
ನವದೆಹಲಿ(ಮಾ.11): ನೆರೆಯ ಪಾಕಿಸ್ತಾನ ಹಾಗೂ ಚೀನಾದಿಂದ ಹೊಸ ಸವಾಲುಗಳು ಎದುರಾಗುತ್ತಿರುವ ನಡುವೆಯೇ ಅಮೆರಿಕದಿಂದ 30 ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ಖರೀದಿಸಲು ಭಾರತ ಸರ್ಕಾರ ಮುಂದಾಗಿದೆ. ಭೂಮಿ ಹಾಗೂ ಸಮುದ್ರದ ಮೇಲೆ ಕಾರಾರಯಚರಣೆ ನಡೆಸುವ ಸಾಮರ್ಥ್ಯ ಹೊಂದಿರುವ ಈ ಡ್ರೋನ್‌ಗಳು ಸೇನಾಪಡೆಗಳ ಸಾಮರ್ಥ್ಯವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುವ ವಿಶ್ವಾಸವನನು ಸೇನೆ ಹೊಂದಿದೆ.
ಈ ಖರೀದಿಗೆ ಭಾರತ ಸರ್ಕಾರ ಮುಂದಿನ ತಿಂಗಳು ಅನುಮೋದನೆ ನೀಡುವ ನಿರೀಕ್ಷೆಯಿದೆ. 300 ಕೋಟಿ ಡಾಲರ್ ವೆಚ್ಚದಲ್ಲಿ ಸ್ಯಾನ್ ಡಿಯಾಯೋ ಮೂಲದ ಜನರಲ್ ಅಟೋಮಿಕ್ಸ್ ಕಂಪನಿ ಸಿದ್ಧಪಡಿಸಿರುವ ಎಂಕ್ಯು-9ಬಿ ಪ್ರಿಡೇಟರ್ ಡ್ರೋನ್‌ಗಳನ್ನು ಭಾರತ ಖರೀದಿಸಲಿದೆ ಎಂದು ಮೂಲಗಳು ಹೇಳಿವೆ. ಆದರೆ ಈ ಬಗ್ಗೆ ಅಮೆರಿಕ ಸರ್ಕಾರ, ಭಾರತ ಸರ್ಕಾರ ಹಾಗೂ ಜನರಲ್ ಅಟೋಮಿಕ್ಸ್ ಕಂಪನಿ- ಯಾವುದೇ ಅಧಿಕೃತ ಹೇಳಿಕೆ ನೀಡಲು ನಿರಾಕರಿಸಿವೆ.
ಡ್ರೋನ್‌ಗಳನ್ನು ಈವರೆಗೆ ಕೇವಲ ಸರ್ವೇಕ್ಷಣೆಗೆ ಬಳಸಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ಭಾರತ ಖರೀದಿಸುತ್ತಿದ್ದು, ಭಾರತದ ರಕ್ಷಣಾ ಬಲ ಮತ್ತಷ್ಟುಹೆಚ್ಚಲಿದೆ ಎಂದು ವಿಶ್ಲೇಷಿಸಲಾಗಿದೆ.
ವಿಶೇಷತೆ ಏನು?:
ಎಂಕ್ಯು-9ಬಿ ಡ್ರೋನ್‌ಗಳು 48 ತಾಸು ಹಾರಾಟ ನಡೆಸಬಬಲ್ಲವು. 1700 ಕೇಜಿ ಪೇ ಲೋಡ್ ಹೊತ್ತೊಯ್ಯಬಲ್ಲವು. ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಸಂಚರಿಸುವ ಚೀನಾ ಯುದ್ಧ ಹಡಗುಗಳ ಮೇಲೆ ಈ ಡ್ರೋನ್‌ಗಳು ಹದ್ದಿನ ಕಣ್ಣು ಇಡಲು ಸಾಧ್ಯವಾಗಲಿದೆ. ಇದೇ ವೇಳೆ, ಭಾರತ-ಪಾಕಿಸ್ತಾನ ಗಡಿಯಲ್ಲಿ ಸೇನೆಗೆ ನಿಖರ ಗುರಿ ಇಡಲು ನರವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ