Omicron case ಮೂರು ವರ್ಷದ ಕಂದಮ್ಮಗೆ ಅಂಟಿಕೊಂಡ ರೂಪಾಂತರಿ ತಳಿ, ದೇಶದಲ್ಲಿ 25 ಪ್ರಕರಣ!

Published : Dec 10, 2021, 09:11 PM ISTUpdated : Dec 10, 2021, 09:17 PM IST
Omicron case ಮೂರು ವರ್ಷದ ಕಂದಮ್ಮಗೆ ಅಂಟಿಕೊಂಡ ರೂಪಾಂತರಿ ತಳಿ, ದೇಶದಲ್ಲಿ 25 ಪ್ರಕರಣ!

ಸಾರಾಂಶ

ಮಕ್ಕಳ ಕುರಿತು ಎಚ್ಚರವಹಿಸಲು ಸೂಚಿಸಿದ ಬೆನ್ನಲ್ಲೇ 3ರ ಕಂದಮ್ಮಗೆ ಓಮಿಕ್ರಾನ್ ದೇಶದಲ್ಲಿ ಆತಂಕ ಹೆಚ್ಚಿಸಿದ ಓಮಿಕ್ರಾನ್, ಪ್ರಕರಣ ಸಂಖ್ಯೆ 25ಕ್ಕೆ ಏರಿಕೆ ಮಹಾರಾಷ್ಟ್ರದಲ್ಲಿ ಒಂದೇ ದಿನ 7 ಓಮಿಕ್ರಾನ್ ಕೇಸ್

ಮುಂಬೈ(ಡಿ.10):  ದೇಶದಲ್ಲಿ ಓಮಿಕ್ರಾನ್(Omicron variant) ಪ್ರಕರಣ ತನ್ನ ಆರ್ಭಟ ಹೆಚ್ಚಿಸುತ್ತಿದೆ. ಆತಂಕ ವಾತಾರವಣ ನಿರ್ಮಾಣವಾಗುತ್ತಿದೆ. ಇದೀಗ ಪುಣೆಯಲ್ಲಿ(Pune) 3 ವರ್ಷದ ಪುಟ್ಟ ಕಂದಮ್ಮನಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಹೊಸ 7 ಪ್ರಕರಣ ಖಚಿತಗೊಂಡಿದ್ದರೆ, ದೇಶದಲ್ಲಿ ಓಟ್ಟು ಓಮಿಕ್ರಾನ್(India Omicron case) ರೂಪಾಂತರಿ ತಳಿ ಪ್ರಕರಣ 25ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಲ್ಲಿಂದು ಹೊಸ 7 ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ಮುಂಬೈನಲ್ಲಿ 3 ಪ್ರಕರಣ ಪತ್ತೆಯಾಗಿದೆ. ಇತ್ತ ಪುಣೆಯಲ್ಲಿ ನಾಲ್ಕು ಪ್ರಕರಣ ಪತ್ತೆಯಾಗಿದೆ. ಮುಂಬೈನಲ್ಲಿ 24 ವರ್ಷ, 37 ಹಾಗೂ 48 ವರ್ಷದ ವ್ಯಕ್ತಿಗಳಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದೆ. ಪುಣೆಯಲ್ಲಿ ಖಚಿತಗೊಂಡ 3 ವರ್ಷದ ಮಗುವಿನಲ್ಲಿನ( 3 Year old kid) ಓಮಿಕ್ರಾನ್ ಪ್ರಕರಣ ಇದೀಗ ಪೋಷಕರ ಆತಂಕ ಹೆಚ್ಚಿಸಿದೆ. ಕಳೆದ ಭಾನುವಾರ ಪುಣೆಯಲ್ಲಿ ನೈಜಿರಿಯನ್ ಮಹಿಳೆಯಲ್ಲಿ ಓಮಿಕ್ರಾನ್ ಪತ್ತೆಯಾಗಿತ್ತು. ಈ ಮಹಿಳೆಯ ಸಂಪರ್ಕದಲ್ಲಿದ್ದ 3 ವರ್ಷದ ಕಂದಮ್ಮಗೂ ಓಮಿಕ್ರಾನ್ ಅಂಟಿಕೊಂಡಿದೆ. 

Omicron Effect ಏನು ಮಾಡಬೇಕು ಮುಖ್ಯಮಂತ್ರಿಗಳೇ? ಎಂದು ಕಠಿಣ ಪ್ರಶ್ನೆ ಮುಂದಿಟ್ಟ ನಿರ್ದೇಶಕ ಮಂಸೋರೆ!

ಇಂದು ಮಹಾರಾಷ್ಟ್ರದಲ್ಲಿ ಖಚಿತಗೊಂಡ 7 ಓಮಿಕ್ರಾನ್ ಪ್ರಕರಣಗಳಲ್ಲಿ ಮೂವರು ಎರಡು ಡೋಸ್ ಲಸಿಕೆ(2 Dose vaccine) ಪಡೆದಿದ್ದಾರೆ. ಇನ್ನು ಓರ್ವ ಒಂದು ಡೋಸ್ ಪಡೆದಿದ್ದಾರೆ. ಇದರಲ್ಲಿ ಮೂವರಲ್ಲಿ ಮೈಲ್ಡ್ ರೋಗಲಕ್ಷಣಗಳು ಕಾಣಿಸಿಕೊಂಡಿದೆ. ಇನ್ನುಳಿದವರಲ್ಲಿ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಇಂದು ಪತ್ತೆಯಾಗಿರುವ 7 ಪ್ರಕರಣಗಳಿಂದ ಇದೀಗ ಮಹಾರಾಷ್ಟ್ರದಲ್ಲಿ(Maharastra Omicron case) ಓಮಿಕ್ರಾನ್ ಪ್ರಕರಣ 17ಕ್ಕೆ ಏರಿಕೆಯಾಗಿದೆ. ಹೈ ರಿಸ್ಕಿ ದೇಶಗಳಿಂದ ಮಹಾರಾಷ್ಟ್ರಕ್ಕೆ  9,678 ಪ್ರಯಾಣಿಕರು ಆಗಮಿಸಿದ್ದಾರೆ. ಇವರಲ್ಲಿ ಇದರಲ್ಲಿ 25 ಮಂದಿ ಮಾದರಿಯನ್ನು ಜಿನೋಮ್ ಸೀಕ್ವೆನ್ಸ್ ಪರೀಕ್ಷೆಗೆ ಕಳುಹಿಸಲಾಗಿದೆ.

Covid-19 Variant: ಹೈರಿಸ್ಕ್‌ ದೇಶದಿಂದ ಬಂದ ಮತ್ತೊಬ್ಬನಿಗೆ ಸೋಂಕು, ಆತಂಕದಲ್ಲಿ ಜನತೆ

ಭಾರತದಲ್ಲಿ ಡಿಸೆಂಬರ್ 1 ರವರೆಗಿನ ವರದಿ ಪ್ರಕಾರ  ದೇಶದಿಂದ ಬಂದ 93 ಮಂದಿಯಲ್ಲಿ ಕೊರೋನಾ ಪಾಸಿಟೀವ್(Coronavirus) ಕಾಣಿಸಿಕೊಂಡಿದೆ. ಇದರಲ್ಲಿ 83 ಮಂದಿ ಹೈ ರಿಸ್ಕ್ ದೇಶದಿಂದ ಭಾರತಕ್ಕೆ ಆಗಮಿಸಿದವರಾಗಿದ್ದಾರೆ. ಸದ್ಯ 59 ರಾಷ್ಟ್ರಗಳಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದೆ. 59 ದೇಶಗಲ್ಲಿ ಓಟ್ಟು  2,936 ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. 78,054 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದ್ದು ಇವರ ಮಾದರಿಯನ್ನು ಜಿನೋಮ್ ಸೀಕ್ವೆನ್ಸ್‌ಗೆ ಕಳುಹಿಸಲಾಗಿದೆ. 

ಕರ್ನಾಟಕದ(Karnataka) ಮೂಲಕ ದೇಶಕ್ಕೆ ಕಾಲಿಟ್ಟ ಓಮಿಕ್ರಾನ್ ಇದೀಗ ಹಲವು ರಾಜ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಇದೀಗ ಕರ್ನಾಟಕದಲ್ಲಿ ಓಮಿಕ್ರಾನ್ ಆತಂಕಕ್ಕಿಂತ ಕೊರೋನಾ ವೈರಸ್ ಆತಂಕ ಹೆಚ್ಚಾಗಿದೆ. ಕಾರಣ ಹೈ ರಿಸ್ಕ್ ದೇಶಗಳಿಂದ ಬಂದವರಲ್ಲಿ ಕೊರೋನಾ ಕಾಣಿಸಿಕೊಳ್ಳುತ್ತಿದೆ. ಇತ್ತ ವಿದ್ಯಾರ್ಥಿಗಳುಲ್ಲಿ ಹೆಚ್ಚಿನ ಕೊರೋನಾ ಪತ್ತೆಯಾಗುತ್ತಿದೆ. 

ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 8,503 ಕೊರೋನಾ ವೈರಸ್ ಪ್ರಕರಣ ದೃಢಪಟ್ಟಿದೆ. ಈ ಮೂಲಕ ಭಾರತದಲ್ಲಿ ಓಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 3,46,74,744ಕ್ಕೆ ಏರಿಕೆಯಾಗಿದೆ. ಇದರಲ್ಲಿ ಸಕ್ರೀಯ ಕೊರೋನಾ ಪ್ರಕರಣಗಳ ಸಂಖ್ಯೆ 94,943.  ಇನ್ನು ಕೋವಿಡ್‌ನಿಂದ ಕಳೆದ 24 ಗಂಟೆಯಲ್ಲಿ ಮೃತಪಟ್ಟವರ ಸಂಖ್ಯೆ 624. ಈ ಮೂಲಕ ಕೋವಿಡ್‌ಗೆ ಬಲಿಯಾದವರ ಒಟ್ಟು ಸಂಖ್ಯೆ 4,74,735ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಶೇಕಾಡ 1ಕ್ಕಿಂತ ಕೆಳಗಿದೆ. ಆದರೆ ಸತತ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಆತಂಕ ಹೆಚ್ಚಾಗುತ್ತಿದೆ. ಇದೀಗ ಕರ್ನಾಟಕದಲ್ಲಿ ಪ್ರತಿ ದಿನ 1 ಲಕ್ಷ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ ಕರ್ನಾಟಕದಲ್ಲಿ ಕೊರೋನಾ ಹೆಚ್ಚಾಗುತ್ತಿದ್ದರೂ ಮಾರ್ಗಸೂಚಿಯಲ್ಲಿ ಯಾವದೇ ಬದಲಾವಣೆ ಮಾಡಿಲ್ಲ. ಇನ್ನೊಂದು ವಾರ ಇದೇ ಮಾರ್ಗಸೂಚಿ ಮುಂದುವರಿಯಲಿದೆ. ಇದೇ ವೇಳೆ ಮಾಸ್ಕ್, ಸಾಮಾಜಿಕ ಅಂತರ ಸೇರಿದಂತ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಲು ಕಟ್ಟು ನಿಟ್ಟಿನ ಆದೇಶ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !
ಇನ್ನೂ 3 ದಿನ ತಗ್ಗುವುದಿಲ್ಲ ಇಂಡಿಗೋಳು! - ನಿನ್ನೆ ಮತ್ತೆ 650 ವಿಮಾನ ರದ್ದು