ಮಾಸ್ಕೋದಲ್ಲಿ ವ್ಲಾಡಿಮಿರ್‌ ಪುಟಿನ್‌-ಅಜಿತ್‌ ದೋವಲ್‌ ಭೇಟಿ

By Santosh Naik  |  First Published Feb 9, 2023, 6:10 PM IST

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಗುರುವಾರ ಮಾಸ್ಕೋದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಭೇಟಿಯಾಗಿದ್ದಾರೆ. ಲಷ್ಕರ್‌ ಹಾಗೂ ಜೈಶ್‌ ಭಯೋತ್ಪಾದಕರನ್ನು ಜಂಟಿಯಾಗಿ ಎದುರಿಸುವ ಬಗ್ಗೆ ಮಾತುಕತೆ ನಡೆಸಿದ್ದಾಗಿ ವರದಿಯಾಗಿದೆ.
 


ನವದೆಹಲಿ (ಫೆ.9): ಎನ್‌ಎಸ್‌ಎ ಅಜಿತ್ ದೋವಲ್ ಗುರುವಾರ ಮಾಸ್ಕೋದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದರು. ಭಾರತ ಮತ್ತು ರಷ್ಯಾ ನಡುವಿನ ಹಲವು ವಿಚಾರಗಳ ಪಾಲಿದಾರಿಕೆ ಮತ್ತು ಪರಸ್ಪರ ಸಂಬಂಧಗಳ ಬಗ್ಗೆ ಇಬ್ಬರೂ ನಾಯಕರು ಪ್ರಮುಖವಾಗಿ ಚರ್ಚೆ ನಡೆಸಿದರು. ಈ ಅವಧಿಯಲ್ಲಿ ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್ ಮತ್ತು ದಾಯೆಶ್‌ನಂತಹ ಭಯೋತ್ಪಾದಕ ಸಂಘಟನೆಗಳನ್ನು ಜಂಟಿಯಾಗಿ ಎದುರಿಸುವ ನಿಟ್ಟಿನಲ್ಲಿ ಎನ್‌ಎಸ್‌ಎ ಗುಪ್ತಚರ ಮತ್ತು ಭದ್ರತಾ ಒಕ್ಕೂಟಕ್ಕೆ ಒತ್ತು ನೀಡಿತ್ತು ಎಂದು ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಅಫ್ಘಾನಿಸ್ತಾನದ ಭದ್ರತಾ ಮಂಡಳಿಗಳ ಕಾರ್ಯದರ್ಶಿಗಳ ಐದನೇ ಸಭೆಯಲ್ಲಿ ಪಾಲ್ಗೊಳ್ಳಲು ಅಜಿತ್ ದೋವಲ್ ಮಾಸ್ಕೋಗೆ ತಲುಪಿದ್ದಾರೆ. ಅಫ್ಘಾನಿಸ್ತಾನವು ಕಠಿಣ ಹಂತದ ಮೂಲಕ ಹಾದುಹೋಗುತ್ತಿದೆ ಮತ್ತು ಅಗತ್ಯವಿರುವ ಸಮಯದಲ್ಲಿ ಭಾರತವು ಅಫ್ಘಾನಿಸ್ತಾನದ ಜನರನ್ನು ಎಂದಿಗೂ ಕೈಬಿಡೋದಿಲ್ಲ. ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವು 40 ಸಾವಿರ ಮೆಟ್ರಿಕ್ ಟನ್ ಗೋಧಿ, 60 ಟನ್ ಔಷಧಗಳು ಮತ್ತು ಐದು ಲಕ್ಷ ಕೋವಿಡ್ ಲಸಿಕೆಗಳನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಿದೆ ಎಂದು ಅಜಿತ್‌ ದೋವಲ್‌ ಹೇಳಿದ್ದರು.

India's NSA Ajit Doval called on Russian President Vladimir Putin.

"Wide-ranging discussion on bilateral and regional issues took place. Agreed to continue work towards implementing the India-Russia strategic partnership," informs in a tweet. pic.twitter.com/uHil4xw18x

— Prasar Bharati News Services & Digital Platform (@PBNS_India)


ಅಫ್ಘಾನಿಸ್ತಾನದಿಂದ ಭಯೋತ್ಪಾದನೆ ಹರಡಬಾರದು: ಅಫ್ಘಾನಿಸ್ತಾನದ ಜನರಿಗೆ ಕಲ್ಯಾಣ ಹಾಗೂ ಮಾನವೀಯ ನೆರವು ನೀಡುವುದು ಭಾರತದ ಪ್ರಮುಖ ಆದ್ಯತೆಯಾಗಿದೆ. ಭಯೋತ್ಪಾದನೆ ಎನ್ನುವುದು ಭಾರತಕ್ಕೆ ದೊಡ್ಡ ಆತಂಕವಾಗಿದೆ. ಅಫ್ಘಾನಿಸ್ತಾನದ ಮೂಲಕ ಯಾವ ದೇಶಗಳಿಗೂ ಭಯೋತ್ಪಾದನೆ ಹರಡಬಾರದು ಎಂದು ನಾವು ಬಯಸುತ್ತೇವೆ. ಅಫ್ಘಾನಿಸ್ತಾನದ ನೈಸರ್ಗಿಕ ಸಂಪನ್ಮೂಲಗಳನ್ನು ಅದರ ನಾಗರಿಕರ ಕಲ್ಯಾಣಕ್ಕಾಗಿ ಬಳಸಬೇಕು ಎಂದು ಅಜಿತ್‌ ದೋವಲ್‌ ಹೇಳಿದ್ದಾರೆ.

Tap to resize

Latest Videos

ಭಯೋತ್ಪಾದನೆ ಇಸ್ಲಾಮ್‌ ಧರ್ಮಕ್ಕೆ ತದ್ವಿರುದ್ಧವಾದುದು: ಅಜಿತ್ ದೋವಲ್

ರಷ್ಯಾ ಎನ್‌ಎಸ್‌ಎ ಭೇಟಿಯಾಗಿದ್ದ ಅಜಿತ್‌ ದೋವಲ್‌: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವ್‌ ಆರು ತಿಂಗಳ ಹಿಂದೆ ಅಂದರೆ ಆಗಸ್ಟ್‌ನಲ್ಲಿ ರಷ್ಯಾದ ಎನ್‌ಎಸ್‌ಎ ನಿಕೋಲೆಯ್‌ ಪತ್ರುಶೇವ್‌ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಅಫ್ಘಾನಿಸ್ತಾನ, ಭಯೋತ್ಪಾದನೆ ಹಾಗೂ ರಷ್ಯಾ-ಉಕ್ರೇನ್‌ ಯುದ್ಧದ ಕುರಿತಾಗಿ ಚರ್ಚೆ ನಡೆಸಲಾಗಿತ್ತು.

ಎನ್‌ಎಸ್‌ಎ ಅಜಿತ್‌ ಧೋವಲ್‌ ಭದ್ರತೆಯಲ್ಲಿ ಲೋಪ ಪ್ರಕರಣ, 3 ಕಮಾಂಡೋಗಳ ಸಸ್ಪೆಂಡ್‌!

click me!