ಕೋಲು ಹಿಡಿದು ಮಾಸ್ಕ್ ಹಾಕಿ ಅಂತ ಹೆದರಿಸಿದ ಬಾಲಕ ಈಗ ಪೊಲೀಸ್‌ ಜೊತೆ

By Suvarna NewsFirst Published Jul 8, 2021, 12:40 PM IST
Highlights
  • ಕೋಲು ಹಿಡಿದು ಮಾಸ್ಕ್ ಹಾಕಿ ಅಂತ ಎಚ್ಚರಿಸಿದ ಬಾಲಕ
  • ಧರ್ಮಶಾಲಾದ ಪೋರನ ವಿಡಿಯೋ ವೈರಲ್
  • ಬಾಲಕನನ್ನು ಕರೆದು ತಮ್ಮ ಟೀಂಗೆ ಸೇರಿಸಿದ ಪೊಲೀಸರು

ಧರ್ಮಶಾಲಾ(ಜು.08): ಕಿಕ್ಕಿರಿದ ಧರ್ಮಶಾಲಾ ಬೀದಿಯಲ್ಲಿ ಜನರಲ್ಲಿ ಮಾಸ್ಕ್ ಧರಿಸಲು ಕೇಳುವ ವೀಡಿಯೊ ವೈರಲ್ ಆದ ನಂತರ ನೆಟ್ಟಿಗರ ಮನ ಗೆದ್ದ ಪುಟ್ಟ ‘ಕರೋನಾ ಯೋಧ’ ವೈರಲ್‌ ಆಗಿದ್ದಾನೆ. ಕೊರೋನವೈರಸ್‌ ಪ್ರೋಟೋಕಾಲ್‌ಗಳಿಗಾಗಿ ಸ್ಥಳೀಯ ಪೊಲೀಸರು ಪೋರನನ್ನು ತಮ್ಮ ತಂಡಕ್ಕೆ ಸೇರಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ತನ್ನ ಹೆತ್ತವರ ಆದಾಯಕ್ಕೆ ಪೂರಕವಾಗಿ ನಲೂನ್ ಮಾರುವ ಐದು ವರ್ಷದ ಅಮಿತ್, ಮೆಕ್‌ಲೋಡ್‌ಗಂಜ್ ಬಳಿಯ ಭಾಗ್ಸುನಾಗ್ ಬೀದಿಗಳಲ್ಲಿ ಬರಿಗಾಲಿನಲ್ಲಿ ಕಾಣಿಸಿಕೊಂಡಿದ್ದು, ಜನರನ್ನು ಮಾಸ್ಕ್ ಧರಿಸಿ ಎಂದು ಎಚ್ಚರಿಸುತ್ತಿದ್ದ. ಬಾಲಕನ ವೀಡಿಯೊವನ್ನು ಧರ್ಮಶಾಲೋಕಲ್ ಎಂಬ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾಗಿದ್ದು, ವ್ಯಾಪಕವಾಗಿವೈರಲ್ ಆಗಿದೆ.

“ಈ ಪುಟ್ಟ ಮಗು ಧರ್ಮಶಾಲಾದ ಬೀದಿಗಳಲ್ಲಿ ಜನರಲ್ಲಿ ಮಾಸ್ಕ್ ಧರಿಸಲು ಕೇಳಿಕೊಳ್ಳುತ್ತಿದ್ದ. ಅವನಿಗೆ ಧರಿಸಲು ಶೂಗಳೂ ಇಲ್ಲ. ಈ ಜನರ ನಗುತ್ತಿರುವ ಮುಖಗಳನ್ನು ನೋಡಿ. ಯಾರು ವಿದ್ಯಾವಂತರು ಮತ್ತು ಇಲ್ಲಿ ಯಾರು ಅವಿದ್ಯಾವಂತರು? ಎಂದು ಪೋಸ್ಟ್‌ಗೆ ಕ್ಯಾಪ್ಶನ್ ಕೊಡಲಾಗಿದೆ.

ಹಿಮಾಚಲ ಪ್ರದೇಶದ ಮಾಜಿ ಸಿಎಂ ವೀರಭದ್ರ ಸಿಂಗ್ ನಿಧನ, ಮೋದಿ ಸಂತಾಪ

ಜನರು ಮಾಸ್ಕ್ ಬಳಸುವಂತೆ ಕೇಳುವ ಪೊಲೀಸರನ್ನು ನಾನು ನೋಡುತ್ತೇನೆ. ಜನರು ಪ್ರೋಟೋಕಾಲ್ ಅನ್ನು ಅನುಸರಿಸದ ಕಾರಣ ನಾನು ಸಹ ಪೊಲೀಸರು ಮಾಡುವಂತೆ  ಮಾಡಬೇಕೆಂದು ನಾನು ಭಾವಿಸಿದೆ ಎಂದಿದ್ದಾನೆ ಬಾಲಕ.

ಮೆಚ್ಚುಗೆಯ ಸಂಕೇತವಾಗಿ ಸ್ಥಳೀಯ ಪೊಲೀಸರು ಅಮಿತ್ ಅವರನ್ನು ಗೌರವಿಸಿ ಪಹಾರಿ ಕ್ಯಾಪ್, ತಿಂಡಿ ಮತ್ತು ಎನರ್ಜಿ ಡ್ರಿಂಕ್ ನೀಡಿದರು. 'ಧರ್ಮಶಾಲಾಲೋಕಲ್' ನ ನಿರ್ವಾಹಕರು ಅಮಿತ್‌ಗೆ ಉಡುಗೊರೆ ನೀಡಿದ್ದಾರೆ. ಇನ್ಸ್ಟಾಗ್ರಾಮ್ ಪೇಜ್ ನಡೆಸುತ್ತಿರುವ ಅಭಯ್ ಕಾರ್ಕಿ, ಸ್ಥಳೀಯರಿಂದಲೂ ಸಹಾಯವನ್ನು ಹರಿದು ಬರುತ್ತಿದೆ ಎಂದು ಹೇಳಿದ್ದಾರೆ.

ವಯಸ್ಸಾದ ದಂಪತಿಗಳಿಗೆ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಿದರು. ಅನೇಕರು ಅವರ ಶಿಕ್ಷಣಕ್ಕೆ ಧನಸಹಾಯ ನೀಡಲು ಬಯಸಿದ್ದಾರೆ ಎನ್ನಲಾಗಿದೆ.

ಪ್ರವಾಸಿಗರು ಕೋವಿಡ್ ನಿಯಮ ಅನುಸರಿಸದ ಕಾರಣ ರಾಜ್ಯದ ಪರಿಸ್ಥಿತಿ ಆತಂಕಕಾರಿಯಾಗಿದೆ ಎಂದು ಕಾಂಗ್ರಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ವಿಮುಕ್ತ್ ರಂಜನ್ ಹೇಳಿದ್ದಾರೆ. ಪ್ರವಾಸಿಗರನ್ನು ನಿಭಾಯಿಸಲು ಮೆಕ್ಲಿಯೋಡ್ ಗಂಜ್ ಮತ್ತು ಭಾಸುನಾಗ್ನಲ್ಲಿ ಪೊಲೀಸ್ ನೆರವು ಕೊಠಡಿಗಳನ್ನು ಸ್ಥಾಪಿಸಬೇಕೆಂದು ನಾನು ನಿರ್ದೇಶಿಸಿದ್ದೇನೆ. ರೂಲ್ಸ್ ಪಾಲಿಸದವರಿಗೆ ನಾವು ಭಾರಿ ದಂಡ ವಿಧಿಸುತ್ತೇವೆ ಎಂದು ರಂಜನ್ ಹೇಳಿದ್ದಾರೆ.

click me!