ವಾಯುಸೇನೆಯ ತರಬೇತಿ ವಿಮಾನ ಪತನ : ಇಬ್ಬರು ಪೈಲಟ್‌ಗಳ ದಾರುಣ ಸಾವು

By Anusha KbFirst Published Dec 4, 2023, 12:13 PM IST
Highlights

ತೆಲಂಗಾಣದ ಮೇದಕ್‌ನಲ್ಲಿ Indian Airforceಗೆ ಸೇರಿದ ತರಬೇತಿ ವಿಮಾನವೊಂದು ಪತನಗೊಂಡ ಪರಿಣಾಮ ಅದರಲ್ಲಿದ್ದ ಇಬ್ಬರು ಭಾರತೀಯ ವಾಯುಸೇನೆಯ ಪೈಲಟ್‌ಗಳು ಸಾವನ್ನಪ್ಪಿದ್ದಾರೆ.

ಮೇದಕ್: ತೆಲಂಗಾಣದ ಮೇದಕ್‌ನಲ್ಲಿ ವಾಯುಸೇನೆಗೆ ಸೇರಿದ ತರಬೇತಿ ವಿಮಾನವೊಂದು ಪತನಗೊಂಡ ಪರಿಣಾಮ ಅದರಲ್ಲಿದ್ದ ಇಬ್ಬರು ಭಾರತೀಯ ವಾಯುಸೇನೆಯ ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ಯಾವ ಕಾರಣದಿಂದ ಈ ದುರಂತ ಸಂಭವಿಸಿದೆ ಎಂಬುದನ್ನು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ. 

ಈ ನತದೃಷ್ಟ ತರಬೇತಿ ವಿಮಾನವೂ ಹೈದರಾಬಾದ್‌ನಲ್ಲಿರುವ ಏರ್ಪೋರ್ಸ್‌ನ ವಾಯುನೆಲೆಯಿಂದ ದೈನಂದಿನ ತರಬೇತಿಗಾಗಿ ಟೇಕಾಫ್ ಆಗಿತ್ತು.  ಇದಾಗಿ ಸ್ವಲ್ಪ ಹೊತ್ತಿನಲ್ಲಿ ವಿಮಾನ ಪತನಗೊಂಡಿದ್ದು, ಇಬ್ಬರು ಪೈಲಟ್‌ಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಒಬ್ಬರು ತರಬೇತಿದಾರ ಪೈಲಟ್ ಹಾಗೂ ಮತ್ತೊಬ್ಬ ಟ್ರೈನಿ ಪೈಲೆಟ್ ಈ ವಿಮಾನದಲ್ಲಿದ್ದು ಇಬ್ಬರೂ ದುರಂತದಲ್ಲಿ ಮಡಿದಿದ್ದಾರೆ ಎಂದು ಭಾರತೀಯ ವಾಯುಸೇನೆ ಹೇಳಿದೆ. 

Latest Videos

ರಕ್ಷಣಾ ವಲಯದಲ್ಲಿ ಭಾರತದ ಮಹತ್ತರ ಸಾಧನೆ: ಮೇಕ್ ಇನ್ ಇಂಡಿಯಾಗೆ ಮೆಗಾ ಸಕ್ಸಸ್..!

ಈ ಬಗ್ಗೆ ಭಾರತೀಯ ವಾಯುಸೇನೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಒಂದು ಪಿಲಟಸ್ ಪಿಸಿ 7ಎಂಕೆ II (Pilatus PC 7 Mk II) ವಿಮಾನವೂ ದೈನಂದಿನ ತರಬೇತಿಗಾಗಿ ಹೈದರಾಬಾದ್‌ನ ವಾಯುನೆಲೆಯಿಂದ ಟೇಕಾಫ್ ಆಗಿದ್ದು ನಂತರ ಪತನಗೊಂಡಿದೆ.  ಈ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅತೀವವಾದ ನೋವಿನೊಂದಿಗೆ ಖಚಿತಪಡಿಸುತ್ತಿದ್ದೇವೆ ಎಂದು ಭಾರತೀಯ ವಾಯುಸೇನೆ ಹೇಳಿದೆ. 

ಭಾರತೀಯ ವಾಯುಸೇನೆ @91: 72 ವರ್ಷಗಳ ಬಳಿಕ ಭಾರತೀಯ ಏರ್‌ಪೋರ್ಸ್‌ಗೆ ಹೊಸ ಧ್ವಜ

ಈ ದುರಂತದಲ್ಲಿ ಯಾವುದೇ ಸಾರ್ವಜನಿಕ ಆಸ್ತಿಗೆ ಹಾನಿಯಾಗಿಲ್ಲ, ಈ ಘಟನೆಗೆ ಸಂಬಂಧಿಸಿದಂತೆ ಕೋರ್ಟ್ ತನಿಖೆಗೆ ಆದೇಶಿಸಲಾಗಿದೆ ಎಂದು ಏರ್‌ಪೋರ್ಸ್ ಪ್ರಕಟಣೆಯಲ್ಲಿ ಹೇಳಿದೆ. ಘಟನೆಗೆ ರಕ್ಷಣ ಸಚಿವ ರಾಜನಾಥ್ ಸಿಂಗ್ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್ ಸಮೀಪ ನಡೆದ ವಿಮಾನ ದುರಂತದಲ್ಲಿ ಇಬ್ಬರು ಪೈಲಟ್‌ಗಳು ಪ್ರಾಣ ಕಳೆದುಕೊಂಡಿದ್ದರಿಂದ ತೀವ್ರ ನೋವಾಗಿದ್ದು, ಸಂತ್ರಸ್ತರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. 

click me!