ಸತತ 6ನೇ ದಿನ ಭಾರತದಲ್ಲಿ 40 ಸಾವಿರಕ್ಕೂ ಹೆಚ್ಚು ಕೇಸ್; ಒಂದೊಂದೆ ರಾಜ್ಯಗಳು ಲಾಕ್‌ಡೌನ್!

By Suvarna NewsFirst Published Aug 2, 2021, 5:40 PM IST
Highlights
  • ಭಾರತದಲ್ಲಿ ಕೊರೋನಾ 3ನೇ ಅಲೆ ಭೀತಿ ಹೆಚ್ಚಾಗುತ್ತಿದೆ
  • ಪ್ರತಿ ದಿನ ದಾಖಲಾಗುತ್ತಿದೆ 40ಸಾವಿರಕ್ಕೂ ಹೆಚ್ಚು ಕೇಸ್
  • ಕರ್ನಾಟಕಕ್ಕೆ ಆತಂಕ ತಂದ ಕೇರಳ ಕೊರೋನಾ
  • ಭಾರತದಲ್ಲಿ 47.22 ಕೋಟಿ ಡೋಸ್ ದಾಟಿದ ಕೋವಿಡ್-19 ಲಸಿಕೆ 

ನವದೆಹಲಿ(ಆ.02): ಭಾರತ ಇದೀಗ 3ನೇ ಅಲೆ ಭೀತಿಗೆ ತುತ್ತಾಗಿದೆ. ದೇಶದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಸತತ 6ನೇ ದಿನ 40 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಇದು ಆತಂಕ ಹೆಚ್ಚಿಸಿದೆ. ಇದರಲ್ಲಿ ಅರ್ಧಕರ್ಧ ಕೇಸ್ ಕೇರಳದಲ್ಲೇ ದಾಖಲಾಗಿದೆ. ಇದರಿಂದ ಕರ್ನಾಟಕದ ಆತಂಕವೂ ಹೆಚ್ಚಾಗಿದೆ.

ಡೆಲ್ಟಾ ಪ್ಲಸ್‌ ಆತಂಕ ಬೇಡ, ಅಪಯಕಾರಿ ವೈರಸ್‌ಗೆ ಕೋವಾಕ್ಸಿನ್ ಪರಿಣಾಮಕಾರಿ; ICMR!

ತಜ್ಞರು ಎಚ್ಚರಿಸಿದ 3ನೇ ಅಲೆ ವರದಿ ನಿಜವಾಗುತ್ತಿದೆ. ಜುಲೈ-ಆಗಸ್ಟ್ ತಿಂಗಳಲ್ಲಿ ಕೊರೋನಾ 3ನೇ ಅಲೆ ಅಪ್ಪಳಿಸಲಿದ್ದು, ಅಕ್ಟೋಬರ್ ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಲಿದೆ ಎಂದು ವರದಿ ನೀಡಲಾಗಿತ್ತು. ಈ ವರದಿಯಂತೆ ಜುಲೈ ಅಂತ್ಯದಿಂದ ಕೊರೋನಾ ಪ್ರಕರಣ ಹೆಚ್ಚಾಗತೊಡಗಿದೆ. ಇದೇ ರೀತಿ ಮುಂದುವರಿದರೆ ಅಕ್ಟೋಬರ್ ತಿಂಗಳಿಗೆ ಗರಿಷ್ಠವಾಗಲಿದೆ.

ಭಾರತದಲ್ಲಿ ಜುಲೈ 11ರಂದು 32 ಸಾವಿರ ಕೊರೋನಾ ಪ್ರಕರಣ ದಾಖಲಾಗಿತ್ತು. ಇಷ್ಟೆ ಅಲ್ಲ ಅಲ್ಲೀವರೆಗೆ ಇಳಿಕೆಯಲ್ಲಿದ್ದ ಕೊರೋನಾ ಪ್ರಕರಣಗಳು ನಿಧಾನವಾಗಿ ಏರಿಕೆ ಕಾಣತೊಡಗಿದೆ. ಇದೀಗ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 40,134 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ಗಡಿ ಕಟ್ಟೆಚ್ಚರ: ಕಾಸರಗೋಡು ಬಸ್‌ ಸಂಚಾರವೂ ಬಂದ್‌

ಕೇರಳದಲ್ಲಿ ಪ್ರತಿ ದಿನ 23,000ಕ್ಕಿಂತ ಹೆಚ್ಚಿನ ಕೊರೋನಾ ಪ್ರಕರಣ ದಾಖಲಾಗುತ್ತಿದೆ. ಹೀಗಾಗಿ ಕೇರಳದಲ್ಲಿ ಮತ್ತೆ ಲಾಕ್‌ಡೌನ್ ಮೊರೆ ಹೋಗಲಾಗಿದೆ. ಇತ್ತ ತಮಿಳುನಾಡಿನಲ್ಲೂ ಲಾಕ್‌ಡೌನ್ ನಿರ್ಬಂಧ ವಿಸ್ತರಿಸಲಾಗಿದೆ. ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರದಲ್ಲೂ ಕೊರೋನಾ ಪ್ರಕರಣ ಹಚ್ಚಾಗಿದೆ.

ಕರ್ನಾಟಕದಲ್ಲಿ ಸರಾಸರಿ 2,000 ಕೊರೋನಾ ಕೇಸ್ ಪ್ರತಿ ದಿನ ದಾಖಲಾಗುತ್ತಿದೆ. ನೂತನ ಸಿಎಂ ಬಸವಾಜ ಬೊಮ್ಮಾಯಿ ಈಗಾಗಲೇ ಗಡಿ ಜಿಲ್ಲೆಗಳ ಜೊತೆ ಸಭೆ ನಡೆಸಿದ್ದು, ಕಠಿಣ ನಿರ್ಬಂಧಕ್ಕೆ ಸೂಚಿಸಲಾಗಿದೆ. 

ಭಾರತದಲ್ಲಿ ಭರದಿಂದ ಸಾಗಿರುವ ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಇದುವರೆಗೆ 47.2 ಕೋಟಿ ಡೋಸ್ ಗಿಂತ ಹೆಚ್ಚಿನ ಅಂದರೆ ಒಟ್ಟು 47,22,23,639 ಡೋಸ್ ಲಸಿಕೆ ನೀಡಲಾಗಿದೆ.  ಇಂದು 44 ಲಕ್ಷ ಡೋಸ್ ಲಸಿಕೆ ನೀಡೋ ಮೂಲಕ ದಾಖಲೆ ಬರೆಯಲಾಗಿದೆ.

ದೇಶದಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ ಒಟ್ಟು 3,08,57,467 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಳೆದ 24 ತಾಸುಗಳಲ್ಲೇ 36,946 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಒಟ್ಟು ಚೇತರಿಕೆ ದರ ಪ್ರಸ್ತುತ 97.35%ಗೆ ಸುಧಾರಣೆ ಕಂಡಿದೆ.

click me!