾಗಿತ್ತು, ಆದರೆ ಇದಾದ ಬಳಿಕ ಉಭಯ ದೇಶಗಳ ಬ್ರಿಗೇಡಿಯರ್ ಮಟ್ಟದ ಸಂವಾದದ ಬಳಿಕ ವಿಚಾರ ಬಗೆಹರಿಸಲಾಗಿತ್ತು.