ಲಾಕ್‌ಡೌನ್‌ ಸಡಿಲಿಕೆ ಎಫೆಕ್ಟ್: ದೇಶದಲ್ಲಿ ಕೇಸ್‌, ಸಾವಿನ ಸಂಖ್ಯೆ ಏರಿಕೆ!

By Suvarna NewsFirst Published Jul 8, 2021, 12:52 PM IST
Highlights

* ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಹೇರಲಾಗಿದ್ದ ನಿರ್ಬಂಧಗಳನ್ನು ದೇಶಾದ್ಯಂತ ಸಡಿಲ

* ಲಾಕ್‌ಡೌನ್‌ ಸಡಿಲಿಕೆ ಎಫೆಕ್ಟ್: ಕೇಸ್‌, ಸಾವು ಕೊಂಚ ಜಿಗಿತ

* ಬುಧವಾರ 43733 ಜನರಿಗೆ ಸೋಂಕು, 930 ಜನರ ಸಾವು

ನವದೆಹಲಿ(ಜು.08): ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಹೇರಲಾಗಿದ್ದ ನಿರ್ಬಂಧಗಳನ್ನು ದೇಶಾದ್ಯಂತ ಸಡಿಲಗೊಳಿಸಿದ ಪರಿಣಾಮ ಇರಬಹುದು ಎನ್ನವುಂತೆ, ಬುಧವಾರ ಕೊರೋನಾ ಕೇಸ್‌ ಮತ್ತು ಸಾವಿನ ಪ್ರಮಾಣದಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ಬುಧವಾರ ಬೆಳಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆಗಳ ಅವಧಿಯಲ್ಲಿ 43,733 ಮಂದಿಯಲ್ಲಿ ಕೋವಿಡ್‌ ದೃಢಪಟ್ಟಿದೆ. ಮಂಗಳವಾರ ದಾಖಲಾದ 34,703ಕ್ಕೆ ಹೋಲಿಸಿದರೆ, ಬುಧವಾರ 9 ಸಾವಿರದಷ್ಟುಹೆಚ್ಚು ಮಂದಿಗೆ ಸೋಂಕು ತಗುಲಿದೆ.

ಇನ್ನು ಇದೇ ಅವಧಿಯಲ್ಲಿ 930 ಮಂದಿ ಕೋವಿಡ್‌ಗೆ ಬಲಿಯಾಗಿದ್ದು, ಸೋಮವಾರ ಮತ್ತು ಮಂಗಳವಾರದ ಮಧ್ಯೆ 553 ಮಂದಿಯಷ್ಟೇ ಕೊರೋನಾಕ್ಕೆ ಬಲಿಯಾಗಿದ್ದರು. ಮತ್ತೊಂದೆಡೆ ನಿನ್ನೆ ಒಂದೇ ದಿನ 47 ಸಾವಿರಕ್ಕೂ ಹೆಚ್ಚು ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 2.97 ಲಕ್ಷದೊಂದಿಗೆ 3 ಲಕ್ಷದ ಹತ್ತಿರಕ್ಕೆ ದಾಪುಗಾಲಿಡುತ್ತಿದೆ. ಇನ್ನು ದೇಶದಲ್ಲಿ 4.59 ಲಕ್ಷದಷ್ಟುಮಂದಿ ಸಕ್ರಿಯ ಸೋಂಕಿತರಾಗಿದ್ದಾರೆ.

ಕೇರಳದಲ್ಲಿ ಅತಿಹೆಚ್ಚು 14,373 ಕೇಸ್‌ಗಳು, ಮಹಾರಾಷ್ಟ್ರ 8418, ತಮಿಳುನಾಡು 3479 ಮತ್ತು 3104 ಕೋವಿಡ್‌ ಸೋಂಕಿತರೊಂದಿಗೆ ಅತಿಹೆಚ್ಚು ಕೇಸ್‌ ದಾಖಲಾಗುತ್ತಿರುವ ಪಂಚ ರಾಜ್ಯಗಳಾಗಿವೆ.

click me!