ಚೀನಾಕ್ಕೆ ಶಾಕ್, ಅಮೆರಿಕಾಗೆ ಡಬಲ್ ಶಾಕ್; ಎಐ ಅಖಾಡಕ್ಕೆ ಇಳಿದ ಭಾರತ! ಅಶ್ಚಿನಿ ವೈಷ್ಣವ್ ಮಹತ್ವದ ಘೋಷಣೆ!

Published : Jan 30, 2025, 02:04 PM ISTUpdated : Jan 30, 2025, 03:29 PM IST
ಚೀನಾಕ್ಕೆ ಶಾಕ್, ಅಮೆರಿಕಾಗೆ ಡಬಲ್ ಶಾಕ್; ಎಐ ಅಖಾಡಕ್ಕೆ ಇಳಿದ ಭಾರತ! ಅಶ್ಚಿನಿ ವೈಷ್ಣವ್ ಮಹತ್ವದ ಘೋಷಣೆ!

ಸಾರಾಂಶ

ಕೇಂದ್ರ ಸಚಿವ ಅಶ್ಚಿನಿ ವೈಷ್ಣವ್ ಅವರು ಭಾರತವು ತನ್ನದೇ ಆದ AI ಮಾದರಿಯನ್ನು 6-8 ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಈ ಮಾದರಿಯು ಭಾರತದ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಡೇಟಾಸೆಟ್‌ನೊಂದಿಗೆ ನಿರ್ಮಿಸಲಾಗುವುದು.

ದೆಹಲಿ (ಜ.30): ಅಮೆರಿಕ ಚೀನಾ ನಡುವೆ ಎಐ ತೀವ್ರತೆ ಪೈಪೋಟಿ ನಡೆದಿರುವ ಬೆನ್ನಲ್ಲೇ ಇದೀಗ ಭಾರತವು ಸಹ ಎಐ ರೇಸ್‌ನಲ್ಲಿ ಸೇರಲು ತಯಾರಿ ನಡೆಸಿದೆ. ಹೌದು. ಚಾಟ್ ಜಿಪಿಟಿ,ಡೀಪ್‌ಸೀಕ್‌ ಎಐನಂತೆ ಭಾರತವು ಸಹ ತನ್ನದೇ ಆದ ಜನರೇಟಿವ್ ಎಐ ಮಾದರಿಯನ್ನು ರಚಿಸಲಿದೆ. 

ಒಡಿಶಾದ ಕಾರ್ಯಕ್ರಮವೊಂದರಲ್ಲಿ ಈ ವಿಚಾರವಾಗಿ ಮಾತನಾಡಿರುವ ಕೇಂದ್ರ ಸಚಿವ ಅಶ್ಚಿನಿ ವೈಷ್ಣವ್, ಭಾರತ ತನ್ನದೇ ಆದ ಎಐ ಮಾದರಿಯನ್ನು ಈ ವರ್ಷವೇ ಬಿಡುಗಡೆ ಮಾಡಲಾಗುವುದು.

ಭಾರತದಲ್ಲಿ ಕನಿಷ್ಠ ಆರು ದೊಡ್ಡ ಡೆವಲಪರ್‌ಗಳಿದ್ದಾರೆ. ಅವರು ಗರಿಷ್ಠ 6-8 ತಿಂಗಳುಗಳಲ್ಲಿ AI ಮಾದರಿಗಳನ್ನು ರಚಿಸಬಹುದು. ಪರಿಸರ ವ್ಯವಸ್ಥೆಯನ್ನು ರಚಿಸಲು, ಸಾಮಾನ್ಯ ಕಂಪ್ಯೂಟ್ ಸೌಲಭ್ಯಕ್ಕಾಗಿ ನಮ್ಮದೇ ಪ್ರಬಲವಾದ AI ಮಾದರಿ ಅಭಿವೃದ್ಧಿಪಡಿಸುವುದು ಇಂದಿನ ಅಗತ್ಯ ಮತ್ತು ಅತ್ಯಂತ ಮುಖ್ಯವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: DeepSeek ಎಂದರೇನು? ಕಳೆದೆರಡು ದಿನಗಳಿಂದ ಜಗತ್ತಿನಾದ್ಯಂತ ಚರ್ಚೆ ಆಗ್ತಿದೆ ಏಕೆ?

ಭಾರತದ AI ಮಿಷನ್ ಅನ್ನು ಗಮನದಲ್ಲಿಟ್ಟುಕೊಂಡು, ಹಂಚಿಕೆಯ ಕಂಪ್ಯೂಟಿಂಗ್ ಸಂಪನ್ಮೂಲಗಳನ್ನು ಸ್ಥಾಪಿಸಲು ಸರ್ಕಾರವು ಆದ್ಯತೆ ನೀಡಿದೆ. ಭಾರತ ಎಐ ಕಂಪ್ಯೂಟ್ ಸೌಲಭ್ಯವು ನಿರೀಕ್ಷೆಗಳನ್ನು ಮೀರಿದೆ ಮತ್ತು ಸುಮಾರು 19,000 ಜಿಪಿಯುಗಳನ್ನು ಪಡೆದುಕೊಂಡಿದೆ  ಇವುಗಳಲ್ಲಿ 12,896 Nvidia H100 GPU ಮತ್ತು 1,480 Nvidia H200 GPU ಇವೆ. ಅವುಗಳ ಪೈಕಿ 10,000 ಜಿಪಿಯುಗಳು ಈಗ ಬಳಕೆಗೆ ಸಿದ್ಧವಾಗಿವೆ. ಈ ಸೌಲಭ್ಯವು ಎಲ್ಲರಿಗೂ ಮುಕ್ತವಾಗಲಿದ್ದು, ಮುಂದಿನ ದಿನಗಳಲ್ಲಿ ಇದರ ಕಾರ್ಯಾಚರಣೆ ಆರಂಭವಾಗಲಿದೆ ಎಂದಿದ್ದಾರೆ.

ಭಾರತವು ಫೌಂಡೇಶನ್ ಎಐ ಮಾದರಿಯ ಸಹ ಸಿದ್ಧಪಡಿಸುತ್ತದೆ

ಭಾರತವು ತನ್ನದೇ ಆದ ಫೌಂಡೇಶನ್ ಎಐ(AI foundation) ಮಾದರಿಯನ್ನು ಸಿದ್ಧಪಡಿಸುತ್ತದೆ ಈ ಮಾದರಿಯು 6-8 ತಿಂಗಳುಗಳಲ್ಲಿ ಸಿದ್ಧವಾಗಲಿದೆ. ಭಾರತದ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅದರ ಡೇಟಾಸೆಟ್ ಅನ್ನು ಸಿದ್ಧಪಡಿಸಲಾಗುತ್ತದೆ. AI ಮಾದರಿಗಳನ್ನು ರಚಿಸಲು ಆಸಕ್ತಿ ಹೊಂದಿರುವ ಡೆವಲಪರ್‌ಗಳು ತಮ್ಮ ಪ್ರಸ್ತಾವನೆಗಳನ್ನು ಸಲ್ಲಿಸಬಹುದಾಗಿದೆ ಎಂದಿದ್ದಾರೆ.

ಇದನ್ನೂ ಓದಿ; ಏನಿದು ಅಮೆರಿಕವನ್ನೇ ನಡುಗಿಸಿದ ಚೀನಾದ ಉಚಿತ AI ಡೀಪ್‌ಸೀಕ್? ಬಳಕೆ, ಡೌನ್ಲೋಡ್ ಹೇಗೆ?

ಎಐ ಜನರೇಟರ್ ತೀವ್ರ ಪೈಪೋಟಿ:

2023 ರ ಕೊನೆಯಲ್ಲಿ OpenAI  ChatGPT ಅನ್ನು ಪ್ರಾರಂಭಿಸುವ ಮೂಲಕ AI ಯುಗ ಪ್ರಾರಂಭವಾಯ್ತು. ಈ ರೇಸ್‌ನಲ್ಲಿ ಇದೀಗ ಚೀನಾದ ಸ್ಟಾರ್ಟ್‌ಅಪ್ DeepSeek ಸೇರಿದೆ. ಚೀನಾವು ಅಮೆರಿಕನ್ ಕಂಪನಿಗಳಿಗಿಂತ ಕಡಿಮೆ ವೆಚ್ಚದಲ್ಲಿ AI ಮಾದರಿಗಳನ್ನು ಅಭಿವೃದ್ಧಿಪಡಿಸುವ ಮೂಲಕ ವಿಶ್ವದ ದೊಡ್ಡಣ್ಣ ಅಮೆರಿಕವನ್ನೇ ಅಲುಗಾಡಿಸಿದೆ ಸದ್ಯ ಅಮೆರಿಕ-ಚೀನಾ ನಡುವೆ ಎಐ ರೇಸ್‌ನಲ್ಲಿ ತೀವ್ರ ಪೈಪೋಟಿ ನಡೆದಿರುವ ಬೆನ್ನಲ್ಲೇ ಇದೀಗ ಭಾರತವೂ ಸಹ ಎಐ ರೇಸ್‌ಗೆ ಸಿದ್ಧವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ