62ರ ಯುದ್ಧಕ್ಕಿಂತ ಹೆಚ್ಚು ಹಾನಿ ಭಾರತಕ್ಕೆ ಮಾಡ್ತೀವಿ: ಚೀನಾ!

By Kannadaprabha NewsFirst Published Sep 2, 2020, 7:31 AM IST
Highlights

62ರ ಯುದ್ಧಕ್ಕಿಂತ ಹೆಚ್ಚು ಹಾನಿ ಭಾರತಕ್ಕೆ ಮಾಡ್ತೀವಿ: ಚೀನಾ| ಅಮೆರಿಕ ಬೆಂಬಲಕ್ಕೆ ಬರುತ್ತೆಂಬ ಭ್ರಮೆ ಬೇಡ| ಚೀನಾ ಸರ್ಕಾರದ ಮುಖವಾಣಿ ಪತ್ರಿಕೆ ಗುಡುಗು

ಶಾಂಘೈ(ಸೆ.02): ಲಡಾಖ್‌ ಗಡಿಯಲ್ಲಿ ಭಾರತ- ಚೀನಾ ನಡುವೆ ಸಂಘರ್ಷಮಯ ವಾತಾವರಣ ಮುಂದುವರಿದಿರುವಾಗಲೇ, ಭಾರತ ಏನಾದರೂ ತಂಟೆಗೆ ಬಂದರೆ 1962ರ ಯುದ್ಧದಲ್ಲಿ ಆದದ್ದಕ್ಕಿಂತ ಹೆಚ್ಚು ನಷ್ಟವನ್ನು ಉಂಟು ಮಾಡುವುದಾಗಿ ಭಾರತಕ್ಕೆ ಚೀನಾ ಎಚ್ಚರಿಕೆ ನೀಡಿದೆ.

ಪ್ಯಾಂಗಾಂಗ್ ಲೇಕ್ ಬಳಿ ಚೀನಾ ಖ್ಯಾತೆ; ಹಿರಿಯ ಅಧಿಕಾರಿಗಳ ಜೊತೆ ಅಜಿತ್ ದೋವಲ್ ಸಭೆ!

ಚೀನಾ ಸರ್ಕಾರದ ಮುಖವಾಣಿಯಾಗಿರುವ ‘ಗ್ಲೋಬಲ್‌ ಟೈಮ್ಸ್‌’ನಲ್ಲಿ ಈ ಕುರಿತು ಸಂಪಾದಕೀಯ ಬರೆದು ತೀಕ್ಷ$್ಣ ಎಚ್ಚರಿಕೆಯನ್ನು ನೀಡಲಾಗಿದೆ. ಭಾರತ ಶಕ್ತಿಶಾಲಿ ಚೀನಾವನ್ನು ಎದುರು ಹಾಕಿಕೊಳ್ಳುತ್ತಿದೆ. ತನಗೆ ಅಮೆರಿಕದಿಂದ ಬೆಂಬಲ ಸಿಗಲಿದೆ ಎಂಬ ಭ್ರಮೆಯನ್ನು ಭಾರತ ಕಾಣುವುದು ಬೇಡ. ನಮ್ಮ ಜೊತೆಗೆ ಭಾರತಕ್ಕೆ ಸ್ಪರ್ಧೆಯೇ ಬೇಕೆಂದಾದರೆ, ಚೀನಾದ ಬಳಿ ಭಾರತಕ್ಕಿಂತ ಹೆಚ್ಚು ಸಾಮರ್ಥ್ಯ ಹಾಗೂ ಸಲಕರಣೆಗಳಿವೆ. ಭಾರತ ತನ್ನ ಸೇನಾ ಸಾಮರ್ಥ್ಯ ಪ್ರದರ್ಶಿಸಲು ಬಂದರೆ ಚೀನಾದ ಸೇನೆ ಖಂಡಿತ ಭಾರತದ ಸೇನೆಗೆ 1962ರಲ್ಲಿ ಉಂಟುಮಾಡಿದ್ದಕ್ಕಿಂತ ಹೆಚ್ಚು ನಷ್ಟಉಂಟುಮಾಡುವುದು ನಿಶ್ಚಿತ ಎಂದು ಪತ್ರಿಕೆ ಗುಡುಗಿದೆ.

"

ಚೀನಾ ಸಭ್ಯತೆ ಇಲ್ಲದ ಒರಟು ಕೋಂಡಗಿ; ಡ್ರ್ಯಾಗನ್ ರಾಷ್ಟ್ರದ ಮೇಲೆ ಹರಿಹಾಯ್ದ ಜೆಕ್ ಗಣರಾಜ್ಯ!

ಚೀನಾದ ಜೊತೆಗೆ ಭಾರತ ಸ್ಪರ್ಧೆಗೆ ಬಿದ್ದರೆ ಆ ದೇಶಕ್ಕೆ ಹಿಂದೆಂದಿಗಿಂತ ಹೆಚ್ಚು ನಷ್ಟಉಂಟುಮಾಡುವ ಶಕ್ತಿ ಚೀನಾಕ್ಕಿದೆ. ಗಡಿಯಲ್ಲಿ ಭಾರತದ ಯೋಧರೇ ಮೊದಲಿಗೆ ವಿಧ್ವಂಸಕ ಕೃತ್ಯಕ್ಕೆ ಕೈಹಾಕಿದ್ದಾರೆ. ಈ ಬಾರಿ ಬಿಕ್ಕಟ್ಟನ್ನು ಆರಂಭಿಸಿರುವುದೇ ಭಾರತೀಯರು ಎಂದು ಪತ್ರಿಕೆ ದೂರಿದೆ.

click me!