
ನವದೆಹಲಿ(ಜು.27): ಜೂನ್ ಅಂತ್ಯದಲ್ಲಿ ಟಿಕ್‌ಟಾಕ್, ಹೆಲೋ ಸೇರಿ ಒಟ್ಟು 59 ಆ್ಯಪ್ ಬ್ಯಾನ್ ಮಾಡಿ ಚೀನಾಗೆ ಶಾಕ್ ಕೊಟ್ಟಿದ್ದ ಭಾರತ ಸರ್ಕಾರ ಮತ್ತೆ 47 ಆ್ಯಪ್‌ಗಳ ಮೇಲೆ ನಿರ್ಬಂಧ ಹೇರಿದೆ. ಅಲ್ಲದೇ ಬಳಕೆದಾರರ ಮಾಹಿತಿ ಗೌಪ್ಯತೆ ಕಾಪಾಡದ 250ಕ್ಕೂ ಅಧಿಕ ಆ್ಯಪ್‌ಗಳ ಮೇಲೆ ಕಣ್ಣಿರಿಸಿದೆ.
"
ಹೌದು ಬ್ಯಾನ್ ಮಾಡಲಾದ 47 ಆ್ಯಪ್‌ಗಳು ಈ ಹಿಂದೆ ಬ್ಯಾನ್ ಮಾಡಲಾದ ಆ್ಯಪ್‌ಗಳನ್ನು ಹೋಲುತ್ತಿದ್ದವೆನ್ನಲಾಗಿದೆ. ಇನ್ನು ಭಾರತ ತಾನು ಬ್ಯಾನ್ ಮಾಡಿದ್ದ ಚೀನಾ ಮೂಲದ 59 ಆ್ಯಪ್ ತಯಾರಕರಿಗೆ ನಿಷೇಧವನ್ನು ಸರಿಯಾಗಿ ಪಾಲಿಸಿ ಎಂದು ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಎರಡನೇ ಡಿಜಿಟಲ್ ಸ್ಟ್ರೈಕ್ ನಡೆದಿದೆ ಎಂಬುವುದು ಉಲ್ಲೇಖನೀಯ. ಅಲ್ಲದೇ ಭಾರತ ಈ ಎಚ್ಚರಿಕೆ ಜೊತೆ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಸ್ಪಷ್ಟಪಡಿಸಿತ್ತು.
ಡ್ರ್ಯಾಗನ್‌ಗೆ ಬಿಗ್ ಶಾಕ್: ಚೀನಾ ತೊರೆಯಲು ಟಿಕ್‌ಟಾಕ್ ಚಿಂತನೆ!
250 ಆ್ಯಪ್‌ಗಳ ಪರಿಶೀಲನೆ
ಭಾರತ ಆಲಿಬಾಬಾ ಕಂಪನಿಗೆ ಸಂಬಂಧಿಸಿದ ಆ್ಯಪ್ ಸೇರಿದಂತೆ ಇನ್ನೂ 250 ಆ್ಯಪ್‌ಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು ಇವು ಯಾವುದಾದರೂ ನಿಯಮ ಉಲ್ಲಂಘಿಸುತ್ತಿವೆಯಾ ಎಂಬುವುದನ್ನು ಪರಿಶೀಲಿಸುತ್ತಿದೆ. ಈ ಪಟ್ಟಿಯಲ್ಲಿ ಪಬ್ ಜೀ ಸೇರಿ ಕೆಲ ಗೇಮ್ ಆ್ಯಪ್‌ಗಳೂ ಇವೆ ಎನ್ನಲಾಗಿದೆ.
59 ಚೀನೀ ಆ್ಯಪ್ ನಿಷೇಧ; ಭಾರತೀಯ ಎಂಜಿನೀಯರ್‌ಗಳು ತಯಾರಿಸ್ತಾರಾ ಹೊಸ ಆ್ಯಪ್?
ಗಾಲ್ವಾನ್ ಕಣಿವೆಯಲ್ಲಿ ಚೀನಾ ಹಾಗೂ ಭಾರತೀಯ ಯೋಧರ ನಡುವೆ ನಡೆದಿದ್ದ ಸಂಘರ್ಷದ ಬೆನ್ನಲ್ಲೇ, ಕಳೆದ ತಿಂಗಳು ಅಂದರೆ ಜೂನ್ 29ರಂದು ಭಾರತ ಟಿಕ್‌ಟಾಕ್ ಸೇರಿ ಒಟ್ಟು 59 ಆ್ಯಪ್ ಬ್ಯಾನ್ ಮಾಡಿತ್ತು. ಇದು ಚೀನಾಗೆ ಆರ್ಥಿಕವಾಗಿ ಭಾರೀ ಹೊಡೆತ ನೀಡಿತ್ತು ಎಂಬುವುದು ಉಲ್ಲೇಖನೀಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ