60 ಕೋಟಿ ಡೋಸ್‌ ಲಸಿ​ಕೆ: ಹೊಸ ಮೈಲಿ​ಗ​ಲ್ಲು!

By Suvarna NewsFirst Published Aug 26, 2021, 10:10 AM IST
Highlights

* ಡಿಸೆಂಬರ್‌ ವೇಳೆಗೆ ಶೇ.32 ಮಂದಿಗೆ 2 ಡೋಸ್‌ ಲಸಿಕೆ

* 60 ಕೋಟಿ ಡೋಸ್‌ ಲಸಿ​ಕೆಯ ಮೈಲಿ​ಗ​ಲ್ಲು

ನವದೆಹಲಿ(ಆ.26): ದೇಶದ ಜನರನ್ನು ಕೊರೋನಾದಿಂದ ಬಚಾವ್‌ ಮಾಡಲು ಲಸಿಕೆ ಅಭಿಯಾನವನ್ನು ತೀವ್ರಗೊಳಿಸಿರುವ ಕೇಂದ್ರ ಸರ್ಕಾರ, ಬುಧ​ವಾ​ರ 60 ಕೋಟಿ ಡೋಸ್‌ ಲಸಿ​ಕೆಯ ಮೈಲಿ​ಗಲ್ಲು ದಾಟಿ​ದೆ.

ಈ ಬಗ್ಗೆ ಬುಧವಾರ ಟ್ವೀಟ್‌ ಮಾಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಈವರೆಗೆ ದೇಶದಲ್ಲಿ 60 ಕೋಟಿಗಿಂತ ಹೆಚ್ಚು ಡೋಸ್‌ ಲಸಿಕೆ ನೀಡಲಾಗಿದೆ. ಲಸಿಕೆ ಅಭಿಯಾನ ಯಶಸ್ವಿಗೊಳಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು’ ಎಂದಿದ್ದಾರೆ.

ದೇಶದಲ್ಲಿ ಲಸಿಕೆ ಅಭಿಯಾನ ಆರಂಭವಾದ ಮೊದಲ 85 ದಿನಗಳಲ್ಲಿ 10 ಕೋಟಿ ಡೋಸ್‌ ಲಸಿಕೆ ನೀಡಲಾಗಿತ್ತು. ಬಳಿಕ 45 ದಿನಗಳಲ್ಲಿ ಲಸಿಕೆ ಪಡೆದವರ ಸಂಖ್ಯೆ 20 ಕೋಟಿಗೆ ಹಾಗೂ ಮುಂದಿನ 29 ದಿನಗಳಲ್ಲಿ ಅದು 30 ಕೋಟಿಗೆ ಜಿಗಿದಿತ್ತು.

ಬಳಿಕ 24 ದಿನಗಳಲ್ಲಿ ಲಸಿಕೆ ಪಡೆದವರ ಒಟ್ಟು ಸಂಖ್ಯೆ 40 ಕೋಟಿಗೆ ಏರಿಕೆಯಾಗಿತ್ತು. ಮುಂದಿನ 20 ದಿನಗಳಲ್ಲಿ ಅಂದರೆ ಆ.6ರವರೆಗೆ ದೇಶದಲ್ಲಿ ಒಟ್ಟು 50 ಕೋಟಿ ಡೋಸ್‌ ಲಸಿಕೆ ನೀಡಲಾಗಿತ್ತು. ಇದೀಗ ಕೇವಲ 19 ದಿನಗಳಲ್ಲಿ ಡೋಸ್‌ ಸಂಖ್ಯೆ 60 ಕೋಟಿ ದಾಟಿದೆ.

ಇದೇ ವೇಗದಲ್ಲಿ ಲಸಿಕೆ ಅಭಿಯಾನ ಮುಂದುವರಿದ್ದಲ್ಲಿ 2021ರ ಡಿಸೆಂಬರ್‌ ವೇಳೆಗೆ ದೇಶದ ಶೇ.32ರಷ್ಟುಮಂದಿಗೆ ಪೂರ್ಣ ಪ್ರಮಾಣ(ಲಸಿಕೆಯ ಎರಡೂ ಡೋಸ್‌) ಲಸಿಕೆ ನೀಡಬಹುದು ಎಂದು ವರದಿಯೊಂದು ತಿಳಿಸಿದೆ.

click me!