ಕೊರೋನಾತಂಕ: ಬ್ರಿಟನ್‌ ಹಿಂದಿಕ್ಕಿ 4ನೇ ಸ್ಥಾನಕ್ಕೆ ಭಾರತ!

By Kannadaprabha NewsFirst Published Aug 13, 2020, 7:59 AM IST
Highlights

ದೇಶದಲ್ಲಿ ನಿನ್ನೆ 63,994 ಕೇಸ್‌, 944 ಜನ ಸಾವು| ಸಾವು: ಬ್ರಿಟನ್‌ ಹಿಂದಿಕ್ಕಿ 4ನೇ ಸ್ಥಾನಕ್ಕೆ ಭಾರತ

ನವದೆಹಲಿ(ಆ.13): ಕೊರೋನಾ ವೈರಸ್‌ ಪ್ರಕರಣಗಳು ಮತ್ತೊಮ್ಮೆ ಭಾರೀ ಸಂಖ್ಯೆಯಲ್ಲಿ ಏರಿಕೆ ಆಗಿವೆ. ಬುಧವಾರ ದೇಶದಲ್ಲಿ 63,994 ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 23,86,461ಕ್ಕೆ ಏರಿಕೆ ಆಗಿದೆ.

ಕೊರೋನಾಗೆ ರಷ್ಯಾ ಲಸಿಕೆ: ಬಯಲಾಯ್ತು ಶಾಕಿಂಗ್ ಮಾಹಿತಿ!

ಇದೇ ವೇಳೆ ಒಂದೇ ದಿನ 944 ಮಂದಿ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ 47,068ಕ್ಕೆ ತಲುಪಿದೆ. ಈ ಮೂಲಕ ಸಾವಿನ ಸಂಖ್ಯೆಯಲ್ಲಿ ಬ್ರಿಟನ್‌ (46,706) ಅನ್ನು ಭಾರತ ಹಿಂದಿಕ್ಕಿದ್ದು, ಅಮೆರಿಕ, ಬ್ರೆಜಿಲ್‌ ಹಾಗೂ ಮೆಕ್ಸಿಕೋ ಬಳಿಕ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಇದೇ ವೇಳೆ ಒಂದೇ ದಿನ 56,360 ಮಂದಿ ಕೊರೋನಾದಿಂದ ಚೇತರಿಸಿಕೊಂಡಿದ್ದು, ಗುಣಮುಖರಾದವರ ಸಂಖ್ಯೆ 16,85,175ಕ್ಕೆ ಏರಿಕೆ ಆಗಿದೆ.

ಇದೇ ವೇಳೆ ಅತಿ ಹೆಚ್ಚು ಕೇಸ್‌ ದಾಖಲಾಗುತ್ತಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರದಲ್ಲಿ 12,712 ಹೊಸ ಕೇಸ್‌, 344 ಸಾವು, ಆಂಧ್ರ ಪ್ರದೇಶದಲ್ಲಿ 9597 ಕೇಸ್‌, 94 ಸಾವು, ಕರ್ನಾಟಕದಲ್ಲಿ 7,883 ಕೇಸ್‌ 113 ಸಾವು, ದೆಹಲಿಯಲ್ಲಿ 1,113 ಕೇಸ್‌, 14 ಸಾವು ಸಂಭವಿಸಿದೆ.

click me!