46 ದಿನಗಳ ಬಳಿಕ ದೇಶದಲ್ಲಿ ಕೊರೋನಾ ಸ್ವಲ್ಪ ಇಳಿಕೆ!

By Suvarna NewsFirst Published Apr 28, 2021, 8:45 AM IST
Highlights

46 ದಿನಗಳ ಬಳಿಕ ಕೊರೋನಾ ಸ್ವಲ್ಪ ಇಳಿಕೆ| ನಿನ್ನೆ 3.23 ಲಕ್ಷ ಹೊಸ ಕೇಸ್‌, 2771 ಜನ ಸಾವು| ಸಾವಿನ ಸಂಖ್ಯೆ ಇಂದು 2 ಲಕ್ಷ ತಲುಪುವ ಸಾಧ್ಯತೆ

ನವದೆಹಲಿ(ಏ.28): ಸುನಾಮಿಯ ವೇಗದಲ್ಲಿ ಹಬ್ಬುತ್ತಾ ಸತತ 46 ದಿನಗಳ ಕಾಲ ಏರಿಕೆ ಕಂಡಿದ್ದ ಕೊರೋನಾ ಸೋಂಕು, ಮೊದಲ ಬಾರಿಗೆ ಅಲ್ಪ ಇಳಿಕೆ ಕಂಡಿದೆ. ಮಂಗಳವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 3,23,144 ಪ್ರಕರಣಗಳು ದೃಢಪಟ್ಟಿದ್ದರೆ, 2771 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1.76 ಕೋಟಿಗೆ ಏರಿದ್ದರೆ, ಸಾವಿನ ಪ್ರಮಾಣ 1,97,894ಕ್ಕೆ ತಲುಪಿದೆ. ಇನ್ನು ಸಕ್ರಿಯ ಸೋಂಕಿತರ ಸಂಖ್ಯೆ ಕೂಡಾ ದಾಖಲೆಯ 28.82 ಲಕ್ಷಕ್ಕೆ ಮುಟ್ಟಿದೆ. ಮತ್ತೊಂದೆಡೆ ಚೇತರಿಕೆ ಪ್ರಮಾಣ ಮತ್ತಷ್ಟುಇಳಿಕೆ ಕಂಡು ಶೇ.82.54ಕ್ಕೆ ಅಂತ್ಯವಾಗಿದೆ.

ದೇಶದಲ್ಲಿ ಕೊರೋನಾ 2ನೇ ತೀವ್ರಗೊಳ್ಳಲು ಆರಂಭಿಸಿದ ಮಾಚ್‌ರ್‍ 2ನೇ ವಾರದಿಂದಲೂ ದೇಶದಲ್ಲಿ ಕೊರೋನಾ ಸೋಂಕು ಮತ್ತು ಸಾವಿನ ಪ್ರಮಾಣ ಸತತ 46 ದಿನಗಳ ಏರಿಕೆಯ ಹಾದಿಯಲ್ಲಿತ್ತು.

click me!