2.50 ಲಕ್ಷ ದಾಟಿದ ಸೋಂಕು, 1500ರ ಗಡಿ ದಾಟಿದ ಸಾವು!

By Kannadaprabha NewsFirst Published Apr 19, 2021, 9:32 AM IST
Highlights

2.50 ಲಕ್ಷ ದಾಟಿದ ಸೋಂಕು, 1500ರ ಗಡಿದಾಟಿದ ಸಾವು| ನಿನ್ನೆ 2.61 ಲಕ್ಷ ಜನರಿಗೆ ಕೊರೋನಾ ದೃಢ| 18 ಲಕ್ಷ ದಾಟಿದ ಸಕ್ರಿಯ ಸೋಂಕಿತರು| ಸತತ 4ನೇ ದಿನ 2 ಲಕ್ಷಕ್ಕಿಂತ ಹೆಚ್ಚಿನ ಕೇಸು| ಸತತ 39ನೇ ದಿನವೂ ಸೋಂಕು ಏರಿಕೆ

ನವದೆಹಲಿ(ಏ.19): ದೇಶದಲ್ಲಿ ಕೋರೋನಾ ಆರ್ಭಟ ಮುಂದುವರೆದಿದ್ದು, ಭಾನುವಾರ ಸೋಂಕು ಮತ್ತು ಸಾವು ಎರಡರಲ್ಲೂ ಸಾರ್ವಕಾಲಿಕ ದಾಖಲೆ ನಿರ್ಮಾಣವಾಗಿದೆ. ಭಾನುವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸಿನ ಅವಧಿಯಲ್ಲಿ ದೇಶದಲ್ಲಿ ಬರೋಬ್ಬರಿ 2,61,500 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ 1,501 ಮಂದಿ ಬಲಿಯಾಗಿದ್ದಾರೆ.

ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1.47 ಕೋಟಿಗೆ ಏರಿಕೆಯಾಗಿದೆ. ಸಾವಿಗೀಡಾದವರ ಒಟ್ಟು ಸಂಖ್ಯೆ 1,77,150ಕ್ಕೆ ಏರಿಕೆಯಾಗಿದೆ. ಇನ್ನು ಹೊಸ ಸೋಂಕಿತರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆಯೂ 18 ಲಕ್ಷ ಗಡಿ ದಾಟಿದೆ. ಚೇತರಿಕೆ ಪ್ರಮಾಣ 86.62ಕ್ಕೆ ಕುಸಿತ ಕಂಡಿದೆ. ಒಟ್ಟು ಸೋಂಕಿತರ ಪೈಕಿ 1.28 ಕೋಟಿ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ದೇಶದಲ್ಲಿ ಸತತ 39ನೇ ದಿನ ಸೋಂಕಿನ ಪ್ರಮಾಣ ಏರುಗತಿಯಲ್ಲಿದೆ, ಜೊತೆಗೆ 2 ಲಕ್ಷಕ್ಕಿಂತ ಹೆಚ್ಚಿನ ನಿತ್ಯದ ಪ್ರಕರಣಗಳು ದಾಖಲಾಗುತ್ತಿರುವುದು ಇದು ಸತತ 4ನೇ ದಿನ

click me!