ಸಿಕ್ಕಿಂ: ಭೂಕುಸಿತದಲ್ಲಿ ಸಿಲುಕಿದ 500 ಪ್ರವಾಸಿಗರ ರಕ್ಷಿಸಿದ ಭಾರತೀಯ ಸೇನೆ

Published : May 21, 2023, 08:17 AM IST
ಸಿಕ್ಕಿಂ: ಭೂಕುಸಿತದಲ್ಲಿ ಸಿಲುಕಿದ 500 ಪ್ರವಾಸಿಗರ ರಕ್ಷಿಸಿದ ಭಾರತೀಯ ಸೇನೆ

ಸಾರಾಂಶ

ಧಾರಾಕಾರ ಮಳೆ, ಭೂಕುಸಿತ ಮತ್ತು ರಸ್ತೆಗಳು ಬಂದ್‌ ಆಗಿದ್ದ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ 54 ಮಕ್ಕಳು ಸೇರಿ ಒಟ್ಟು 500 ಜನರನ್ನು ಭಾರತೀಯ ಸೇನೆ ರಕ್ಷಿಸಿದೆ.

ಗಾಂಗ್ಟಕ್‌: ಧಾರಾಕಾರ ಮಳೆ, ಭೂಕುಸಿತ ಮತ್ತು ರಸ್ತೆಗಳು ಬಂದ್‌ ಆಗಿದ್ದ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ 54 ಮಕ್ಕಳು ಸೇರಿ ಒಟ್ಟು 500 ಜನರನ್ನು ಭಾರತೀಯ ಸೇನೆ ರಕ್ಷಿಸಿದೆ.  ಶುಕ್ರವಾರ ರಾಜ್ಯದ ಲಾಚೆನ್‌ (Lachen), ಲಾಚುಂಗ್‌ (Lachung) ಮತ್ತು ಚುಂಗ್ತಾಂಗ್‌ಗಳಲ್ಲಿ (Chungthang) ಭಾರೀ ಮಳೆಯಾಗಿದ್ದು ಇದೇ ಲಾಚೆನ್‌ ಮತ್ತು ಲಾಚುಂಗ್‌ ಕಣಿವೆಗೆ ಪ್ರಯಾಣಿಸುತ್ತಿದ್ದ ಸುಮಾರು 500 ಪ್ರವಾಸಿಗರು ಮಾರ್ಗ ಮಧ್ಯದಲ್ಲಿನ ಭೂಕುಸಿತ ಮತ್ತು ರಸ್ತೆ ತಡೆಗಳಿಂದಾಗಿ ಚುಂಗ್ತಾಂಗ್‌ ಪ್ರದೇಶದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಈ ಪೈಕಿ 216 ಪುರುಷರು, 113 ಮಹಿಳೆಯರು ಮತ್ತು 54 ಮಕ್ಕಳಿದ್ದು ಇವರನ್ನು ಸೇನೆಯು ಕಾರ್ಯಾಚರಣೆಯ ಮೂಲಕ ಸುರಕ್ಷಿತವಾಗಿ ರಕ್ಷಣೆ ಮಾಡಿದೆ.

ಬಳಿಕ ಅವರನ್ನು ಮೂರು ಸೇನಾ ಕ್ಯಾಂಪ್‌ಗಳಿಗೆ (army camp) ಸ್ಥಳಾಂತರಿಸಿ ಅಲ್ಲಿ ಬಿಸಿ ಊಟ ಮತ್ತು ಬೆಚ್ಚಗಿನ ಉಡುಪುಗಳನ್ನು ನೀಡಲಾಯಿತು. ಸೇನಾ ಪಡೆಗಳ ತ್ವರಿತ ಕಾರ್ಯಾಚರಣೆಯು ಅನಾಹುತವನ್ನು ತಪ್ಪಿಸಿದೆ. ಆದಷ್ಟು ಬೇಗನೇ ರಸ್ತೆಗಳನ್ನು ತೆರವುಗೊಳಿಸುವ ಪ್ರಯತ್ನ ಸಾಗುತ್ತಿದೆ. ರಸ್ತೆ ಸುಗಮವಾಗುವವರೆಗೆ ಪ್ರವಾಸಿಗರಿಗೆ ಬೇಕಾದ ವೈದ್ಯಕೀಯ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು. ರಾತ್ರಿ ಪ್ರವಾಸಿಗರು ಮಲಗಲು ಸೈನಿಕರು ತಮ್ಮ ಬ್ಯಾರಕ್‌ಗಳನ್ನು ತೆರವುಗೊಳಿಸಿದ್ದಾರೆ ಎಂದು ಸೇನೆ ತಿಳಿಸಿದೆ.

ಮಕ್ಕಳನ್ನು ಮಾಡ್ಕೊಂಡ್ರೆ ವೇತನ ಬಡ್ತಿ ಗ್ಯಾರಂಟಿ, ಸಿಕ್ಕಿಂ ಸರ್ಕಾರದ ಹೊಸ ನಿಯಮ

ಸಿಕ್ಕಿಂ ನಾಥುಲಾ ಪಾಸ್ ಬಳಿ ಹಿಮಾಪಾತ, 7 ಪ್ರವಾಸಿಗರ ಸಾವು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೌಟು, ಕುಕ್ಕರ್ ಹಿಡಿದು ನಿಲ್ಲಿ, SIR ವಿರುದ್ಧ ಹೋರಾಟಕ್ಕೆ ಮಹಿಳೆಯರಿಗೆ ಸಿಎಂ ಮಮತಾ ಬ್ಯಾನರ್ಜಿ ಕರೆ
ಮಧುಮೇಹ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ: AIIMS ವೈದ್ಯರಿಂದ ಅದ್ಭುತ ಸಾಧನೆ, ಈಗ ಕೇವಲ 2 ಗಂಟೆಯಲ್ಲಿ ಗುಣಪಡಿಸಬಹುದು!