400ಕಿ.ಮೀ ಗುರಿ ಸಾಮರ್ಥ್ಯದ ಭಾರತದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ!

By Suvarna News  |  First Published Sep 30, 2020, 6:23 PM IST

ಭಾರತೀಯ ಸೇನೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಯುದ್ದವಿಮಾನಗಳು ಸೇರಿಕೊಳ್ಳುತ್ತಿದೆ. ಇದೀಗ DRDO ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್ ಕ್ಷಿಪಣಿ ಸೇರಿಕೊಳ್ಳುತ್ತಿದೆ. ಇದರ ಪ್ರಯೋಗ ಯಶಸ್ವಿಯಾಗಿದ್ದು, ಬಲಿಷ್ಠ ಅಸ್ತ್ರವೊಂದು ಸೇನೆ ಕೈಸೇರಲಿದೆ.


ನವದೆಹಲಿ(ಸೆ.30): ಬರೋಬ್ಬರಿ 400 ಕಿಲೋಮೀಟರ್ ಗುರಿ ಸಾಮರ್ಥ್ಯದ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆಯ ಯಶಸ್ವಿಯಾಗಿದೆ. ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಮಿಸೈಲ್ ಪರೀಕ್ಷೆಯನ್ನು ಒಡಿಶಾದ ಬಾಲಾಸೊರ್ ಜಿಲ್ಲೆಯಲ್ಲಿ ನಡೆಯಲಾಗಿದೆ.  ಈ ಯಶಸ್ವಿ ಪರೀಕ್ಷೆಯಿಂದ ಭಾರತೀಯ ಸೇನೆ ಮತ್ತಷ್ಟು ಬಲಿಷ್ಠವಾಗಿದೆ.

ಶತ್ರುಗಳನ್ನು ಬಗ್ಗುಬಡಿಯುವ ಸ್ವದೇಶಿ ಹೈಪರ್‌ಸಾನಿಕ್ ಪ್ರಯೋಗ ಗೆದ್ದ ಭಾರತ..!.

Tap to resize

Latest Videos

ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್(DRDO) ಸಂಸ್ಥೆಯ PJ-10 ಯೋಜನೆಯಡಿ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಮಿಸೈಲ್ ಅಭಿವೃದ್ಧಿಪಡಿಸಲಾಗಿದೆ. ಇದು 2ನೇ ಹಂತದ ಅಭಿವೃದ್ಧಿಯಾಗಿದ್ದು, ವಿಶೇಷ ಸಂಪೂರ್ಣ ಅಭಿವದ್ಧಿಯನ್ನು DRDO ಮಾಡಿದೆ. ಮೊದಲ ಹಂತದ ಬ್ರಹ್ಮೋಸ್ ಸೂಪರ್ ಸಾನಿಕ್ ಮಿಸೈಲ್ 290 ಕಿ.ಮೀ ಗುರಿ ಸಾಮರ್ಥ್ಯ ಹೊಂದಿತ್ತು.

ಕೆಂಪು ಕೋಟೆಯಲ್ಲಿ ಮೋದಿ ಧ್ವಜಾರೋಹಣಕ್ಕೆ DRDO ಆ್ಯಂಟಿ ಡ್ರೋನ್ ಬಳಸಿದ ಭದ್ರತಾ ಪಡೆ!

ಮೊದಲ ಬ್ರಹ್ಮೋಸ್ ಕ್ಷಿಪಣಿಯನ್ನು ರಷ್ಯಾ ಹಾಗೂ ಭಾರತ ಜಂಟಿಯಾಗಿ ಅಭಿವೃದ್ಧಿಪಡಿಸಿತ್ತು. ಇದೀದ ಭಾರತದ DRDO 400 ಕಿ.ಮೀ ಗುರಿ ಸಾಮರ್ಥ್ಯದ ಮಿಸೈಲ್ ಅಭಿವೃದ್ಧಿ ಪಡಿಸಿ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಮೊದಲ ಹಂತದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಭಾರತ ಹಾಗೂ ಚೀನಾ ಗಡಿ ಸಂಘರ್ಷದ ಕಾರಣ ಲಡಾಖ್ ಪ್ರಾಂತ್ಯದಲ್ಲಿ ನಿಯೋಜಿಸಲಾಗಿದೆ.

ಈ ಸಂಘರ್ಷ ಮುಂದುವರಿಯುತ್ತಿರುವ ಬೆನ್ನಲ್ಲೇ ಇದೀಗ ಅಭಿವೃದ್ಧಿಪಡಿಸಿದ 400 ಕಿ.ಮೀ ಗುರಿಸಾಮರ್ಥ್ಯದ ಕ್ಷಿಪಣಿ ಪ್ರಯೋಗ ಭಾರಿ ಸಂಚಲನ ಸೃಷ್ಟಿಸಿದೆ. 400 ಕಿಲೋಮೀಟರ್ ದೂರದಲ್ಲಿರುವ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಈ ಬ್ರಹ್ಮೋಸ್ ಕ್ಷಿಪಣಿಗಿದೆ. 

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯಶಸ್ವಿ ಬ್ರಹ್ಮೋಸ್ ಪರೀಕ್ಷೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ DRDO ನಿರ್ಮಿಸಿದ ಈ ಕ್ಷಿಪಣಿ ಆತ್ಮನಿರ್ಭರ್ ಭಾರತ  ಪರಿಕಲ್ಪನೆಗೆ ಮತ್ತಷ್ಟು ವೇಗ ನೀಡಿದೆ ಎಂದಿದ್ದಾರೆ.
 

click me!