ವಕ್ಫ್‌ ಮಸೂದೆ ಬಗ್ಗೆ ಪಾಕಿಸ್ತಾನ ತಕರಾರು: ಭಾರತದ ತೀವ್ರ ತಿರುಗೇಟು

Published : Apr 16, 2025, 10:52 AM ISTUpdated : Apr 16, 2025, 11:01 AM IST
ವಕ್ಫ್‌ ಮಸೂದೆ ಬಗ್ಗೆ ಪಾಕಿಸ್ತಾನ ತಕರಾರು: ಭಾರತದ ತೀವ್ರ ತಿರುಗೇಟು

ಸಾರಾಂಶ

ಪಾಕಿಸ್ತಾನವು  ಭಾರತದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಟೀಕಿಸಿದ ನಂತರ ಭಾರತವು ತೀವ್ರವಾಗಿ ಪ್ರತಿಕ್ರಿಯಿಸಿದೆ. ಭಾರತದ ವಿದೇಶಾಂಗ ಇಲಾಖೆಯ ವಕ್ತಾರರು ಪಾಕಿಸ್ತಾನವು ತನ್ನದೇ ಆದ ಅಲ್ಪಸಂಖ್ಯಾತರ ರಕ್ಷಣೆಯ ಕಳಪೆ ದಾಖಲೆಯನ್ನು ಪರಿಶೀಲಿಸಬೇಕೆಂದು ಹೇಳಿದ್ದಾರೆ. 

ನವದೆಹಲಿ: ಭಾರತದ ಸದಾ ಕಾಲ ಕತ್ತಿ ಮಸೆಯುವ ಪಾಕಿಸ್ತಾನ, ಮತ್ತೆ ನಾಲಿಗೆ ಹರಿಬಿಟ್ಟಿದ್ದು, ಈ ಬಾರಿ ವಕ್ಫ್‌ ತಿದ್ದುಪಡಿ ಕಾಯ್ದೆ ಬಗ್ಗೆ ತಕರಾರು ಎತ್ತಿದೆ. ವಕ್ಫ್ ಕಾಯ್ದೆಯಿಂದಾಗಿ ಭಾರತದಲ್ಲಿನ ಮುಸ್ಲಿಮರ ಭೂಮಿ ಮತ್ತು ಹಕ್ಕು ನಷ್ಟವಾಗಲಿದೆ ಎಂದು ಕಿಡಿಕಾರಿದೆ. ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್, 'ಪಾಕಿಸ್ತಾನಕ್ಕೆ ಭಾರತದ ಬಗ್ಗೆ ಮಾತನಾಡುವ ಯಾವುದೇ ಅರ್ಹತೆಯಿಲ್ಲ. ಪಾಕಿಸ್ತಾನವು ಇತರರಿಗೆ ಉಪದೇಶ ಮಾಡುವ ಬದಲು, ತನ್ನಲ್ಲಿ ಅಲ್ಪಸಂಖ್ಯಾತರ ರಕ್ಷಿಸುವ ವಿಷಯಕ್ಕೆ ಬಂದಾಗ ತನ್ನದೇ ಆದ ಕಳಪೆ ದಾಖಲೆಗಳನ್ನು ಪರಿಶೀಲಿಸುವುದು ಉತ್ತಮ ಎಂದು ತಿರುಗೇಟು ನೀಡಿದ್ದಾರೆ.

ತಿದ್ದುಪಡಿ ಕಾಯ್ದೆ ವಿರುದ್ಧದ ಅರ್ಜಿ ಇಂದು ಸುಪ್ರೀಂನಲ್ಲಿ ವಿಚಾರಣೆ 
ನವದೆಹಲಿ: ವಕ್ಪ್‌ ತಿದ್ದುಪಡಿ ಕಾಯ್ದೆ 2025 ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಬುಧವಾರ ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ. ಮುಖ್ಯ ನ್ಯಾಯ ಮೂರ್ತಿ ಸಂಜೀವ್ ಖನ್ನಾ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿಗಳನ್ನು ವಿಚಾರಣೆ ನಡೆಸಲಿದೆ. ಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅವರು ಸಲ್ಲಿಸಿರುವ ಅರ್ಜಿ ಸೇರಿ 10 ಮನವಿಗಳನ್ನು ಪಟ್ಟಿ ಮಾಡಲಾಗಿದೆ. ಹೊಸದಾಗಿ ಸಲ್ಲಿಕೆಯಾಗಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವೈಎಸ್‌ಆರ್‌ಕಾಂಗ್ರೆಸ್, ಸಿಪಿಐ, ನಟ ವಿಜಯ್ ಅವರ ತಮಿಳಗ ವೇಟ್ರಿ ಕಳಗಂ ಪಕ್ಷದ ಅರ್ಜಿಗಳು ವಿಚಾರಣೆಗೆ ಪಟ್ಟಿಯಾಗಿಲ್ಲ. ಮತ್ತೊಂದೆಡೆ ಬಿಜೆಪಿ ಆಡಳಿತದ 6 ರಾಜ್ಯಗಳು ಕಾಯ್ದೆ ಪರವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿವೆ.

ನಮ್ಮದೇ ನೆಲದಲ್ಲಿ ನಿರಾಶ್ರಿತರಾದೆವು: ಬಾಂಗ್ಲಾ ವಿಭಜನೆ ನೆನಪಿಸಿದ ಮುರ್ಷಿದಾಬಾದ್ ಹಿಂಸಾಚಾರ

ಬಂಗಾಳ: ಕೇಂದ್ರ ಸರ್ಕಾರ ಜಾರಿಗೆ ತಂದ ವಕ್ಫ್ ಮಸೂದೆಯ ನಂತರ ಹಿಂಸಾಚಾರ ಭುಗಿಲೆದ್ದಿರುವ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಸಂತ್ರಸ್ತರ ಗೋಳು ಹೇಳತೀರದಾಗಿದೆ. ಒಬ್ಬೊಬ್ಬರದ್ದು ಒಂದೊಂದು ಕಣ್ಣೀರ ಕತೆಯಾಗಿದ್ದು, ಇದುವರೆಗೆ ಇಲ್ಲಿ ನಡೆದ ಹಿಂಸಾಚಾರಕ್ಕೆ ಮೂರು ಬಲಿಯಾಗಿದೆ. ವಕ್ಫ್‌ ತಿದ್ದುಪಡಿ ಮಸೂದೆ ವಿರೋಧಿಸಿ ಹಿಂಸಾಚಾರಕ್ಕಿಳಿದ ಗುಂಪೊಂದು ತಂದೆ 72 ವರ್ಷದ ಹರಿಗೋಬಿಂದ ದಾಸ್‌ ಮಗ ಚಂದನ್‌ ದಾಸ್ ಅವರನ್ನು  ಅವರದೇ ಮನೆಯಿಂದ ಹೊರಕ್ಕೆಳೆದು ಕೊಂದಿದ್ದಾರೆ. ಮತೀಯವಾದಿಗಳ ಹಿಂಸಾಚಾರಕ್ಕೆ ಸಿಲುಕಿ ಮನೆ ಮಟ ಬಿಟ್ಟು ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿರುವ ಒಬ್ಬೊಬ್ಬರದ್ದು ಒಂದೊಂದು ಕಣ್ಣೀರ ಕತೆಯಾಗಿದೆ.  ಹಿಂಸಾಚಾರಿಗಳಿಂದ ಜೀವ ಉಳಿಸಿಕೊಂಡು ಓಡಿ ಬಂದು ಪರ್ಲಾಪುರದ ಹೈಸ್ಕೂಲ್‌ನ ತರಗತಿಯಲ್ಲಿ ಹಾಸಿದ ಟರ್ಪಾಲ್ ಮೇಲೆ ಕುಳಿತಿದ್ದ 24 ವರ್ಷ ಸಪ್ತಮಿ ಮಂಡಲ್ ಅವರ ಕೈಯಲ್ಲಿ ಕೇವಲ 8 ದಿನಗಳಷ್ಟೇ ತುಂಬಿದ್ದ ಮಗುವಿತ್ತು. ವಕ್ಪ್‌ ಮಸೂದೆ ಜಾರಿ ನಂತರ ಕಳೆದ ವಾರ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದ ನಂತರ ಇದನ್ನು ಆಶ್ರಯ ತಾಣವಾಗಿ ಪರಿವರ್ತಿಸಲಾಗಿದೆ. ಮನೆಗಳನ್ನು ಬಿಟ್ಟು ಓಡಿಹೋಗಿ ಈ ಶಾಲೆಯಲ್ಲಿ ಆಶ್ರಯ ಪಡೆದಿರುವ 400 ಪುರುಷರು ಹಾಗೂ ಮಹಿಳೆಯರು ಮತ್ತು ಮಕ್ಕಳಲ್ಲಿ ಒಬ್ಬಳಾದ ಸಪ್ತಮಿ ಮಂಡಲ್‌ ಅವರು ಗಂಗಾ ನದಿಯ ಆಚೆಗೆ 60 ಕಿಲೋಮೀಟರ್ ದೂರದಲ್ಲಿರುವ ತನ್ನ ಹಳ್ಳಿಗೆ ಮತ್ತೆ ಹಿಂದಿರುಗಬಹುದು ಎಂಬುದರ ಬಗ್ಗೆ ಯಾವುದೇ ಖಚಿತತೆ ಇಲ್ಲ.

ಬಾಡಿಗೆ ಕಟ್ಟಿ ಇಲ್ಲ ಜಾಗ ಖಾಲಿ ಮಾಡಿ: ತಮಿಳುನಾಡಿನ ಒಂದೇ ಗ್ರಾಮದ 150 ಕುಟುಂಬಗಳಿಗೆ ವಕ್ಫ್‌ ನೋಟಿಸ್

ಈ ಹಿಂಸಾಚಾರದಲ್ಲಿ 200 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಎಂದು ಪಶ್ಚಿಮ ಬಂಗಾಳ ಪೊಲೀಸರು ಹೇಳಿಕೊಂಡರೂ, ತೊಂದರೆಗೀಡಾದ ಪ್ರದೇಶಗಳಿಂದ ಜೀವ ಉಳಿಸಿಕೊಳ್ಳಲು ಮನೆ ಬಿಟ್ಟು ಬಂದು ನಿರಾಶ್ರಿತ ಶಿಬಿರ ಸೇರಿದವರಿಗೆ ತಾವು ಮತ್ತೆ ತಮ್ಮ ಮನೆಗೆ ಮರಳಬಹುದು ಎಂಬ ಯಾವ ಖಚಿತತೆಯೂ ಇಲ್ಲವಾಗಿದೆ. ಶುಕ್ರವಾರ, ಗುಂಪೊಂದು ನಮ್ಮ ನೆರೆಮನೆಗೆ ಬೆಂಕಿ ಹಚ್ಚಿ ನಮ್ಮ ಮನೆಯ ಮೇಲೆ ಕಲ್ಲು ತೂರಾಟ ನಡೆಸಿತು. ನನ್ನ ಹೆತ್ತವರು ಮತ್ತು ನಾನು ಮನೆ ಒಳಗೆ ಅಡಗಿಕೊಂಡು ಸಂಜೆ ಗುಂಪು ಅಲ್ಲಿಂದ ಹೋದ ನಂತರ ಹೊರಟೆವು. ಆಗ ಬಿಎಸ್‌ಎಫ್ ಗಸ್ತು ತಿರುಗಲು ಪ್ರಾರಂಭಿಸಿತ್ತು. ನಾವು ಧರಿಸಿದ್ದ ಬಟ್ಟೆಗಳು ಮಾತ್ರ ನಮ್ಮ ಬಳಿ ಇದ್ದವು. ಬಿಎಸ್‌ಎಫ್ ಸಹಾಯದಿಂದ ನಾವು ಘಾಟ್‌ (ತಾತ್ಕಾಲಿಕ ಜೆಟ್ಟಿ) ಬಳಿ ಹೋದೆವು ಎಂದು ಪಶ್ಚಿಮ ಬಂಗಾಳದ ಧುಲಿಯನ್‌ನಲ್ಲಿ ವಾಸಿಸುತ್ತಿದ್ದ ಸಪ್ತಮಿ ಹೇಳಿದ್ದಾರೆ. 

ಒಮ್ಮೆ ವಕ್ಫ್‌ ಎಂದಾದರೆ, ಅದು ಶಾಶ್ವತವಾಗಿ ವಕ್ಫ್‌: ತಮಿಳುನಾಡು ಪ್ರಕರ ...

ನಾವು ಹೊರಡುವ ವೇಳೆ ಕತ್ತಲಾಗಿತ್ತು. ನಾವು ದೋಣಿ ಹತ್ತಿ ನದಿ ದಾಟಿದೆವು. ಇನ್ನೊಂದು ಬದಿಯಲ್ಲಿ ಈ ಗ್ರಾಮವಿತ್ತು ಅಲ್ಲಿ ಒಂದು ಕುಟುಂಬವು ನಮಗೆ ರಾತ್ರಿ ಆಶ್ರಯ ನೀಡಿ ಬಟ್ಟೆಗಳನ್ನು ನೀಡಿತು. ಮರುದಿನ, ನಾವು ಈ ಶಾಲೆಗೆ ಬಂದೆವು ಎಂದು ಸಪ್ತಮಿಯ ತಾಯಿ ಮಹೇಶ್ವರಿ ಮೊಂಡೋಲ್ ಹೇಳಿದ್ದಾರೆ. ನಾವು ನದಿ ದಾಟುತ್ತಿದ್ದಂತೆ ನನ್ನ ಮಗುವಿಗೆ ಜ್ವರ ಬಂತು ನಾವು ಈಗ ಇತರರ ಅನುಕಂಪದಲ್ಲಿದ್ದೇವೆ. ನಾವು ನಮ್ಮ ಸ್ವಂತ ಭೂಮಿಯಲ್ಲಿ ನಿರಾಶ್ರಿತರಾಗಿದ್ದೇವೆ. ಬಹುಶಃ ನಾವು ಎಂದಿಗೂ ಹಿಂತಿರುಗದಿರಬಹುದು. ಅವರು ಮತ್ತೆ ನಮ್ಮ ಮೇಲೆ ದಾಳಿ ಮಾಡಿದರೆ ಏನು ಗತಿ ಎಂದು ಸಪ್ತಮಿ ಅವರು ಆತಂಕದಿಂದ ಪ್ರಶ್ನೆ ಮಾಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ