ಆಗಸದಲ್ಲಿ ಹಾರುವಾಗ IAF ಯುದ್ಧವಿಮಾನದಿಂದ ಬಿದ್ದ ಭಾರೀ ನಿಗೂಢ ವಸ್ತು, ಮನೆ ಪುಡಿಪುಡಿ!

Published : Apr 25, 2025, 06:47 PM ISTUpdated : Apr 25, 2025, 06:51 PM IST
ಆಗಸದಲ್ಲಿ ಹಾರುವಾಗ IAF ಯುದ್ಧವಿಮಾನದಿಂದ ಬಿದ್ದ ಭಾರೀ ನಿಗೂಢ ವಸ್ತು, ಮನೆ ಪುಡಿಪುಡಿ!

ಸಾರಾಂಶ

ಶಿವಪುರಿಯಲ್ಲಿ ವಾಯುಪಡೆಯ ವಿಮಾನದಿಂದ ಆಕಸ್ಮಿಕವಾಗಿ ಭಾಗವೊಂದು ಬಿದ್ದು ಮನೆಗೆ ಹಾನಿಯಾಗಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ. ವಾಯುಪಡೆ ವಿಷಾದ ವ್ಯಕ್ತಪಡಿಸಿ ತನಿಖೆ ಆರಂಭಿಸಿದೆ. ಬಿದ್ದ ವಸ್ತು ಗಟ್ಟಿಯಾಗಿದ್ದು, ಸುಟ್ಟ ಗುರುತುಗಳಿವೆ. ತಜ್ಞರ ತಂಡ ಪರಿಶೀಲಿಸುತ್ತಿದೆ.

ಭೋಪಾಲ್‌ (ಏ.25): ಮಧ್ಯಪ್ರದೇಶದ ಶಿವಪುರಿಯ  ಪಿಚೋರೆ ಪಟ್ಟಣದಲ್ಲಿ ಭಾರತೀಯ ವಾಯುಪಡೆಯ ಯುದ್ಧವಿಮಾನದಲ್ಲಿ ಭಾರೀ ಪ್ರಮಾಣದ ಲೋಹದ ವಸ್ತುವೊಂದು ಬಿದ್ದಿದ್ದು, ಇದರಿಂದ ಮನೆಗೆ ಭಾರೀ ಹಾನಿಯಾಗಿದೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲವಾದರೂ, ಮನೆಯ ಎರಡು ಕೋಣೆಗಳು ಭಾರೀ ಪ್ರಮಾಣದಲ್ಲಿ ಹಾನಿಗೆ ಒಳಗಾಗಿದೆ.

ಈ ಬಗ್ಗೆ ವಿಷಾದ ವ್ಯಕ್ತಪಡಿಸಿ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ಐಎಎಫ್‌, 'ಶಿವಪುರಿ ಬಳಿಯ ಐಎಎಫ್ ವಿಮಾನದಿಂದ ಸ್ಫೋಟಕವಲ್ಲದ ಏರಿಯಲ್‌ ಸ್ಟೋರ್‌ (ವಿಮಾನದಲ್ಲಿರುವ ವಸ್ತು) ಆಕಸ್ಮಿಕವಾಗಿ ಬಿದ್ದಿತ್ತು. ಇದರಿಂದ ನೆಲದ ಮೇಲಿನ ಆಸ್ತಿಪಾಸ್ತಿಗೆ ಉಂಟಾದ ಹಾನಿಗೆ ಐಎಎಫ್ ವಿಷಾದ ವ್ಯಕ್ತಪಡಿಸಿದ್ದು, ಘಟನೆಯ ಬಗ್ಗೆ ತನಿಖೆ ಆರಂಭಿಸಿದೆ' ಎಂದು ಪೋಸ್ಟ್‌ ಮಾಡಿದೆ.'

ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೆಳಿಗ್ಗೆ 11 ಗಂಟೆ ಸುಮಾರಿಗೆ ಶಿಕ್ಷಕ ಮನೋಜ್ ಸಾಗರ್ ಅವರ ಮನೆಯ ಛಾವಣಿಯ ಮೇಲೆ ಗುರುತೇ ಸಿಗದಂತಿದ್ದ ಭಾರವಾದ ವಸ್ತುವೊಂದು ಬಿದ್ದು, ಎರಡು ಕೊಠಡಿಗಳು ಸಂಪೂರ್ಣವಾಗಿ ಹಾನಿಗೊಳಗಾದವು. ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಅವಶೇಷಗಳು ಬಿದ್ದವು.

ಸಾಗರ್ ತನ್ನ ಮಕ್ಕಳೊಂದಿಗೆ ಮನೆಯೊಳಗೆ ಊಟ ಮಾಡುತ್ತಿದ್ದಾಗ ಮತ್ತು ಅವರ ಪತ್ನಿ ಅಡುಗೆಮನೆಯಲ್ಲಿದ್ದಾಗ, ದೊಡ್ಡ ಸ್ಫೋಟದೊಂದಿಗೆ ಛಾವಣಿ ಒಡೆದು ಅಂಗಳದಲ್ಲಿ 8 ರಿಂದ 10 ಅಡಿ ಆಳದ ಹೊಂಡ ರೂಪುಗೊಂಡಿತು. ಸ್ಫೋಟದಿಂದ ಉಂಟಾದ ಕಂಪನಗಳು ಅಕ್ಕಪಕ್ಕದ ಮನೆಗಳಲ್ಲೂ ಅನುಭವಕ್ಕೆ ಬಂದವು.

"ಮನೋಜ್ ಸಾಗರ್ ಅವರ ಮನೆಯ ಮೇಲೆ ವಾಯುಪಡೆಯ ಜೆಟ್‌ ಆಕಾಶ ಮಾರ್ಗದಲ್ಲಿ ಹಾರುವಾಗ ಭಾರವಾದ ಲೋಹದ ವಸ್ತು ಬಿದ್ದಿದೆ... ಇದರಿಂದಾಗಿ ಎರಡು ಹೊರ ಕೊಠಡಿಗಳು ಹಾನಿಗೊಳಗಾಗಿವೆ. ಮನೆಯಲ್ಲಿ ನಾಲ್ವರು ಸದಸ್ಯರಿದ್ದರು, ಎಲ್ಲರೂ ಸುರಕ್ಷಿತರಾಗಿದ್ದಾರೆ. ಪೊಲೀಸರು ಮತ್ತು ಆಡಳಿತ ತಂಡ ಸ್ಥಳದಲ್ಲಿದೆ" ಎಂದು ಶಿವಪುರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮನ್ ಸಿಂಗ್ ರಾಥೋಡ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಡೀಸೆಲ್‌, ಜೆಟ್‌ ಫ್ಯುಯೆಲ್‌ ಸ್ಟಾಕ್‌ ಇರಿಸಿಕೊಳ್ಳಿ, ರಿಫೈನರಿಗಳಿಗೆ ಸೂಚಿಸಿದ ಪಾಕಿಸ್ತಾನ ಸರ್ಕಾರ!

ಈ ಘಟನೆಯನ್ನು ಐಎಎಫ್ ಮತ್ತು ಇತರ ಸಂಸ್ಥೆಗಳ ಸಮನ್ವಯದೊಂದಿಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಆದರೆ, ತನಿಖೆಯ ನಂತರವೇ ಆ ವಸ್ತು ಎಲ್ಲಿಂದ ಬಂತು ಎಂಬುದನ್ನು ಖಚಿತಪಡಿಸಿಕೊಳ್ಳಬಹುದು ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಪ್ರಶಾಂತ್ ಶರ್ಮಾ ಹೇಳಿದ್ದಾರೆ. ಅದು "ಅತ್ಯಂತ ಗಟ್ಟಿಯಾಗಿ" ಇರುವ ವಸ್ತು ಮತ್ತು ಸುಟ್ಟ ಗುರುತುಗಳನ್ನು ಹೊಂದಿತ್ತು ಎಂದು ಅವರು ಹೇಳಿದರು. "(ಐಎಎಫ್‌ನ) ಗ್ವಾಲಿಯರ್ ವಾಯುನೆಲೆಯನ್ನು ಸಂಪರ್ಕಿಸಲಾಗಿದೆ. ಅಲ್ಲಿಂದ ತಜ್ಞರ ತಂಡ ಬಂದ ನಂತರವೇ, ಈ ವಸ್ತು ಯಾವುದು ಮತ್ತು ಅದು ಎಲ್ಲಿಂದ ಬಿದ್ದಿದೆ ಎಂಬುದನ್ನು ದೃಢಪಡಿಸಬಹುದು" ಎಂದು ಶರ್ಮಾ ಹೇಳಿದ್ದಾರೆ.

ಭದ್ರತಾ ಲೋಪ ಒಪ್ಪಿಕೊಂಡ ಮೋದಿ ಸರ್ಕಾರ, ಸರ್ಕಾರದ ಯಾವುದೇ ನಿರ್ಧಾರಕ್ಕೂ ನಮ್ಮ ಬೆಂಬಲ ಎಂದ ವಿಪಕ್ಷ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ
ಮಾಡೆಲ್ ಮಗಳ ಯಶಸ್ಸು: ಮಾಲ್‌ನಲ್ಲಿ ಬಿಲ್‌ಬೋರ್ಡ್ ಮೇಲೆ ಮಗಳ ಫೋಟೋ ನೋಡಿ ಭಾವುಕರಾದ ಪೋಷಕರು