ಏಪ್ರಿಲ್‌ 1 ರಿಂದ ದೇಶದ ಪ್ರಖ್ಯಾತ ಸಿಸಿಟಿವಿ ಕಂಪನಿ Hikvision, TP-Link, Dahiya ಬ್ಯಾನ್‌!

Santosh Naik   | AFP
Published : Mar 30, 2026, 01:17 PM IST
China CCTV

ಸಾರಾಂಶ

ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ, ಭಾರತ ಸರ್ಕಾರವು ಏಪ್ರಿಲ್ 1 ರಿಂದ ಹಿಕ್-ವಿಷನ್, ದಹುವಾ ಮುಂತಾದ ಚೀನಾ ಮೂಲದ ಸಿಸಿಟಿವಿ ಕ್ಯಾಮೆರಾಗಳ ಮಾರಾಟವನ್ನು ನಿಷೇಧಿಸಲು ಮುಂದಾಗಿದೆ. ಹೊಸ STQC ಪ್ರಮಾಣೀಕರಣ ನಿಯಮಗಳ ಅಡಿಯಲ್ಲಿ ಚೀನಾ ಕಂಪನಿಗಳಿಗೆ ಅನುಮೋದನೆ ನಿರಾಕರಿಸಲಾಗುತ್ತಿದೆ.

ನವದೆಹಲಿ (ಮಾ.30): ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಭಾರತ ಸರ್ಕಾರವು ಚೀನಾದ ಸಿಸಿಟಿವಿ ಕ್ಯಾಮೆರಾ ಕಂಪನಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಏಪ್ರಿಲ್ 1 ರಿಂದ ಚೀನಾ ಮೂಲದ ಪ್ರಮುಖ ವೀಡಿಯೊ ಕಣ್ಗಾವಲು ಕಂಪನಿಗಳಾದ ಹಿಕ್-ವಿಷನ್ (Hikvision), ದಹುವಾ (Dahua) ಮತ್ತು ಟಿಪಿ-ಲಿಂಕ್ (TP-Link) ನಂತಹ ಇಂಟರ್ನೆಟ್ ಆಧಾರಿತ ಸಿಸಿಟಿವಿ ಕ್ಯಾಮೆರಾಗಳ ಮಾರಾಟವನ್ನು ನಿಷೇಧಿಸಲು ಸಿದ್ಧತೆ ನಡೆಸಲಾಗಿದೆ.

ಮುಂದಿನ ತಿಂಗಳಿನಿಂದ 'ಸ್ಟ್ಯಾಂಡರ್ಡೈಸೇಶನ್ ಟೆಸ್ಟಿಂಗ್ ಅಂಡ್ ಕ್ವಾಲಿಟಿ ಸರ್ಟಿಫಿಕೇಶನ್' (STQC) ಅಡಿಯಲ್ಲಿ ಹೊಸ ಪ್ರಮಾಣೀಕರಣ ನಿಯಮಗಳು ಜಾರಿಗೆ ಬರಲಿವೆ. ಇದರ ಅನ್ವಯ, ಯಾವುದೇ ಸಿಸಿಟಿವಿ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡುವ ಮೊದಲು ಸರ್ಕಾರದ ಕಡ್ಡಾಯ ಅನುಮೋದನೆ ಪಡೆಯಲೇಬೇಕು.

ವರದಿಗಳ ಪ್ರಕಾರ, ಈ ಚೀನೀ ಕಂಪನಿಗಳಿಗೆ ಮತ್ತು ಚೀನಾ ಮೂಲದ ಚಿಪ್‌ಸೆಟ್‌ಗಳನ್ನು ಬಳಸುವ ಯಾವುದೇ ಸಾಧನಗಳಿಗೆ ಕೇಂದ್ರ ಸರ್ಕಾರವು ಪ್ರಮಾಣೀಕರಣ (Certification) ನೀಡಲು ನಿರಾಕರಿಸುತ್ತಿದೆ. STQC ಅನುಮೋದನೆ ಇಲ್ಲದೆ, ಈ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸಲು ಸಾಧ್ಯವಿಲ್ಲ.

ಚೀನಾ ಕಂಪನಿಗಳಿಗೆ ಭಾರಿ ಹೊಡೆತ

ಒಂದು ಕಾಲದಲ್ಲಿ ಭಾರತದ ಸಿಸಿಟಿವಿ ಮಾರುಕಟ್ಟೆಯನ್ನು ಚೀನಾ ಕಂಪನಿಗಳೇ ಆಳುತ್ತಿದ್ದವು. ಕಳೆದ ವರ್ಷದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಮಾರಾಟವಾಗುವ ಒಟ್ಟು ಸಿಸಿಟಿವಿಗಳಲ್ಲಿ ಮೂರನೇ ಒಂದು ಭಾಗ ಚೀನಾ ಕಂಪನಿಗಳದ್ದೇ ಇತ್ತು. ಆದರೆ ಸರ್ಕಾರದ ಈ ಕ್ರಮವು ಚೀನಾ ಬ್ರ್ಯಾಂಡ್‌ಗಳಿಗೆ ದೊಡ್ಡ ಆಘಾತ ನೀಡಲಿದೆ.

ಭಾರತೀಯ ಬ್ರ್ಯಾಂಡ್‌ಗಳ ಅಧಿಪತ್ಯ

ಚೀನಾ ಕಂಪನಿಗಳ ಜಾಗವನ್ನು ಭಾರತೀಯ ಕಂಪನಿಗಳು ಅತ್ಯಂತ ವೇಗವಾಗಿ ತುಂಬುತ್ತಿವೆ. CP Plus, Qubo, Prama, Matrix ಮತ್ತು Sparsh ನಂತಹ ದೇಶೀಯ ಕಂಪನಿಗಳು ಮಾರುಕಟ್ಟೆಯಲ್ಲಿ ಅಗ್ರಸ್ಥಾನಕ್ಕೇರುತ್ತಿವೆ. ಈ ಕಂಪನಿಗಳು ಚೀನಾ ಬಿಡಿಭಾಗಗಳ ಬದಲಿಗೆ ತೈವಾನ್ ಚಿಪ್‌ಸೆಟ್‌ಗಳನ್ನು ಬಳಸುತ್ತಿವೆ ಮತ್ತು ತಮ್ಮದೇ ಆದ ಸಾಫ್ಟ್‌ವೇರ್ (Firmware) ಅಳವಡಿಸಿಕೊಂಡಿವೆ. ಕೌಂಟರ್‌ಪಾಯಿಂಟ್ ರಿಸರ್ಚ್  ಪ್ರಕಾರ, ಫೆಬ್ರವರಿ ವೇಳೆಗೆ ಭಾರತದ ಶೇ. 80ಕ್ಕೂ ಹೆಚ್ಚು ಮಾರುಕಟ್ಟೆ ಈಗ ದೇಶೀಯ ಕಂಪನಿಗಳ ಕೈಯಲ್ಲಿದೆ.

ಭದ್ರತೆಯೇ ಪ್ರಮುಖ ಆದ್ಯತೆ

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಕೆಲವು ನಿಯಮಗಳನ್ನು ರೂಪಿಸಿದ್ದು, ತಯಾರಕರು ತಮ್ಮ ಸಿಸಿಟಿವಿಯಲ್ಲಿ ಬಳಸುವ ಚಿಪ್‌ಸೆಟ್ (SoC) ಯಾವ ದೇಶದ್ದು ಎಂಬ ಮಾಹಿತಿಯನ್ನು ಬಹಿರಂಗಪಡಿಸಬೇಕು. ಅಲ್ಲದೆ, ಸಿಸಿಟಿವಿ ಕ್ಯಾಮೆರಾಗಳನ್ನು ರಿಮೋಟ್ ಮೂಲಕ ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂಬ ಬಗ್ಗೆ ಕಠಿಣ ಪರೀಕ್ಷೆ ನಡೆಸಲಾಗುತ್ತದೆ. ಡೇಟಾ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದಿದೆ. ಈ ನಿಯಮಗಳನ್ನು ಪಾಲಿಸಲು ಕಂಪನಿಗಳಿಗೆ ಎರಡು ವರ್ಷಗಳ ಕಾಲಾವಕಾಶ ನೀಡಲಾಗಿತ್ತು. ಈಗಾಗಲೇ 500ಕ್ಕೂ ಹೆಚ್ಚು ಹೊಸ ಮಾದರಿಯ ಸಿಸಿಟಿವಿಗಳು ಈ ಪರೀಕ್ಷೆಯಲ್ಲಿ ಪಾಸ್ ಆಗಿ ಪ್ರಮಾಣೀಕರಣ ಪಡೆದುಕೊಂಡಿವೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎಲ್ಲಾ ವಿರೋಧ ಮೀರಿ ಮದುವೆಯಾದ ಖ್ಯಾತ ಯುಟ್ಯೂಬರ್ ಸಕೀಬ್ ಸೈಫಿ ಮತ್ತು ಕನ್ನಿಕಾ ಶರ್ಮಾ
ನುಡಿದಂತೆ ನಡೆದ ಅಮಿತ್ ಷಾ: 10 ವರ್ಷದಲ್ಲಿ 10,000 ನಕ್ಸಲರು ಶರಣು: ದೇಶ ನಕ್ಸಲ್ ಮುಕ್ತ ಮಾಡುವತ್ತ ದಿಟ್ಟ ಹೆಜ್ಜೆ