
ನವದೆಹಲಿ(ಆ.26): 40 ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದ ಪುಲ್ವಾಮ ದಾಳಿಯ ಸಂಚುಕೋರರಾದ ಲಂಬೂ ಹಾಗೂ ಸಮೀರ್ ದಾರ್ ಜುಲೈ 31ರಂದು ಯೋಧರ ಗುಂಡಿಗೆ ಬಲಿಯಾದರು ಎಂದು ಭಾವಿಸಲಾಗಿತ್ತು. ಆದರೆ ದಾಳಿಯ ಪ್ರಮುಖ ರುವಾರಿ ಸಮೀರ್ ದಾರ್ ಬದುಕಿರುವುದಾಗಿ ಭದ್ರತಾ ಪಡೆ ಮೂಲಗಳು ಹೇಳಿದೆ.
ಜುಲೈ 31ರಂದು ಯೋಧರ ಗುಂಡಿಗೆ ಬಲಿಯಾದ ಇಬ್ಬರನ್ನು ಜೈಶ್-ಎ-ಮೊಹಮದ್ ಭಯೋತ್ಪಾದನಾ ಗುಂಪಿಗೆ ಸೇರಿದ ಮಹಮದ್ ಇಸ್ಮಾಲ್ ಅಲ್ವಿ ಅಲಿಯಾಸ್ ಲಂಬೂ ಹಾಗೂ ಸಮೀರ್ ದಾರ್ ಎಂದು ಗುರುತಿಸಲಾಗಿತ್ತು. ಆದರೆ ಲಂಬೂವಿನ ಜೊತೆ ಸಾವೀಗೀಡಾದದ್ದು ಬೇರೆ ವ್ಯಕ್ತಿ ಎಂಬುದು ಈಗ ಗೊತ್ತಾಗಿದೆ.
\ದಾಳಿಯ ರುವಾರಿ ಸಮೀರ್ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಜೈಶ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವುದರಿಂದ ಸಮೀರ್ ದಾರ್ ಅತಿ ಅಪಾಯಕಾರಿ ವ್ಯಕ್ತಿ ಎಂದು ಸೈನ್ಯದ ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ