ಚೀನೀ ಸ್ಟಾರ್ಟ್‌ಅಪ್ ಡೀಪ್‌ಸೀಕ್ ರಾತ್ರೋರಾತ್ರಿ ಸುದ್ದಿಯಲ್ಲಿದೆ. ಕೇವಲ 24 ಗಂಟೆಗಳಲ್ಲಿ ಎಲ್ಲರ ಬಾಯಲ್ಲೂ ಇದರದ್ದೇ ಚರ್ಚೆ.ನಡೆಯುತ್ತದೆ. ಷೇರುಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ.
ಡೀಪ್‌ಸೀಕ್ ವಿಶ್ವದ ಅತಿದೊಡ್ಡ ಸೆಮಿಕಂಡಕ್ಟರ್ ಕಂಪನಿ Nvidiaಗೆ ಒಂದೇ ಹೊಡೆತದಲ್ಲಿ ಸುಮಾರು 50 ಲಕ್ಷ ಕೋಟಿ ನಷ್ಟ ಉಂಟುಮಾಡಿದೆ. ಡೀಫ್‌ಸೀಕ್‌ನಿಂದ ಅಮೆರಿಕವೇ ಬೆಚ್ಚಿಬಿದ್ದಿದೆ.
ಈ ಚೀನೀ ಕಂಪನಿ ಡೀಪ್‌ಸೀಕ್‌ನ ಸಂಸ್ಥಾಪಕರು ಯಾರು ಮತ್ತು ಇದರ ಬಗ್ಗೆ ಏಕೆ ಹೆಚ್ಚು ಚರ್ಚೆ ನಡೆಯುತ್ತಿದೆ ಎಂದು ತಿಳಿಯೋಣ.
ಚೀನಾದ AI ಸ್ಟಾರ್ಟ್‌ಅಪ್ ಡೀಪ್‌ಸೀಕ್‌ನ ಸಂಸ್ಥಾಪಕ ಮತ್ತು CEO ಲಿಯಾಂಗ್ ವೆನ್‌ಫೆಂಗ್ (Liang Wenfeng).
ಈ ಸ್ಟಾರ್ಟ್‌ಅಪ್ ಇತ್ತೀಚೆಗೆ ತನ್ನ AI ಚಾಟ್‌ಬಾಟ್ (ಡೀಪ್‌ಸೀಕ್-R1) ಅನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾದ ತಕ್ಷಣ, ಇಡೀ ಜಗತ್ತಿನಲ್ಲಿ ಇದರ ಬಗ್ಗೆ ಚರ್ಚೆ ಪ್ರಾರಂಭವಾಯಿತು.
ಡೀಪ್‌ಸೀಕ್ OpenAI ನ ChatGPT ಯನ್ನು ಹಿಂದಿಕ್ಕಿ ಅಮೆರಿಕದಲ್ಲಿ ಹೆಚ್ಚು ರೇಟಿಂಗ್ ಪಡೆದ ಉಚಿತ ಅಪ್ಲಿಕೇಶನ್ ಆಗಿದೆ.
ಲಿಯಾಂಗ್ ವೆನ್‌ಫೆಂಗ್ ಡೀಪ್‌ಸೀಕ್ ಅನ್ನು ಕಡಿಮೆ ವೆಚ್ಚದಲ್ಲಿ ಅಂದರೆ ಕೇವಲ 60 ಲಕ್ಷ ಡಾಲರ್‌ಗಳಲ್ಲಿ ನಿರ್ಮಿಸಿದ್ದಾರೆ. ಚಾಟ್ GPT ನಿರ್ಮಾಣಕ್ಕೆ 6 ಕೋಟಿ ಡಾಲರ್‌ಗಳಿಗಿಂತ ಹೆಚ್ಚು ವೆಚ್ಚವಾಗಿದೆ.
ಲಿಯಾಂಗ್ ವೆನ್‌ಫೆಂಗ್ ಅವರ ಕಂಪನಿಯು ಇದನ್ನು ಕಡಿಮೆ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದೆ, ಇದರಿಂದಾಗಿ ಅವರು ಚರ್ಚೆಯಲ್ಲಿದ್ದಾರೆ. ಅವರ ಕಂಪನಿ ಕೇವಲ ಎರಡು ವರ್ಷಗಳ ಹಿಂದೆ (2023 )ರಲ್ಲಿ ಪ್ರಾರಂಭವಾಯಿತು.
40 ವರ್ಷದ ಲಿಯಾಂಗ್ ವೆನ್‌ಫೆಂಗ್ 2013 ರಲ್ಲಿ ಹ್ಯಾಂಗ್‌ಝೌ ಯಾಕೆಬಿ ಇನ್ವೆಸ್ಟ್‌ಮೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಸ್ಥಾಪಿಸಿದರು. ಎರಡು ವರ್ಷದ ನಂತರ ಝೆಜಿಯಾಂಗ್ ಜಿಯುಝಾಂಗ್ ಅಸೆಟ್ ಮ್ಯಾನೇಜ್‌ಮೆಂಟ್ ಸ್ಥಾಪಿಸಿದರು.
ಲಿಯಾಂಗ್ ವೆನ್‌ಫೆಂಗ್ 2019 ರಲ್ಲಿ ಹೈ-ಫ್ಲೈಯರ್ AI ಅನ್ನು ಪ್ರಾರಂಭಿಸಿದರು, ಇದು 10 ಶತಕೋಟಿ ಯುವಾನ್‌ಗಿಂತ ಹೆಚ್ಚಿನ ಆಸ್ತಿಯನ್ನು ನಿರ್ವಹಿಸುವ ಉದ್ಯಮವಾಗಿದೆ.