ಭಾರತದೆದುರು ಮಂಡಿಯೂರುತ್ತಿದೆ ಕೊರೋನಾ: ಎಂಟು ತಿಂಗಳಲ್ಲೇ ಅತೀ ಕಡಿಮೆ ಕೇಸ್!

By Suvarna NewsFirst Published Feb 2, 2021, 2:23 PM IST
Highlights

ಲಸಿಕೆ ಅಭಿಯಾನ ಆರಂಭಗೊಂಡ ಬೆನ್ನಲ್ಲೇ ಅತ್ತ ಮಂಡಿಯೂರುತ್ತಿದೆ ಕೊರೋನಾ| ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ| ಕೊರೋನಾದಿಂದ ಮೃತಪಡುತ್ತಿರುವವರ ಸಂಖ್ಯೆಯೂ ಇಳಿಮುಖ

ನವದೆಹಲಿ(ಫೆ.02): ಲಸಿಕೆ ಅಭಿಯಾನ ಆರಂಭಗೊಂಡ ಬೆನ್ನಲ್ಲೇ ಅತ್ತ ಕೊರೋನಾ ಕೂಡಾ ಮಂಡಿಯೂರಲಾರಂಭಿಸಿದೆ. ಭಾರತದಲ್ಲಿ 8,635 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ. ಇದು ಕಳೆದ ಎಂಟು ತಿಂಗಳಲ್ಲಿ ದಾಖಲಾದ ಅತ್ಯಂತ ಕಡಿಮೆ ಪ್ರಕರಣಗಳಾಗಿವೆ. ಅತ್ತ ಕಳೆದ ಒಂಭತ್ತು ತಿಂಗಳಲ್ಲಿ ಕೊರೋನಾದಿಂದಾಗಿ ಮೃತಪಡುತ್ತಿರುವವರ ಸಂಖ್ಯೆ ನೂರಕ್ಕಿಂತ ಕೆಳಗಿಳಿದಿದೆ. ಕೇಂದ್ರ ಆರೋಗ್ಯ ಇಲಾಖೆ ಮಂಗಳವಾರ ಈ ಮಾಹಿತಿ ನೀಡಿದೆ.

ಕೇಂದ್ರ ಆರೋಗ್ಯ ಇಲಾಖೆ ನೀಡಿದ ಮಾಹಿತಿ ಅನ್ವಯ ಮಂಗಳವಾರ ಬೆಳಗ್ಗೆ ಎಂಟು ಗಂಟೆಯವರೆಗೆ ದೇಶದಲ್ಲಿ ಈವರೆಗೆ ದಾಖಲಾದ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ  1,07,66,245  ಆಗಿದೆ. ಇನ್ನು 94 ಕೊರೋನಾದಿಂದಾಗಿ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಈ ಮಹಾಮಾರಿಗೆ ಬಲಿಯಾದವರ ಒಟ್ಟು ಸಂಖ್ಯೆ 1,54,486ಕ್ಕೆ ತಲುಪಿದೆ.

ಶೀಘ್ರವಾಗಿ ಗುಣಮುಖರಾಗುತ್ತಿದ್ದಾರೆ ಸೋಂಕಿತರು

ಒಟ್ಟಾರೆಯಾಗಿ ಈ ಸೋಂಕಿನಿಂದ ಗುಣಮುಖರೆಆಗಿರುವವರ ಸಂಖ್ಯೆ 1,04,48,406 ಆಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಶೇ. 97.05 ರಷ್ಟು ಮಂದಿ ಗುಣಮುಖರಾಗಿದ್ದಾರೆ. ಇನ್ನು ಮೃತರ ಸಂಖ್ಯೆ ಕಡಿಮೆಯಾಗಿ ಶೇ.  1.43 ಕ್ಕೆ ತಲುಪಿದೆ. ಎರಡು ಲಕ್ಷಕ್ಕಿಂತಲೂ ಕಡಿಮೆ ಸೋಂಕಿತರು

click me!