ಸೈನಿಕರಿಗಾಗಿ ವ್ಯಾಟ್ಸಾಪ್ ರೀತಿ ಮೆಸೇಜ್ ಆ್ಯಪ್ ಲಾಂಚ್ ಮಾಡಿದ ಭಾರತೀಯ ಸೇನೆ!

By Suvarna News  |  First Published Oct 30, 2020, 3:51 PM IST

ಭಾರತೀಯ ಸೈನಿಕರಿಗಾಗಿ ವಿಶೇಷ ಮೆಸೇಜಿಂಗ್ ಆ್ಯಪ್ ಬಿಡುಗಡೆ ಮಾಡಲಾಗಿದೆ. ಭಾರತೀಯ  ಸೇನೆ ಲಾಂಚ್ ಮಾಡಿರುವ ನೂತನ ಆ್ಯಪ್, ವ್ಯಾಟ್ಸಾಪ್, ಟೆಲಿಗ್ರಾಂ ರೀತಿಯ ಫೀಚರ್ಸ್ ಒಳಗೊಂಡಿದೆ.


ನವದೆಹಲಿ(ಅ.30);  ಯಾವುದೇ ಕಚೇರಿ, ಮಾರ್ಕೆಟಿಂಗ್, ಅಥವಾ ಸಣ್ಣ ಸಣ್ಣ ವ್ಯಾಪರಸ್ಥರು ಸೇರಿದಂತೆ ಎಲ್ಲರೂ ತಮ್ಮ ತಮ್ಮ ಗ್ರೂಪ್ ಮಾಡಿಕೊಂಡು ಕೆಲಸ ಕಾರ್ಯಗಳನ್ನು ವ್ಯಾಟ್ಸಾಪ್ ಅಥವಾ ಇತರ ಮೇಸೇಜ್ ಆ್ಯಪ್ ಮೂಲಕ ಸಂವಹನ ನಡೆಸಲಾಗುತ್ತಿತ್ತು. ಮಾಹಿತಿ ಹಂಚಿಕೊಳ್ಳಲಾಗುತ್ತಿತ್ತು. ಇದಕ್ಕೆ ಭಾರತೀಯ ಸೇನೆ ಕೂಡ ಹೊರತಾಗಿರಲಿಲ್ಲ.  ಆದರೆ ಸೈಬರ್ ದಾಳಿ, ಮಾಹಿತಿ ಕದಿಯುವಿಕೆಗಳಿಂದ ಇದೀಗ ಭಾರತೀಯ ಸೇನೆ ಸೈನಿಕರಾಗಿ ವಿಶೇಷ ಆ್ಯಪ್ ಲಾಂಚ್ ಮಾಡಿದೆ.

ಕಾಶ್ಮೀರ ಎನ್‌ಕೌಂಟರ್‌: 2 ದಿನದಲ್ಲಿ ಐವರು ಉಗ್ರಗಾಮಿಗಳು ಹತ!

Latest Videos

undefined

ಮೆಸೇಜ್, ವಾಯ್ಸ್ ಮೆಸೇಜ್, ವಿಡಿಯೋ ಕಾಲ್ ಸೇರಿದಂತೆ ಹಲವು ಫೀಚರ್ಸ್ ಒಳಗೊಂಡ SAI ಆ್ಯಪ್  ಬಿಡುಗಡೆ ಮಾಡಿದೆ. ಭಾರತೀಯ ಸೇನೆ ಅಭಿವೃದ್ಧಿ ಪಡಿಸಿದ ನೂತನ ಆ್ಯಪ್ ಹೆಚ್ಚು ಸುರಕ್ಷಿತವಾಗಿದೆ ಎಂದು ಸೇನೆ ಹೇಳಿದೆ.  ಸ್ಥಳೀಯ ಸರ್ವರ್‌ಗಳಲ್ಲಿ SAI ಆ್ಯಪ್ ಮಾಹಿತಿಗಳು ಶೇಖರಣೆಗೊಳ್ಳಲಿದೆ. 

ವ್ಯಾಟ್ಸಾಪ್, ಟೆಲಿಗ್ರಾಂ ರೀತಿ ನೂತನ ಆ್ಯಪ್ ಕಾರ್ಯನಿರ್ವಹಿಸಲಿದೆ.  ಇಂಟರ್ನೆಟ್‌ನಲ್ಲಿ ಸುರಕ್ಷಿತ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿದೆ. ಈ ಅಪ್ಲಿಕೇಶನ್ ಅಂತರ್ಜಾಲದಲ್ಲಿ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ಗಾಗಿ ಎಂಡ್ ಟು ಎಂಡ್ ಸುರಕ್ಷಿತ ಧ್ವನಿ, ಪಠ್ಯ ಮತ್ತು ವಿಡಿಯೋ ಕರೆ ಸೇವೆಗಳನ್ನು ಬೆಂಬಲಿಸುತ್ತದೆ ಭಾರತೀಯ ಸೇನೆ ಪ್ರಕಟಣೆಯಲ್ಲಿ ಹೇಳಿದೆ.
 

click me!