ಕೊರೋನಾ ಕೇಸ್‌ 3.11 ಲಕ್ಷಕ್ಕೆ ಇಳಿಕೆ: 25 ದಿನಗಳ ಕನಿಷ್ಠ!

By Suvarna NewsFirst Published May 17, 2021, 11:31 AM IST
Highlights

* ಕೊರೋನಾ ಕೇಸ್‌ 3.11 ಲಕ್ಷಕ್ಕೆ ಇಳಿಕೆ: 25 ದಿನಗಳ ಕನಿಷ್ಠ

* ಆದರೆ, ಒಂದೇ ದಿನ 4,077 ಮಂದಿ ಸಾವು

* ದೇಶದಲ್ಲಿ ಸಕ್ರಿಯ ಪ್ರಕಣಗಳ ಸಂಖ್ಯೆ 36,18,458 ಲಕ್ಷಕ್ಕೆ ಇಳಿಕೆ

ನವದೆಹಲಿ(ಮೇ.17): ದೇಶದಲ್ಲಿ ಭಾನುವಾರದಂದು 3,11,170 ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗಿದ್ದು ಇದು 25 ದಿನಗಳ ಕನಿಷ್ಠ ಎನಿಸಿಕೊಂಡಿದೆ. ಏ.21ರಂದು 2.95 ಲಕ್ಷ ಕೇಸ್‌ಗಳು ದಾಖಲಾಗಿದ್ದವು. ಆ ಬಳಿಕದ ಕನಿಷ್ಠ ದೈನಂದಿನ ಕೇಸ್‌ ಇದಾಗಿದೆ. ಆದರೆ ಸಾವಿನ ಸಂಖ್ಯೆಯಲ್ಲಿ ಮಾತ್ರ ಇಳಿಕೆ ದಾಖಲಾಗಿಲ್ಲ. ಭಾನುವಾರ ದಿನ 4,077 ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 2.46 ಕೋಟಿಗೆ ಏರಿಕೆ ಆಗಿದ್ದರೆ, ಸಾವಿನ ಸಂಖ್ಯೆ 2.70 ಲಕ್ಷಕ್ಕೆ ಹೆಚ್ಚಳಗೊಂಡಿದೆ.

ಇದೇ ವೇಳೆ ದೇಶದಲ್ಲಿ ಸಕ್ರಿಯ ಪ್ರಕಣಗಳ ಸಂಖ್ಯೆ 36,18,458 ಲಕ್ಷಕ್ಕೆ ಇಳಿಕೆ ಕಂಡಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 55,344 ಸಕ್ರಿಯ ಪ್ರಕರಣಗಳು ಇಳಿಕೆ ಆಗಿವೆ. ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪಾಲು ಶೇ.14.66ರಷ್ಟಿದೆ. ಚೇತರಿಕೆ ಪ್ರಮಾಣ ಶೇ. 84.25ಕ್ಕೆ ತಲುಪಿದೆ. ಅಲ್ಲದೇ ದೈನಂದಿನ ಪಾಸಿಟಿವಿಟಿ ದರ ಶೇ.16.98ಕ್ಕೆ ಇಳಿಕೆ ಆಗಿರುವುದು ಆಶಾದಾಯಕ ಬೆಳವಣಿಗೆ ಎನಿಸಿದೆ.

ಭಾನುವಾರ ದಾಖಲಾದ 4,077 ಸಾವಿನ ಪ್ರಕರಣಗಳ ಪೈಕಿ ಮಹಾರಾಷ್ಟ್ರವೊಂದರಲ್ಲಿಯೇ 960 ಮಂದಿ ಮೃತಪಟ್ಟಿದ್ದರೆ, ನಂತರದ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 349 ಮಂದಿ ಹಾಗೂ ದೆಹಲಿಯಲ್ಲಿ 337 ಮಂದಿ ಸಾವನ್ನಪ್ಪಿದ್ದಾರೆ.

click me!