
ಕನ್ಯಾಕುಮಾರಿ(ಆ.29): ಚೀನಾದಲ್ಲಿ ಕೊರೋನಾ ಅಬ್ಬರಿಸುತ್ತಿತ್ತು ಅಷ್ಟೇ. ಭಾರತದಲ್ಲಿ ಕರೋನಾ ವೈರಸ್ ಎಂಟ್ರಿ ಮಾತ್ರವಲ್ಲ ಕೊರೋನಾ ಹೆಸರು ಕೂಡ ಚಾಲ್ತಿಗೆ ಬಂದಿರಲಿಲ್ಲ. ಕೊರೋನಾ ವೈರಸ್ ಏನು ಅನ್ನೋದೇ ಜನರಿಗೆ ತಿಳಿದಿರಲಿಲ್ಲ. ಈ ಸಂದರ್ಭದಲ್ಲಿ ಕನ್ಯಾಕುಮಾರಿ ಕಾಂಗ್ರೆಸ್ ಸಂಸದ ವಸಂತ ಕುಮಾರ್ ಕೊರೋನಾ ಗಂಭೀರತೆ ಕುರಿತು ಬೆಳಕು ಚೆಲ್ಲಿದ್ದರು. ದುರಂತ ಅಂದರೆ ಇದೇ ಸಂಸದ ಇದೀಗ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ.
ಬೆಳಗಾವಿ: ಶಾಸಕ ಅಭಯ ಪಾಟೀಲಗೆ ಕೋವಿಡ್ ದೃಢ, ಸಿಎಂಗೆ ಮತ್ತೊಮ್ಮೆ ಕೊರೋನಾ ಭೀತಿ
70 ವರ್ಷದ ಕಾಂಗ್ರೆಸ್ ಸಂಸದ ವಸಂತ್ ಕುಮಾರ್ ಮಾರ್ಚ್ 20 ರಂದು ಸಂಸತ್ತಿನಲ್ಲಿ ಕೊರೋನಾ ವೈರಸ್ ಕುರಿತು ಮಾತನಾಡಿದ್ದರು. ಕೊರೋನಾ ವೈರಸ್‌ನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದಿದ್ದರು. ಕೊರೋನಾ ಕಾರಣ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹೀಗಾಗಿ ದಿನಗೂಲಿ ನೌಕರರು, ಸಣ್ಣ ಉದ್ದಿಮೆದಾರರು ಸೇರಿದಂತೆ ಸಂಕಷ್ಟದಲ್ಲಿರುವವರ ಖಾತೆಗೆ ನೇರವಾಗಿ ಹಣ ವರ್ಗಾಣವಣೆ ಮಾಡಬೇಕು ಎಂದು ಆಗ್ರಹಿಸಿದ್ದರು.
ಮಾರ್ಚ್ 20 ರಂದು ವಸಂತ್ ಕುಮಾರು ಸಂಸತ್ತಿನಲ್ಲಿ ಮಾತನಾಡಿದ ಬಳಿಕ ಮಾರ್ಚ್ 25 ರಿಂದ ದೇಶದಲ್ಲಿ ಲಾಕ್‌ಡೌನ್ ಹೇರಲಾಗಿತ್ತು. ಲಾಕ್‌ಡೌನ್ ಬಳಿಕವೇ ದೇಶದಲ್ಲಿ ಕೊರೋನಾ ಕುರಿತ ಗಂಭೀರತೆ ಅರ್ಥವಾಗಿತ್ತು. ಸೋಂಕಿತರ ಸಂಖ್ಯೆ ಹೆಚ್ಚಾಯಿತು. ಕೊರೋನಾಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಯಿತು. ಇತ್ತ ಆರೋಗ್ಯವಾಗಿದ್ದ ಕಾಂಗ್ರೆಸ್ ಸಂಸದ ವಸಂತ್ ಕುಮಾರ್‌ಗೆ ಆಗಸ್ಟ್ ತಿಂಗಳ ಆರಂಭದಲ್ಲಿ ಅನಾರೋಗ್ಯ ಕಾಣಿಸಿಕೊಂಡಿತ್ತು.
ಕೊರೋನಾ ರೋಗ ಲಕ್ಷಣ ಕಾರಣ ಚಿಕಿತ್ಸೆಗೆ ಒಳಗಾಗಿದ್ದ ವಸಂತ್ ಕುಮಾರ್ ಶುಕ್ರವಾರ(ಆ.28) ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ