
ಈಗಾಗಲೇ ಪಾಠ ಬೋಧನೆ ಮಾಡುವ ಹಲವು ಶಿಕ್ಷಕರು, ಉಪನ್ಯಾಸಕರು ತಮ್ಮ ವಿದ್ಯಾರ್ಥಿನಿಯರನ್ನೇ ಮದುವೆಯಾಗಿರುವ ಘಟನೆಗಳನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಕಾಲೇಜು ಪ್ರಾಧ್ಯಾಪಕಿ ಪದವಿ ಅಭ್ಯಾಸ ಮಾಡುತ್ತಿದ್ದ ಯುವಕನನ್ನು ತರಗತಿ ಕೋಣೆಯಲ್ಲಿಯೇ ಮದುವೆ ಮಾಡಿಕೊಂಡಿರುವ ವೀಡಿಯೋ ವೈರಲ್ ಆಗಿದೆ.
ಹೌದು, ತರಗತಿಯಲ್ಲೇ ಕಾಲೇಜು ಪ್ರಾಧ್ಯಾಪಕಿ, ಪ್ರಥಮ ವರ್ಷದ ಪದವಿ ವಿದ್ಯಾರ್ಥಿಯನ್ನು ಮದುವೆಯಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಂಗಾಳದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಈ ವಿವಾದಾತ್ಮಕ ಘಟನೆ ನಡೆದಿದೆ. ತರಗತಿಯಲ್ಲಿ ಇತರ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡು ಮದುವೆಯಾಗುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಕಾಲೇಜು ಆಡಳಿತ ಮಂಡಳಿ ಶಿಕ್ಷಕಿಗೆ ಕಡ್ಡಾಯ ರಜೆ ಮೇಲೆ ತೆರಳುವಂತೆ ಸೂಚಿಸಿದೆ.
ಒಂದು ಪ್ರಾಜೆಕ್ಟ್‌ನ ಭಾಗವಾಗಿ ವಿದ್ಯಾರ್ಥಿಯೊಂದಿಗೆ ಕೇವಲ ನಾಟಕೀಯವಾಗಿ ಈ ಮದುವೆ ನಡೆದಿದೆ. ಇದು ನೈಜ ಮದುವೆಯಲ್ಲ ಎಂದು ಪ್ರಾಧ್ಯಾಪಕಿ ಆಡಳಿತ ಮಂಡಳಿ ಜೊತೆಗೆ ವಾದಿಸಿದ್ದಾರೆ. ಆದರೂ ಅದನ್ನು ಆಲಿಸದ ಕಾಲೇಜು ಆಡಳಿತ ಮಂಡಳಿ ಪ್ರಾಧ್ಯಾಪಕಿಗೆ ರಜೆ ಮೇಲೆ ತೆರಳುವಂತೆ ಸೂಚಿಸಿದೆ ಎಂದು ವರದಿಗಳಿವೆ. ಕಾಲೇಜಿನ ಅನ್ವಯಿಕ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕಿ, ವಧುವಿನಂತೆ ಸಿಂಗಾರಗೊಂಡು ವಿದ್ಯಾರ್ಥಿಯನ್ನು ಮದುವೆಯಾಗಿದ್ದಾರೆ. ಇಬ್ಬರೂ ಕ್ಲಾಸ್‌ನ ಬೋರ್ಡ್ ಬಳಿ ನಿಂತು ಪರಸ್ಪರ ಹಾರ ಬದಲಾಯಿಸಿಕೊಂಡಿದ್ದು, ವಿದ್ಯಾರ್ಥಿ ಶಿಕ್ಷಕಿಯ ಹಣೆಗೆ ಸಿಂಧೂರ ಹಚ್ಚುವುದು ವಿಡಿಯೋದಲ್ಲಿದೆ. ಕೆಲವರು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ವ್ಯಾಪಕವಾಗಿ ಹರಡಿದ ನಂತರ ಕಾಲೇಜು ಆಡಳಿತ ಮಂಡಳಿ ಶಿಕ್ಷಕಿಯಿಂದ ವಿವರಣೆ ಕೇಳಿದೆ.
ಇದನ್ನೂ ಓದಿ: ಬೆಂಗಳೂರು ಮಹಿಳೆ ₹1.5 ಲಕ್ಷ ಸಂಬಳ ಬಿಟ್ಟು ತನಗಿಷ್ಟದ ಕೆಲಸ ಆಯ್ಕೆ; ಮೆಚ್ಚುಗೆಯ ಮಹಾಪೂರ!
ಆದರೆ, ಕ್ಯಾಂಪಸ್‌ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ನಡೆಸುವ ಫ್ರೆಶರ್ಸ್ ಡೇ ಆಚರಣೆಯ ಭಾಗವಾಗಿ ತಮಾಷೆಗಾಗಿ ಮದುವೆ ನಡೆದಿದೆ ಎಂದು ಶಿಕ್ಷಕಿ ವಾದಿಸಿದ್ದಾರೆ. ತಪ್ಪು ತಿಳುವಳಿಕೆ ಉಂಟುಮಾಡುವ ರೀತಿಯಲ್ಲಿ ಕೆಲವರು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದೂ ಅವರು ಹೇಳಿದ್ದಾರೆ. ಸುಳ್ಳು ಪ್ರಚಾರ ಮಾಡಿ ವಿಡಿಯೋ ಹರಿಬಿಟ್ಟವರ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ಶಿಕ್ಷಕಿ ಪ್ರತಿಕ್ರಿಯಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.
ಇದನ್ನೂ ಓದಿ: POCSO Act: 10ನೇ ಕ್ಲಾಸ್ ಹುಡುಗನ ಮದುವೆಯಾದ ಲೇಡಿ ಟೀಚರ್‌ಗೆ ಸಿಕ್ಕ ಬಹುಮಾನ!
ವಿಡಿಯೋ ಸಂಬಂಧ ವಿಶೇಷ ಸಮಿತಿ ರಚಿಸಿ ತನಿಖೆ ನಡೆಸಲಾಗುವುದು ಎಂದು ಕುಲಪತಿ ತಪಸ್ ಚಕ್ರಬೋರ್ತಿ ಸ್ಪಷ್ಟಪಡಿಸಿದ್ದಾರೆ. ಯಾವುದೇ ಅನುಚಿತ ವರ್ತನೆ ಇಲ್ಲ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕಿಗೆ ರಜೆ ಮೇಲೆ ತೆರಳುವಂತೆ ಸೂಚಿಸಲಾಗಿದೆ ಎಂದು ಕುಲಪತಿ ಹೇಳಿದ್ದಾರೆ. ಇತ್ತ, ಶಿಕ್ಷಕಿಯ ವಿಡಿಯೋ ವಿರುದ್ಧ ಬಂಗಾಳದ ಶಿಕ್ಷಕರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಶಿಕ್ಷಕಿಯ ಕೃತ્યವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ, ಕ್ರಮ ಕೈಗೊಳ್ಳಬೇಕು ಎಂದು ವಿಶ್ವವಿದ್ಯಾಲಯ ಶಿಕ್ಷಕರ ಸಂಘ ಪ್ರತಿಕ್ರಿಯಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ