ಭಾರತದಲ್ಲಿ ಮದ್ಯ ಜಾಹೀರಾತಿಗೆ ಹೊಸ ನೀತಿ ಜಾರಿಯಾಗುತ್ತಿದೆ. ಸರೋಗೇಟ್ ಜಾಹೀರಾತು ನೀಡುವ ಹಾಕಿಲ್ಲ, ಸೆಲೆಬ್ರೆಟಿಗಳು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಹಾಗಿಲ್ಲ. ಇನ್ನೇನಿದ್ದರೂ ಕುಡುಕರೆ ಬ್ರಾಂಡ್ ಅಂಬಾಸಿಡರ್. ಹೊಸ ನೀತಿ ಹಾಗೂ ನಿರ್ಬಂಧವೇನು?
ನವದೆಹಲಿ(ಆ.04) ಮದ್ಯ ಜಾಹೀರಾತು ಹೊಸ ನೀತಿ ಶೀಘ್ರದಲ್ಲೇ ಜಾರಿಯಾಗುತ್ತಿದೆ. ಭಾರತದಲ್ಲಿ ಈಗಾಗಲೇ ನೇರ ಮದ್ಯ ಜಾಹೀರಾತು ಬ್ಯಾನ್ ಮಾಡಲಾಗಿದೆ. ಇದೀಗ ಸರೋಗೇಟ್ ಜಾಹೀರಾತು,ಪ್ರಾಯೋಜತ್ವದ ಜಾಹೀರಾತಿಗೂ ನಿರ್ಬಂಧ ವಿಧಿಸಲಾಗುತ್ತಿದೆ. ಇಷ್ಟೇ ಅಲ್ಲ ಸೆಲೆಬ್ರೆಟಿಗಳು ಯಾವುದೇ ಕಾರಣಕ್ಕೂ ಮದ್ಯದ ಸರೋಗೇಟ್, ಪ್ರಾಯೋಜಕತ್ವ ಅಥವಾ ಇನ್ನಿತರ ರೂಪದಲ್ಲೂ ಕಾಣಿಸಿಕೊಳ್ಳುವಂತಿಲ್ಲ. ಈ ಹೊಸ ನಿಯಮ ಶೀಘ್ರದಲ್ಲೇ ಜಾರಿಯಾಗಲಿದೆ. ಹೊಸ ನಿಯಮ ಜಾರಿಯಾದರೆ ಕುಡುಕರೇ ಇನ್ಮುಂದೆ ಮದ್ಯದ ಬ್ರಾಂಡ್ ಅಂಬಾಸಿಡರ್ ಆಗಲಿದ್ದಾರೆ.
ಭಾರತದಲ್ಲಿ ನೇರವಾಗಿ ಮದ್ಯದ ಜಾಹೀರಾತಿಗೆ ಅವಕಾಶವಿಲ್ಲ. ಬ್ಯಾನರ್, ಫ್ಲೆಕ್ಸ್, ಟಿವಿ ಜಾಹೀರಾತು, ಡಿಜಿಟಲ್ ಮೀಡಿಯಾ, ಸೋಶಿಯಲ್ ಮೀಡಿಯಾಗಳಲ್ಲೂ ನೇರ ಮದ್ಯ ಜಾಹೀರಾತು ಬ್ಯಾನ್. ಹೀಗಾಗಿ ಬಹುತೇಕ ಮದ್ಯ ಕಂಪನಿಗಳು ಸರೋಗೇಟ್ ಅಥವಾ ಪ್ರಾಯೋಜಕತ್ವ ಜಾಹೀರಾತು ನೀಡುತ್ತದೆ. ಈ ಸರೋಗೇಟ್ ಹಾಗೂ ಪ್ರಾಯೋಜಕತ್ವದಲ್ಲಿ ಸೆಲೆಬ್ರೆಟಿಗಳು ಕಾಣಿಸಿಕೊಳ್ಳುತ್ತಾರೆ. ಹೊಸ ನಿಯಮದಲ್ಲಿ ಇದ್ಯಾವುದಕ್ಕೂ ಅವಕಾಶವಿಲ್ಲ.
ಪತ್ನಿಯ ನಾಲ್ಕೇ ನಾಲ್ಕು ಪೆಗ್‌ಗೆ ಗಿರಗಿರ ತಿರುಗಿದ ಗಂಡ, ಡಿವೋರ್ಸ್ ಕೇಳಿದವನಿಗೆ ನೆಟ್ಟಿಗರ ಸಲಹೆ!
ಸರೋಗೇಟ್ ಜಾಹೀರಾತು ಮೂಲಕ ಮದ್ಯ ಕಂಪನಿಗಳು ನೇರವಾಗಿ ಮದ್ಯದ ಜಾಹೀರಾತು ನೀಡದೆ, ಸೋಡಾ, ನೀರು ಈ ರೀತಿಯಲ್ಲಿ ಜಾಹೀರಾತು ನೀಡುತ್ತದೆ. ಈ ಮೂಲಕ ಪರೋಕ್ಷವಾಗಿ ಮದ್ಯಗಳನ್ನು ಪ್ರಚಾರ ಮಾಡುತ್ತದೆ. ಈ ರೀತಿಯ ಸರೋಗೇಟ್ ಜಾಹೀರಾತಿನಲ್ಲಿ ಸೆಲೆಬ್ರೆಟಿಗಳು ಕಾಣಿಸಿಕೊಂಡು ಪರೋಕ್ಷವಾಗಿ ಮದ್ಯವನ್ನು ಪ್ರಚಾರ ಮಾಡುತ್ತಾರೆ.
ಉದಾಹರಣೆಗೆ ಕಾಲ್ಸ್‌ಬರ್ಗ್ ಮದ್ಯ ತನ್ನ ಜಾಹೀರಾತನ್ನು ಟ್ಯೂಬೋರ್ಗ್ ಕುಡಿಯುವ ನೀರಿನ ಮೂಲಕ ಮಾಡುತ್ತಿದೆ. ಆದರೆ ಟಿಲ್ಟ್ ಯುವರ್ ವರ್ಲ್ಡ್ ಅನ್ನೋ ಸ್ಲೋಗನ್ ನೇರವಾಗಿ ಮದ್ಯವನ್ನೇ ಪ್ರಮೋಟ್ ಮಾಡುತ್ತಿದೆ. ಜೊತೆಗೆ ಜಾಗರೂಕತೆಯಿಂದ ಕುಡಿಯಿರಿ ಅನ್ನೋ ಟ್ಯಾಗ್ ಲೈನ್ ಕೂಡ ಹಾಕಲಾಗಿದೆ. ಈ ಸರೋಗೇಟ್ ಜಾಹೀರಾತಿನಲ್ಲಿ ಬಾಲಿವುಡ್ ಸೆಲೆಬ್ರೆಟಿ ಕಾಣಿಸಿಕೊಂಡಿದ್ದಾರೆ. ಇನ್ನು ಖಾಸಗಿ ಕಾರ್ಯಕ್ರಮ, ಸಿನಿಮಾ ಕಾರ್ಯಕ್ರಮ, ವೇದಿಕೆ ಕಾರ್ಯಕ್ರಮ, ರಿಯಾಲಿಟಿ ಶೋ ಸೇರಿದಂತೆ ಇತರ ಕಾರ್ಯಕ್ರಮಗಳಲ್ಲಿ ಪ್ರಾಯೋಜಕತ್ವಕ್ಕೂ ಹೊಸ ನಿಯಮ ಬ್ರೇಕ್ ಹಾಕಲಿದೆ.
ಹೊಸ ನಿಯಮ ಜಾರಿಯಾದರೆ ಭಾರತದಲ್ಲಿ ಮದ್ಯಕ್ಕೆ ಯಾವುದೇ ರೀತಿಯ ಜಾಹೀರಾತು ನೀಡುವಂತಿಲ್ಲ. ನೇರ ಜಾಹೀರಾತು ಈಗಾಗಲೇ ಬ್ಯಾನ್, ಇನ್ನು ಪರೋಕ್ಷ ಜಾಹೀರಾತಿಗೂ ಅವಕಾಶವಿಲ್ಲ. ಸೆಲೆಬ್ರೆಟಿಗಳು ಕಾಣಿಸಿಕೊಳ್ಳುವಂತಿಲ್ಲ. ಹೀಗಾಗಿ ಕುಡುಕರೆ ಮದ್ಯದ ಬ್ರಾಂಡ್ ಅಂಬಾಸಿಡರ್ ಆಗಲಿದ್ದಾರೆ. ಮೂಲಗಳ ಪ್ರಕಾರ ಹೊಸ ನಿಯಮದ ಕರಡು ಸಿದ್ಧಗೊಂಡಿದೆ. ತಿಂಗಳ ಒಳಗೆ ಈ ನಿಯಮ ಮಂಡನೆಯಾಗಲಿದೆ. ಇದು ಕೇವಲ ಮದ್ಯ ಮಾತ್ರವಲ್ಲ ಗುಟ್ಕಾ ಸೇರಿದಂತೆ ಇತರ ಟೋಬ್ಯಾಕೋಗಳಿಗೂ ಅನ್ವಯವಾಗಲಿದೆ.
ಮದ್ಯ ಪ್ರೇಮಿಗಳಿಗೆ ದಿವ್ಯೌಷಧಿ, ಫುಲ್ ಟೈಟ್ ಆದ್ರೂ ಲಿವರ್ ತಲುಪಲ್ಲ ಆಲ್ಕೋಹಾಲ್!