ಕೊರೋನಾ ಅಟ್ಟಹಾಸ: ಅಮೆರಿಕವನ್ನೂ ಹಿಂದಿಕ್ಕಿದ ಭಾರತ, ವಿಶ್ವದಾಖಲೆ!

By Kannadaprabha NewsFirst Published Aug 30, 2020, 7:41 AM IST
Highlights

ಕೊರೋನಾ: ಭಾರತ ವಿಶ್ವ ದಾಖಲೆ| ನಿನ್ನೆ ಒಂದೇ ದಿನ 78750 ಸೋಂಕು| ಇಷ್ಟು ಕೇಸ್‌ ಯಾವ ದೇಶದಲ್ಲೂ ಇಲ್ಲ| ಅಮೆರಿಕದಲ್ಲಿ ಒಂದೇ ದಿನ 78,586 ಕೇಸ್‌ ದಾಖಲಾಗಿದ್ದೇ ಈವರೆಗಿನ ಗರಿಷ್ಠ

ನವದೆಹಲಿ(ಆ.30):: ಮಾರಕ ಕೊರೋನಾ ವೈರಸ್‌ ಹೆಮ್ಮಾರಿ ಭಾರತದಲ್ಲಿ ರುದ್ರ ನರ್ತನ ಮುಂದುವರಿಸಿದ್ದು, ಶನಿವಾರ ವಿಶ್ವ ದಾಖಲೆ ಬರೆದಿದೆ. ಒಂದೇ ದಿನ ದೇಶದಲ್ಲಿ ದಾಖಲೆಯ 78,751 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದು ಕೊರೋನಾ ವೈರಸ್‌ ಆರಂಭವಾದ ಬಳಿಕ ಜಗತ್ತಿನ ಯಾವುದೇ ದೇಶದಲ್ಲಿ ದಾಖಲಾದ ದೈನಂದಿನ ಅತಿ ಗರಿಷ್ಠ ಸಂಖ್ಯೆಯ ಸೋಂಕು ಎನಿಸಿಕೊಂಡಿದೆ.

ಕೊರೋನಾ ಸೋಂಕಿತೆಗೆ ಯಶಸ್ವಿ ಮಿದುಳು ಶಸ್ತ್ರಚಿಕಿತ್ಸೆ

ಅಮೆರಿಕದಲ್ಲಿ ಜು.24ರಂದು 78,586 ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗಿದ್ದು, ವಿಶ್ವದಲ್ಲೇ ಅತಿ ಗರಿಷ್ಠ ಎನಿಸಿಕೊಂಡಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಅಮೆರಿಕ ಮತ್ತು ಬ್ರೆಜಿಲ್‌ಗಿಂತಲೂ ಹೆಚ್ಚಿನ ಸೊಂಕು ಭಾರತದಲ್ಲೇ ದಾಖಲಾಗುತ್ತಿದೆ. ಕಳೆದ ಮೂರು ದಿನಗಳಿಂದ 75 ಸಾವಿರಕ್ಕಿಂತಲೂ ಅಧಿಕ ಕೇಸ್‌ ಪತ್ತೆ ಆಗುತ್ತಿದ್ದು, ಈವರೆಗೆ ಪತ್ತೆ ಆದ ಕೊರೋನಾ ವೈರಸ್‌ ಪ್ರಕರಣಗಳ ಸಂಖ್ಯೆ 35.32 ಲಕ್ಷಕ್ಕೆ ಏರಿಕೆ ಆಗಿದೆ.

ಕೊರೋನಾ ಭೀತಿ ಮಧ್ಯೆಯೂ ಸಂತ ಮೇರಿ ಬೆಸಿಲಿಕಾ ಉತ್ಸವಕ್ಕೆ ಚಾಲನೆ

ಇದೇ ವೇಳೆ ಭಾರತದಲ್ಲಿ ಕೊರೋನಾಕ್ಕೆ ಒಂದೇ ದಿನ 953 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 63578ಕ್ಕೆ ತಲುಪಿದೆ. ಇನ್ನು ಕೊರೋನಾದಿಂದ 66,049 ಜನರು ಚೇತರಿಸಿಕೊಂಡಿದ್ದು, ಗುಣಮುಖರಾದವರ ಸಂಖ್ಯೆ 27.06 ಲಕ್ಷಕ್ಕೆ ಹೆಚ್ಚಳಗೊಂಡಿದೆ.

ಇನ್ನು ಮಹಾರಾಷ್ಟ್ರವೊಂದರಲ್ಲೇ 16,867 ಕೇಸ್‌ ದಾಖಲಾಗಿದ್ದು, ಸೋಂಕಿತರ ಸಂಖ್ಯೆ 7.64 ಲಕ್ಷಕ್ಕೆ ಏರಿಕೆ ಆಗಿದೆ. ಒಂದೇ ದಿನ 328 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 24,103ಕ್ಕೆ ತಲುಪಿದೆ.

click me!