ಲೋಹದ ಹಕ್ಕಿಗಳ ತಾಲೀಮು! ಮೊದಲ ಹೈಬ್ರಿಡ್‌ ಏರ್‌ ಶೋಗೆ ಕ್ಷಣಗಣನೆ

By Kannadaprabha NewsFirst Published Feb 2, 2021, 10:27 AM IST
Highlights

ಈ ಬಾರಿ ಬೆಂಗಳೂರಿನಲ್ಲಿ ಏರ್ ಶೋ ಹಮ್ಮಿಕೊಳ್ಳಲಾಗಿದ್ದು ಲೋಹದ ಹಕ್ಕಿಗಳ ಪ್ರದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಲ್ಲದೇ ಇದಕ್ಕೆ ತಾಲೀಮು ಕೂಡ ಆರಂಭವಾಗಿದೆ. 

ಬೆಂಗಳೂರು (ಫೆ.02):  ಕೊರೋನಾ ಆತಂಕ ನಡುವೆಯೇ ಬುಧವಾರದಿಂದ ಪ್ರಾರಂಭವಾಗುತ್ತಿರುವ ವಿಶ್ವದ ಮೊಟ್ಟಮೊದಲ ಹೈಬ್ರಿಡ್‌ ಏರ್‌ಶೋ ಹಿನ್ನೆಲೆಯಲ್ಲಿ ಇಂದು ಯಲಹಂಕದ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳು ಪೂರ್ಣಪ್ರಮಾಣದಲ್ಲಿ ತಾಲೀಮು ಪ್ರದರ್ಶನ ನೀಡಲಿವೆ.

ಫೆ.3ರಿಂದ 5 ವರೆಗೆ ನಡೆಯುವ ‘ಏರೋ ಇಂಡಿಯಾ-2021’ ವೈಮಾನಿಕ ಪ್ರದರ್ಶನಕ್ಕೆ ಯಲಹಂಕದ ಭಾರತೀಯ ವಾಯುನೆಲೆ ಸಜ್ಜಾಗಿದೆ. ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನಕ್ಕಾಗಿ ಕಳೆದ ಎರಡ್ಮೂರು ದಿನದಿಂದ ತಾಲೀಮು ಶುರುವಾಗಿದ್ದು, ಇಂದು ಲೋಹದ ಹಕ್ಕಿಗಳು ಪೂರ್ಣ ಪ್ರಮಾಣದಲ್ಲಿ ರನ್‌ವೇಗೆ ಇಳಿಯಲಿವೆ.

ಏರೋ ಇಂಡಿಯಾ: ಅನಾಹುತ ತಡೆಗೆ ಕಾರ್ಯತಂತ್ರ ...

ಇದೇ ಮೊದಲ ಬಾರಿಗೆ ‘ಸೂರ್ಯಕಿರಣ್‌ ಹಾಗೂ ಸಾರಂಗ್‌’ ವೈಮಾನಿಕ ಪ್ರದರ್ಶನ ತಂಡಗಳು ಜಂಟಿ ಪ್ರದರ್ಶನ ನೀಡಲಿವೆ. ಜತೆಗೆ ‘ಚಿನೂಕ್‌ ಟ್ವಿನ್‌ ಎಂಜಿನ್‌’ ಹೆಲಿಕಾಪ್ಟರ್‌ನ ವೈಮಾನಿಕ ಪ್ರದರ್ಶನದಲ್ಲಿ ಭಾಗಹಿಸುತ್ತಿರುವುದು ವಿಶೇಷ. ಇನ್ನು ಪ್ರತ್ಯಕ್ಷ ಹಾಗೂ ವರ್ಚುಯಲ್‌ ಎರಡೂ ಮಾದರಿಯಲ್ಲಿ ಏಕಕಾಲದಲ್ಲಿ ನಡೆಯಲಿರುವ 13ನೇ ಏರೋ ಇಂಡಿಯಾ ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಲಿದೆ.

ಕೊರೋನಾ ಸೋಂಕಿನ ಭೀತಿಯಿಂದಾಗಿ ವಾಯುಪಡೆ ಅಧಿಕಾರಿಗಳು ಸೇರಿ ಪ್ರತಿಯೊಬ್ಬರೂ 72 ಗಂಟೆಗಳಿಗಿಂತ ಹಳೆಯದಲ್ಲದ ಆರ್‌ಟಿ-ಪಿಸಿಆರ್‌ ಕೊರೋನಾ ನೆಗೆಟಿವ್‌ ವರದಿ ಕಡ್ಡಾಯವಾಗಿ ತರಬೇಕು. ದಿನವೊಂದಕ್ಕೆ ವೈಮಾನಿಕ ಪ್ರದರ್ಶನ ವೀಕ್ಷಣೆ ಮಾಡುವ (ಅಡ್ವಾ) ಸ್ಥಳಕ್ಕೆ 3 ಸಾವಿರ ಮಂದಿ ಮಾತ್ರ ಭಾಗವಹಿಸಬೇಕು. ವಸ್ತು ಪ್ರದರ್ಶನ ಮಳಿಗೆಗಳಲ್ಲಿ ದಿನವೊಂದಕ್ಕೆ 15 ಸಾವಿರಕ್ಕಿಂತ ಹೆಚ್ಚು ಮಂದಿ ಭೇಟಿ ನೀಡಬಾರದು ಎಂಬುದು ಸೇರಿ ಹತ್ತಾರು ನಿಯಮಗಳನ್ನು ಮಾಡಲಾಗಿದೆ.

click me!