ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ನೋ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಧ್ವಂಸ ಪ್ರಕರಣ ಪೂರ್ವ ನಿಯೋಜಿತ ಕೃತ್ಯ ಅಲ್ಲ, ಇಲ್ಲಿ ಯಾವುದೇ ಕ್ರಿಮಿನಲ್ ಪಿತೂರಿ ನಡೆದಿಲ್ಲ, ಆರೋಪಿಗಳ ವಿರುದ್ಧ ಸಾಕ್ಷಿಯೂ ಸಿಕ್ಕಿಲ್ಲ ಎಂದು ತೀರ್ಪು ನೀಡುವ ಮೂಲಕ, ಎಲ್‌ಕೆ ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಸಾಧ್ವಿ, ಉಮಾಭಾರತಿ ಸೇರಿದಂತೆ 32 ಮಂದಿಯನ್ನು ಖುಲಾಸೆಗೊಳಿಸಿದೆ.
ನವದೆಹಲಿ (ಸೆ. 30): ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ನೋ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಧ್ವಂಸ ಪ್ರಕರಣ ಪೂರ್ವ ನಿಯೋಜಿತ ಕೃತ್ಯ ಅಲ್ಲ, ಇಲ್ಲಿ ಯಾವುದೇ ಕ್ರಿಮಿನಲ್ ಪಿತೂರಿ ನಡೆದಿಲ್ಲ, ಆರೋಪಿಗಳ ವಿರುದ್ಧ ಸಾಕ್ಷಿಯೂ ಸಿಕ್ಕಿಲ್ಲ ಎಂದು ತೀರ್ಪು ನೀಡುವ ಮೂಲಕ, ಎಲ್‌ಕೆ ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಸಾಧ್ವಿ, ಉಮಾಭಾರತಿ ಸೇರಿದಂತೆ 32 ಮಂದಿಯನ್ನು ಖುಲಾಸೆಗೊಳಿಸಿದೆ.
2 ಸಾವಿರ ಪುಟಗಳ ತೀರ್ಪು ಬರೆಯಲಾಗಿದೆ. 28 ವರ್ಷಗಳ ಬಳಿಕ ಬಾಬ್ರಿ ಧ್ವಂಸ ಪ್ರಕರಣಕ್ಕೆ ಅಂತ್ಯ ಸಿಕ್ಕಿದೆ. 1992 ರಲ್ಲಿ ನಡೆದ ಈ ಪ್ರಕರಣ ಇಡೀ ದೇಶದಲ್ಲಿ ಭಾರೀ ಸದ್ದು ಮಾಡಿತ್ತು. ಎಲ್ ಕೆ ಅಡ್ವಾಣಿ, ಜೋಶಿ, ಉಮಾಭಾರತಿ ಹೆಸರು ಬಲವಾಗಿ ಕೇಳಿ ಬಂದಿತ್ತು.
ಬಾಬ್ರಿ ಮಸೀದಿ ಪ್ರಕರಣದಲ್ಲಿ ಒಟ್ಟು 49 ಆರೋಪಿಗಳಿದ್ದರು. ಇವರಲ್ಲಿ ವಿಎಚ್‌ಪಿ ಅಧ್ಯಕ್ಷರಾಗಿದ್ದ ಅಶೋಕ್ ಸಿಂಘಾಲ್, ಮಹಾರಾಷ್ಟ್ರ ಸಿಎಂ ಆಗಿದ್ದ ಬಾಲಾ ಠಾಕ್ರೆ, ಗಿರಿರಾಜ್ ಕಿಶೋರ್ ಸೇರಿದಮತೆ 17 ಮಂದಿ ಈಗ ಕಾಲವಾಗಿದ್ದಾರೆ.
ತೀರ್ಪು ಹೊರಬೀಳುತ್ತಿದ್ದಂತೆ ಬಿಜೆಪಿ ಭೀಷ್ಮ ಎಲ್‌ಕೆ ಅಡ್ವಾಣಿ ಭಾವುಕರಾದರು. ಇತ್ತೀಚಿನ ದಿನಗಳಲ್ಲಿ ಕೇಳಿದ ಒಳ್ಳೆಯ ವಿಚಾರವಿದು. ಇನ್ನೇನು ಹೇಳುವುದಕ್ಕೆ ಗೊತ್ತಾಗುತ್ತಿಲ್ಲ. ಜೈ ಶ್ರೀರಾಮ್ ಎಂದು ಕೈ ಮುಗಿದರು.
ದೇಶದ ಬಿಜೆಪಿ ನಾಯಕರು, ಕಾರ್ಯಕರ್ತರು ತೀರ್ಪನ್ನು ಸ್ವಾಗತಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ತೀರ್ಪು ಪ್ರಕಟವಾಗುತ್ತಿದ್ದಂತೆ ಮಗಳ ಜೊತೆ ಟಿವಿ ನೋಡುತ್ತಿದ್ದ ಅಡ್ವಾಣಿ ಭಾವುಕರಾದರು. ಜೈ ಶ್ರೀರಾಮ್ ಎಂದು ಕೈ ಮುಗಿದರು.
ಎಲ್ಲ 32 ಆರೋಪಿಗಳೂ ಖುದ್ದು ಹಾಜರಿರಬೇಕು ಎಂದು ಈಗಾಗಲೇ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್.ಕೆ. ಯಾದವ್ ಸೂಚಿಸಿದ್ದರು.
ಆದರೆ ಅನಾರೋಗ್ಯ, ಕೋವಿಡ್, ಕೋವಿಡ್‌ನಿಂದ ಈಗಷ್ಟೇ ಚೇತರಿಸಿಕೊಂಡಿರುವ ಕಾರಣ ಅಡ್ವಾಣಿ, ಜೋಶಿ, ಉಮಾಭಾರತಿ, ಕಲ್ಯಾಣ್‌ಸಿಂಗ್, ಚಂಪತ್‌ರಾಯ್ ಬುಧವಾರ ತೀರ್ಪು ಪ್ರಕಟದ ವೇಳೆ ನ್ಯಾಯಾಲಯದಲ್ಲಿ ಹಾಜರಿರಲಿಲ್ಲ.
ಪ್ರಕರಣದ ವಿಚಾರಣೆ ಅಂತ್ಯಕ್ಕೆ ಸೆಪ್ಟೆಂಬರ್ 30ರ ಗಡುವನ್ನು ಸುಪ್ರೀಂಕೋರ್ಟ್ ವಿಧಿಸಿತ್ತು. ಆ ಪ್ರಕಾರ ಸೆಪ್ಟೆಂಬರ್ 30ಕ್ಕೆ ತೀರ್ಪು ಪ್ರಕಟವಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ್ದ ಸಿಬಿಐ, 351 ಸಾಕ್ಷಿಗಳ ವಿಚಾರಣೆ ನಡೆಸಿ ಹಾಗೂ 600 ದಾಖಲೆಗಳನ್ನು ಪರಿಶೀಲಿಸಿ 48 ಆರೋಪಿಗಳ ವಿರುದ್ಧ ಚಾಜ್‌ರ್‍ಶೀಟ್ ಸಲ್ಲಿಸಿತ್ತು.
ಕರಸೇವೆಯ ಹೆಸರಿನಲ್ಲಿ ಜಮಾಯಿಸಿದ್ದ ಬಲಪಂಥೀಯ ಕಾರ್ಯಕರ್ತರನ್ನು ಹುರಿದುಂಬಿಸಿ 1992ರ ಡಿ.6ರಂದು ಅಂದಿನ ವಿವಾದಿತ ರಾಮಜನ್ಮಭೂಮಿಯಲ್ಲಿದ್ದ ಮಸೀದಿ ಧ್ವಂಸಗೊಳಿಸಲು ಸಂಚು ರೂಪಿಸಲಾಗಿತ್ತು ಎಂಬುದು ಸಿಬಿಐ ದೋಷಾರೋಪ.
ಬಿಜೆಪಿ ಪಾಲಿಗೆ ಇಂದು ಐತಿಹಾಸಿಕ ದಿನವಾಗಿದೆ.