ಅಮೆರಿಕ ಸಮರನೌಕೆಗಳ ಜತೆ ಭಾರತದ ನೌಕಾಪಡೆ ಜಂಟಿ ತಾಲೀಮು!

By Kannadaprabha NewsFirst Published Jul 22, 2020, 7:26 AM IST
Highlights

ಅಮೆರಿಕ ಸಮರನೌಕೆಗಳ ಜತೆ ಭಾರತದ ನೌಕಾಪಡೆ ಜಂಟಿ ತಾಲೀಮು| ಅಂಡಮಾನ್‌ ದ್ವೀಪದ ಆಚೆ ಜಂಟಿ ಅಭ್ಯಾಸ| ಚೀನಾ ಜತೆಗಿನ ಸಂಘರ್ಷದ ಬೆನ್ನಲ್ಲೇ ಈ ವಿದ್ಯಮಾನ| ವಿಶ್ವದ ದೊಡ್ಡ ಸಮರನೌಕೆ ‘ನಿವಿಟ್‌್ಜ’ ಜತೆ ಭಾರತದ ನೌಕೆಗಳ ತಾಲೀಮು

 

ನವದೆಹಲಿ

ಚೀನಾ ಜತೆಗಿನ ಗಡಿ ವಿವಾದ ತಾರಕಕ್ಕೇರಿರುವ ನಡುವೆಯೇ, ಅಂಡಮಾನ್‌-ನಿಕೋಬಾರ್‌ ದ್ವೀಪ ಸಮೂಹದ ಆಚೆ ಅಮೆರಿಕದ ‘ಯುಎಸ್‌ಎಸ್‌ ನಿವಿಟ್‌್ಜ’ ಯುದ್ಧವಿಮಾನ ವಾಹಕ ಹಡಗಿನ ನೇತೃತ್ವದ ನೌಕಾತಂಡದ ಜತೆ ಜತೆಗೆ ಭಾರತೀಯ ನೌಕಾಪಡೆಯ ಸಮರನೌಕೆಗಳು ‘ಜಂಟಿ ಸೇನಾ ತಾಲೀಮು’ ನಡೆಸಿವೆ.

ಭಾರತದ 4 ಮುಂಚೂಣಿ ಸಮರ ನೌಕೆಗಳು ಅಮೆರಿಕ ಸಮರನೌಕೆಗಳ ಜತೆ ‘ಪಾಸೆಕ್ಸ್‌’ ಹೆಸರಿನ ಈ ತಾಲೀಮಿನಲ್ಲಿ ಭಾಗವಹಿಸಿದವು. ಇಂಡೋ-ಪೆಸಿಫಿಕ್‌ ಸಾಗರ ವಲಯವನ್ನು ಮುಕ್ತವನ್ನಾಗಿರಿಸುವ ಉದ್ದೇಶದಿಂದ ಅಮೆರಿಕ ಸಮರನೌಕೆಗಳು ಈಗ ಹಿಂದೂ ಮಹಾಸಾಗರ ವಲಯದಲ್ಲಿ ನಿಯೋಜಿತವಾಗಿವೆ. ದಕ್ಷಿಣ ಚೀನಾ ಸಮುದ್ರದಿಂದ ಹಿಂದೂ ಮಹಾಸಾಗರದ ವಲಯದ ಮೂಲಕ ಅಮೆರಿಕ ಸಮರನೌಕೆಗಳು ಸಾಗುವ ವೇಳೆ ಈ ತಾಲೀಮು ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಯುಎಸ್‌ಎಸ್‌ ನಿಮಿಟ್‌್ಜ’- ವಿಶ್ವದ ಅತಿದೊಡ್ಡ ಸಮರ ನೌಕೆಯಾಗಿದೆ. ಇಂಥ ನೌಕೆಯ ಜತೆಗೆ ಭಾರತದ ಯುದ್ಧನೌಕೆಗಳು ತಾಲೀಮು ನಡೆಸಿರುವುದು ಸಹಜವಾಗಿಯೇ ವಿಶ್ವದ ಗಮನ ಇತ್ತ ತಿರುಗುವಂತೆ ಮಾಡಿದೆ.

ಯಾವ್ಯಾವ ನೌಕೆ ಭಾಗಿ

ಯುಎಸ್‌ಎಸ್‌ ನಿಮಿಟ್‌್ಜ ನೇತೃತ್ವದ ನೌಕಾಪಡೆ ತಂಡದಲ್ಲಿ ಕ್ಷಿಪಣಿ ವಾಹಕ ಯುಎಸ್‌ಎಸ್‌ ಪ್ರಿನ್ಸ್‌ಟನ್‌, ಕ್ಷಿಪಣಿ ನಾಶಕ ಯುಎಸ್‌ಎಸ್‌ ಸ್ಟೆರೆಟ್‌ ಹಾಗೂ ಯುಎಸ್‌ಎಸ್‌ ರಾಲ್‌್ಫ ಜಾನ್ಸನ್‌ ಸಮರನೌಕೆಗಳಿವೆ. ಇವುಗಳ ಜತೆ ಭಾರತದ ಮುಂಚೂಣಿ ಸಮರನೌಕೆಗಳಾದ ರಾಣಾ, ಸಹ್ಯಾದ್ರಿ, ಶಿವಾಲಿಕ್‌ ಹಾಗೂ ಕಮ್ತೋರಾ ನೌಕೆಗಳು ತಾಲೀಮಿನಲ್ಲಿ ಭಾಗವಹಿಸಿದ್ದವು.

ಏನೇನು ತಾಲೀಮು:

ಜಂಟಿ ತಾಲೀಮಿನ ವೇಳೆ ಅಮೆರಿಕ ಹಾಗೂ ಭಾರತದ ಯುದ್ಧನೌಕೆಗಳು ಪರಸ್ಪರ ಮಾಹಿತಿ ವಿನಿಮಯ, ತರಬೇತಿ, ವಾಯು ರಕ್ಷಣೆ- ಮೊದಲಾದ ಅಭ್ಯಾಸ ನಡೆಸಿದವು.

click me!