
ನವದೆಹಲಿ (ಅ.5): ಭಾರತದಲ್ಲಿ ಮೊದಲ ಪರಿಸರ ಸ್ನೇಹಿ ಹೈಡೋಜನ್ ಚಾಲಿತ ರೈಲು ಶೀಘ್ರದಲ್ಲೇ ಓಡುವ ಸಾಧ್ಯತೆ ಇದೆ. ಜರ್ಮನಿಯ ಟಿಯುವಿ-ಎಸ್ ಯುಡಿ ಕಂಪನಿ ಮೂಲಕ ರೈಲಿನ ಆಡಿಟ್ ನಡೆಸಲು ರೈಲ್ವೆ ನಿರ್ಧರಿಸಿದ್ದು, ಡಿಸೆಂಬರ್‌ನಲ್ಲಿ ಪ್ರಾಯೋಗಿಕ ಸಂಚಾರಕ್ಕೆ ಮುಂದಾಗಿದೆ. ಇದರೊಂದಿಗೆ ಹೈಡೋಜನ್ ಚಾಲಿತ ರೈಲು ಹೊಂದಿರುವ ವಿಶ್ವದ 5ನೇ ದೇಶ ಎಂಬ ಕೀರ್ತಿಗೆ ಭಾರತ ಭಾಜನವಾಗಲಿದೆ. ಈಗಾಗಲೇ ಜರ್ಮನಿ, ಫ್ರಾನ್ಸ್, ಸ್ವೀಡನ್ ಹಾಗೂ ಚೀನಾದಲ್ಲಿ ಈ ರೈಲುಗಳು ಓಡುತ್ತಿವೆ. ಪ್ರಾಯೋಗಿಕ ಪರೀಕ್ಷೆ ಹರ್ಯಾಣದ ಜಿಂದ್ -ಸೋನಿಪತ್ ಮಾರ್ಗದಲ್ಲಿ ನಡೆವ ಸಾಧ್ಯತೆ ಇದೆ. ರೈಲಿನ ಮೂಲ ಮಾದರಿ (ಪ್ರೋಟೋಟೈಪ್) ಚೆನ್ನೈ ಕೋಚ್ ಫ್ಯಾಕ್ಟರಿಯಲ್ಲಿ ಸಿದ್ಧವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
1 ರೈಲಿಗೆ 80 ಕೋಟಿ ರು.: 'ರೈಲ್ವೆ ಇಲಾಖೆ ಇಂಥ 35 ರೈಲುಗಳನ್ನು ಓಡಿಸಲು ಯೋಚಿಸುತ್ತಿದೆ. ಪಾರಂಪರಿಕ ಮಾರ್ಗಗಳಲ್ಲಿ ಇದನ್ನು ಜಾರಿಗೊಳಿಸಲಾಗುವುದು. ಒಂದು ರೈಲಿಗೆ ಸುಮಾರು 80 ಕೋಟಿ ರು. ವೆಚ್ಚ ಆಗಲಿದೆ. ಇನ್ನು ಇದಕ್ಕೆ ಬೇಕಾದ ಮೂಲಸೌಕರ್ಯಕ್ಕೆ ಪ್ರತಿ ಮಾರ್ಗಕ್ಕೆ 70 ಕೋಟಿ ರು. ಬೇಕಾಗಲಿದೆ' ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಮೊದಲ ರೈಲು ಓಡುವ ಜಿಂದ್‌ನಲ್ಲಿನ ಇಂಧನ ತುಂಬುವ ಘಟಕ ಸ್ಥಾಪಿಸಲಾಗುತ್ತದೆ. ಇದು 3 ಟನ್ ಕೇಜಿ ಹೈಡೋಜನ್ ಸಂಗ್ರಹಣೆ, ಸಂಕೋಚಕ (ಕಂಪ್ರೆಸ್ಸರ್) ಮತ್ತು 2 ಡಿಸ್ಪೆನ್ಸರ್‌ಗಳನ್ನು ಹೊಂದಿರಲಿದೆ, ಇವು ತ್ವರಿತವಾಗಿ ಇಂಧನ ತುಂಬಲು ಅನುವು ಮಾಡಿಕೊಡುತ್ತದೆ' ಎಂದು ರೈಲ್ವೆ ಹೇಳಿಕೆ ತಿಳಿಸಿದೆ.
ಹುಬ್ಭಳ್ಳಿಯ ವಂದೇ ಭಾರತ್ ರೈಲು ಸೇವೆಯಲ್ಲಿ ಕೆಲ ಬದಲಾವಣೆ, ಇಲ್ಲಿದೆ ಹೊಸ ವೇಳಾಪಟ್ಟಿ!
ರೈಲ್ವೆ ಖಾಸಗೀಕರಣ ಇಲ್ಲ, ಕೈಗೆಟುಕುವ ದರದ ಸೇವೆ ನಮ್ಮ ಗುರಿ: ಸಚಿವ ವೈಷ್ಣವ್
ನಾಸಿಕ್: 'ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡುವ ಪ್ರಶ್ನೆಯೇ ಇಲ್ಲ. ಇಂಥಹ ಗಾಳಿ ಸುದ್ದಿ ಹಬ್ಬಿಸುವವರು ದಯವಿಟ್ಟು ನಿಲ್ಲಿಸಬೇಕು' ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.'ರಕ್ಷಣೆ ಮತ್ತು ರೈಲ್ವೆ ದೇಶದ ಬೆನ್ನೆಲುಬು. ಇವುಗಳನ್ನು ರಾಜಕೀಯ ದಿಂದ ದೂರ ಇಡಬೇಕು. ರೈಲ್ವೆಯು ಜನರಿಗೆ ಕೈಗೆಟುಕುವ ದರದಲ್ಲಿ ಉನ್ನತ ಸೇವೆಯನ್ನು ಕೊಡುವ ಗುರಿ ಹೊಂದಿದೆ. ಇನ್ನು 5 ವರ್ಷದಲ್ಲಿ ಇನ್ನಷ್ಟು ಆಧುನಿಕತೆಯಿಂದಾಗಿ ರೈಲ್ವೆ ಸಂಪೂರ್ಣ ಪರಿವರ್ತನೆಗೆ ಒಳಪಡುತ್ತದೆ' ಎಂದರು.
ಹಳಿ ತಪ್ಪಿದ ಡೀಸೆಲ್ ರೈಲಿನತ್ತ ಬಕೆಟ್ ಹಿಡಿದು ಓಡೋಡಿ ಬಂದ ಜನ, 30 ನಿಮಿಷದಲ್ಲಿ ಎಲ್ಲಾ ಖಾಲಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ