ಮುಂದೊಂದು ದಿನ ಸಂಪೂರ್ಣ ಕಾಶ್ಮೀರ ನಮ್ಮ ವಶವಾಗಲಿದೆ: ವಾಯುಪಡೆ ಅಧಿಕಾರಿ!

By Kannadaprabha News  |  First Published Oct 28, 2021, 11:37 AM IST

*ಪಾಕ್‌ ಆಕ್ರಮಿತ ಕಾಶ್ಮೀರ ಭಾರತದ ವಶವಾಗಲಿದೆ :
*ಆರ್ಥಿಕವಾಗಿ ಬೆಳೆಯಬೇಕಾದ ರಾಷ್ಟ್ರವು ಬಲಿಷ್ಠ ಸೇನೆಯನ್ನು ಹೊಂದಿರಬೇಕು!
*ಈ ಕುರಿತು ಪ್ರಸ್ತುತ ಯಾವುದೇ ಕಾರ್ಯಾಚರಣೆಯನ್ನು ರೂಪಿಸಿಲ್ಲ :ವಾಯುಪಡೆ ಅಧಿಕಾರಿ


ಶ್ರೀನಗರ (ಅ. 28 ): ಪಾಕ್‌ ಆಕ್ರಮಿತ ಕಾಶ್ಮೀರ (Pak Occupied Kashmir) ಮುಂದೊಂದು ದಿನ ಸಂಪೂರ್ಣವಾಗಿ ಭಾರತದ ವಶವಾಗಲಿದೆ ಎಂದು ಭಾರತೀಯ ವಾಯುಪಡೆಯ ಪಶ್ಚಿಮ ವಿಭಾಗದ ಮುಖ್ಯಸ್ಥ ಏರ್‌ ಮಾರ್ಷಲ್‌ ಅಮಿತ್‌ ದೇವ್‌ (Air Marshal Amit Dev) ಹೇಳಿದ್ದಾರೆ. ಕಾಶ್ಮೀರದಲ್ಲಿ ವಾಯುಪಡೆ ಇಳಿದ 75ನೇ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರದ ಭಾಗಗಳನ್ನು ಹಿಂದಕ್ಕೆ ಪಡೆಯುವ ಕುರಿತು ಪ್ರಸ್ತುತ ಯಾವುದೇ ಕಾರ್ಯಾಚರಣೆಯನ್ನು ರೂಪಿಸಿಲ್ಲ. ಆದರೆ ಒಂದು ದಿನ ಪಿಒಕೆ ಭಾರತದ ವಶವಾಗಲಿದೆ. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಜನರನ್ನು ಪಾಕಿಸ್ತಾನ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಭಾರತ ವಿಭಜನೆಯಾದ ನಂತರ 1947ರ ಅಕ್ಟೋಬರ್‌ 27ರಂದು ಮೊದಲ ಬಾರಿ ವಾಯುಪಡೆ ಕಾಶ್ಮೀರದಲ್ಲಿ ಕರ್ತವ್ಯ ಆರಂಭಿಸಿತ್ತು.

“ಇಡೀ ಕಾಶ್ಮೀರ ಒಂದೇ, ರಾಷ್ಟ್ರ ಒಂದೇ. ಎರಡೂ ಕಡೆಯ ಜನರು ಸಮಾನ ಭಾವನೆಗಳನ್ನು ಹೊಂದಿದ್ದಾರೆ. ಇಂದು ಅಥವಾ ನಾಳೆ, ರಾಷ್ಟ್ರಗಳು ಒಂದಾಗುತ್ತವೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಲಿದೆ. ಸದ್ಯಕ್ಕೆ ನಮ್ಮ ಬಳಿ ಯಾವುದೇ ಯೋಜನೆ ಇಲ್ಲ, ಆದರೆ ಪಾಕ್ ಆಕ್ರಮಿತ ಕಾಶ್ಮೀರದ ಜನರನ್ನು ಪಾಕಿಸ್ತಾನಿಗಳು ನ್ಯಾಯಯುತವಾಗಿ ನಡೆಸಿಕೊಳ್ಳುತ್ತಿಲ್ಲ, ಹಾಗಾಗಿ ದೇವರ ಇಚ್ಛೆ ಇದ್ದರೆ ನಾವು ಯೋಜನೆ ರೂಪಿಸಲು ಸಿದ್ಧ" ಎಂದು ಅಮಿತ್‌ ದೇವ್‌ ಹೇಳಿದ್ದಾರೆ.

Tap to resize

Latest Videos

undefined

ಚೀನಾದಿಂದ ಏಕಪಕ್ಷೀಯ ನಿರ್ಧಾರ; ನೂತನ ಭೂ ಗಡಿ ಕಾನೂನಿಗೆ ಭಾರತ ವಿರೋಧ!

IAF ಹಲವು ಸವಾಲುಗಳನ್ನು ಎದುರಿಸುತ್ತಿದೆ, ಆದರೆ ಅದು ಎದುರಿಸುತ್ತಿರುವ ಮುಖ್ಯ ಸವಾಲು ತಂತ್ರಜ್ಞಾನವಾಗಿದೆ (Technology) ಎಂದು ಅಮಿತ್‌ ದೇವ್‌ ಹೇಳಿದ್ದಾರೆ. "ಜಗತ್ತಿನಲ್ಲಿ ತಂತ್ರಜ್ಞಾನ ಕ್ಷೇತ್ರವು ಅತೀ ವೇಗದಲ್ಲಿ ಬದಲಾವಣೆಯಾಗುತ್ತಿದೆ, ನಾವು ಅದರೊಂದಿಗೆ ಹೆಜ್ಜೆ ಹಾಕಬೇಕು. ಆರ್ಥಿಕವಾಗಿ ಬೆಳೆಯಬೇಕಾದ ಯಾವುದೇ ರಾಷ್ಟ್ರವು ಬಲಿಷ್ಠ ಸೇನೆಯನ್ನು (Strong Army) ಹೊಂದಿರಬೇಕು. ಹಾಗಾಗಿ ಮುಂಬರುವ ವರ್ಷಗಳಲ್ಲಿ ನಾವು ನಮ್ಮ ಜವಾಬ್ದಾರಿಯನ್ನು ಪೂರ್ಣಗೊಳಿಸಬೇಕು ಮತ್ತು ಅದಕ್ಕೆ ನಾವು ಯಾವಾಗಲೂ ಸವಾಲಿಗೆ ಸಿದ್ಧರಿದ್ದೇವೆ ಎಂದು ಅವರು ಹೇಳಿದರು.

ಉಗ್ರ ದಾಳಿ ಸ್ಥಳದಲ್ಲೇ ತಂಗಿ ಯೋಧರಿಗೆ ಅಮಿತ ಗೌರವ!

ಜಮ್ಮು ಮತ್ತು ಕಾಶ್ಮೀರದ (Jammu and Kasmir) ಅಂದಿನ ಆಡಳಿತಗಾರ ಮಹಾರಾಜ ಹರಿ ಸಿಂಗ್ (Maharaja Hari Singh) ಅವರು ಭಾರತದೊಂದಿಗೆ ವಿಲೀನದ ಒಪ್ಪಂದಕ್ಕೆ ಸಹಿ ಹಾಕಿದ್ದರು. ನಂತರ, ಪಾಕಿಸ್ತಾನಿ ಬುಡಕಟ್ಟು ಜನಾಂಗದವರು ದಾಳಿ ನಡೆಸಿದ ಮರುದಿನವೇ ಭಾರತೀಯ ಪಡೆಗಳು ಅಕ್ಟೋಬರ್ 27, 1947 ರಂದು ಕಣಿವೆಗೆ ಬಂದಿಳಿದ್ದವು. "ಒಪ್ಪಂದದ ಪತ್ರಕ್ಕೆ ಸಹಿ ಹಾಕಿದ ನಂತರ, ನಾವು ನಮ್ಮ ಪಡೆಗಳನ್ನು ತಕ್ಷಣವೇ ಕಳುಹಿಸಿ  ಶ್ರೀನಗರದ ವಾಯುನೆಲೆಯನ್ನು ಉಳಿಸಿದ್ದೇವು.  ನಂತರ ಕಬಾಲಿಸ್ ರೂಪದಲ್ಲಿ (ಬುಡಕಟ್ಟು ಜನಾಂಗದವರು) ಬಂದ ಪಾಕಿಸ್ತಾನಿ ಸೇನೆಯ ವಿರುದ್ಧ ನಾವು ಮತ್ತಷ್ಟು ಆಕ್ರಮಣವನ್ನು ಪ್ರಾರಂಭಿಸಿ ಅವರನ್ನ ಹಿಂದಕ್ಕೆ ತಳ್ಳಿದ್ದೇವು. ವಿಶ್ವಸಂಸ್ಥೆ (United Nations) ಮಧ್ಯಪ್ರವೇಶಿಸದೇ ಇದ್ದಿದ್ದರೆ ಇಡೀ ಕಾಶ್ಮೀರ ಭಾರತಕ್ಕೆ ಸೇರುತ್ತಿತ್ತು ಎಂದು ಅಮಿತ್‌ ದೇವ್‌ ಹೇಳಿದರುಎಂದು ದೇವ್ ಹೇಳಿದರು.

ನೂತನ ಭೂ ಗಡಿ ಕಾನೂನಿಗೆ ಭಾರತ ವಿರೋಧ!

ಭೂ ಗಡಿಗೆ ಸಂಬಂಧಿಸಿದಂತೆ ನೂತನ ಕಾನೂನು(new land border law) ಜಾರಿಗೆ ತರುತ್ತಿರುವ ಚೀನಾದ(China) ನಡೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ನೆಪಮಾತ್ರಕ್ಕೆ ಗಡಿಯಲ್ಲಿ ಅಭಿವೃದ್ಧಿ ಎನ್ನುತ್ತಿರುವ ಚೀನಾ ಈ ವಿಚಾರದಲ್ಲಿ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿದೆ ಎಂದು ಭಾರತ(India) ಟೀಕಿಸಿದೆ.

ಹಣಕ್ಕಾಗಿ ದೇಶದ ಸಬ್‌ಮರೀನ್‌ ಡೇಟಾ ಲೀಕ್ ಮಾಡಿದ ಕಮಾಂಡರ್‌ ಸೇರಿ ಐವರ ಬಂಧನ

ಪೂರ್ವ ಲಡಾಖ್‌ ಗಡಿಯಲ್ಲಿ ಕಳೆದ 17 ತಿಂಗಳಿನಿಂದ ಸಂಘರ್ಷ ನಡೆಯುತ್ತಲೇ ಇದೆ. ಚೀನಾ ಈ ಬಗ್ಗೆ ಕ್ರಮ ಜರುಗಿಸದೇ ನೆಪ ಮಾತ್ರ ಹೇಳಿಕೊಂಡು ಕಾಲ ತಳ್ಳುತ್ತಿದೆ. ಅದಲ್ಲದೇ ಇದೀಗ ಹೊಸ ಕಾನೂನು ಜಾರಿ ಮಾಡಿ ಮತ್ತಷ್ಟುಬಿಕ್ಕಟ್ಟಿಗೆ ಕಾರಣವಾಗುತ್ತಿದೆ. ಗಡಿಯಲ್ಲಿ ನಂಬಿಕೆ, ಸೌಹಾರ್ಧತೆ ಅನ್ನೋದು ಎರಡೂ ರಾಷ್ಟ್ರಗಳಿಗೆ ಬಹುಮುಖ್ಯ, ಚೀನಾ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಿದೇಶಾಂಗ ಇಲಾಖೆ ವಕ್ತಾರ ಬಗ್ಚಿ ತಿಳಿಸಿದ್ದಾರೆ. ವಾಸ್ತವಿಕ ಗಡಿ ನಿಯಂತ್ರಣ ರೇಖೆ ಎರಡೂ ಕಡೆಯ ಸೂಕ್ಷ್ಮ ಪ್ರದೇಶಗಳಲಿ ಸುಮಾರು 50 ರಿಂದ 60 ಸಾವಿರ ಸೈನಿಕರು ಕಾವಲಿರುತ್ತಾರೆ.

click me!