ಸತತ 2ನೇ ವಾರ್‌ ಆರ್‌ ವ್ಯಾಲ್ಯೂ 2.1: ಪ್ರತಿ ಸೋಂಕಿತನಿಂದ ಇಬ್ಬರಿಗೆ ಹಬ್ಬುತ್ತಿದೆ ಕೋವಿಡ್‌

Published : Apr 24, 2022, 06:38 AM ISTUpdated : Apr 24, 2022, 09:19 AM IST
ಸತತ 2ನೇ ವಾರ್‌ ಆರ್‌ ವ್ಯಾಲ್ಯೂ 2.1: ಪ್ರತಿ ಸೋಂಕಿತನಿಂದ ಇಬ್ಬರಿಗೆ ಹಬ್ಬುತ್ತಿದೆ ಕೋವಿಡ್‌

ಸಾರಾಂಶ

* ದೆಹಲಿಯಲ್ಲಿ ಸತತ ಎರಡನೇ ವಾರವೂ ಆರ್‌- ವ್ಯಾಲ್ಯೂ ಹೆಚ್ಚಳ * ಸತತ 2ನೇ ವಾರ್‌ ಆರ್‌ ವ್ಯಾಲ್ಯೂ 2.1 * ಪ್ರತಿ ಸೋಂಕಿತನಿಂದ ಇಬ್ಬರಿಗೆ ಹಬ್ಬುತ್ತಿದೆ ಕೋವಿಡ್‌

ನವದೆಹಲಿ(ಏ.24): ದೆಹಲಿಯಲ್ಲಿ ಸತತ ಎರಡನೇ ವಾರವೂ ಆರ್‌- ವ್ಯಾಲ್ಯೂ (ಒಬ್ಬರಿಂದ ಎಷ್ಟುಜನರಿಗೆ ಕೋವಿಡ್‌ ಸೋಂಕು ಹರಡುತ್ತಿದೆ ಎಂಬುದನ್ನು ತಿಳಿಸಲು ಇರುವ ಮಾನದಂಡ) 2ಕ್ಕಿಂತ ಹೆಚ್ಚು ದಾಖಲಾಗಿದೆ ಎಂದು ಐಐಟಿ ಮದ್ರಾಸ್‌ನ ತಜ್ಞರ ತಂಡ ಹೇಳಿದೆ. ಸದ್ಯ ದೇಶದಲ್ಲೇ ಅತಿ ಹೆಚ್ಚು ಕೇಸು ದಾಖಲಾಗುತ್ತಿರುವ ದೆಹಲಿಯಲ್ಲಿ ಕಳೆದ ವಾರ 2.12ರಷ್ಟುಆರ್‌- ವ್ಯಾಲ್ಯೂ ದಾಖಲಾಗಿತ್ತು. ಇದೀಗ ಏ.18-23 ವಾರದಲ್ಲೂ ಆರ್‌ ವ್ಯಾಲ್ಯೂ 2.1ರಷ್ಟಿದೆ. ಅಂದರೆ ಒಬ್ಬ ಸೋಂಕಿತನಿಂದ 2.1 ಜನರಿಗೆ ಸೋಂಕು ಹಬ್ಬುತ್ತಿದೆ ಎಂದು ತಜ್ಞರ ತಂಡ ಹೇಳಿದೆ.

ಆರ್‌ ವ್ಯಾಲ್ಯೂ 1ಕ್ಕಿಂತ ಕಡಿಮೆ ಇದ್ದರೆ ಸಾಂಕ್ರಾಮಿಕ ಮುಕ್ತಾಯದ ಹಂತದ ಸಾಗುತ್ತಿದೆ ಎಂದು ಪರಿಗಣಿಸಲಾಗುತ್ತದೆ. ಆದರೆ ದೆಹಲಿಯಲ್ಲಿ ಕಳೆದ 3 ತಿಂಗಳಲ್ಲೇ ಮೊದಲ ಬಾರಿಗೆ, ಕಳೆದ ವಾರ ಆರ್‌ ವ್ಯಾಲ್ಯೂ ಶೇ.1ರ ಗಡಿ ದಾಟುವ ಮೂಲಕ ಆತಂಕ ಹುಟ್ಟುಹಾಕಿತ್ತು. ಇದೀಗ ಸತತ 2ನೇ ವಾರ ಕೂಡಾ ಹರಡುವಿಕೆ ಪ್ರಮಾಣ ಹೆಚ್ಚು ಕಡಿಮೆ ಅದೇ ಮಟ್ಟದಲ್ಲಿ ಇರುವ ಕಾರಣ, ಮುಂದಿನ ವಾರಗಳಲ್ಲಿ ಸೋಂಕಿತರ ಪ್ರಮಾಣ ಮತ್ತಷ್ಟುಹೆಚ್ಚುವ ಆತಂಕ ಎದುರಾಗಿದೆ.

"

ಒಮಿಕ್ರೋನ್‌ ಉಪತಳಿ ಬೆಂಗಳೂರಿನಲ್ಲೂ ಪತ್ತೆ!

ದೆಹಲಿಯಲ್ಲಿ ಸೋಂಕು ಉಲ್ಬಣಕ್ಕೆ ಕಾರಣವಾದ ಒಮಿಕ್ರೋನ್‌ನ 2 ಹೊಸ ಉಪತಳಿಗಳು ಬೆಂಗಳೂರಿನಲ್ಲೂ ಪತ್ತೆಯಾಗಿವೆ. ಬೆಂಗಳೂರಿನ ಮೂಲದ ಇಬ್ಬರು ಸೋಂಕಿತರಲ್ಲಿ ‘ಬಿಎ.2’ ವಿಭಾಗಕ್ಕೆ ಸೇರುವ ‘ಬಿಎ.2.10’ ಹಾಗೂ ‘ಬಿಎ.2.12’ ಎಂಬ ಒಮಿಕ್ರೋನ್‌ ಉಪತಳಿಗಳು ದೃಢಪಟ್ಟಿವೆ ಎಂದು ತಿಳಿದು ಬಂದಿದೆ. ಆದರೆ, ಎರಡೂ ಉಪತಳಿಗಳ ಪತ್ತೆಯನ್ನು ಆರೋಗ್ಯ ಇಲಾಖೆ ಅಧಿಕೃತವಾಗಿ ಖಚಿತಪಡಿಸಿಲ್ಲ. ಈ ನಡುವೆ, ರಾಜ್ಯದಲ್ಲಿ ಸದ್ಯದಲ್ಲೇ 4ನೇ ಅಲೆ ಏಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಖಾಸಗಿ ಪ್ರಯೋಗಾಲಯದ ಮೂಲಗಳ ಪ್ರಕಾರ ಬಿಎ.2 ವಿಭಾಗಕ್ಕೆ ಸೇರಿದ ಒಮಿಕ್ರೋನ್‌ನ ಎರಡು ಹೊಸ ಉಪತಳಿಗಳು ರಾಜ್ಯದಲ್ಲಿ ಕಾಣಿಸಿಕೊಂಡಿವೆ. ಬೆಂಗಳೂರಿನ ಖಾಸಗಿ ಪ್ರಯೋಗಾಲಯ ನಡೆಸಿರುವ ವಂಶವಾಹಿ ಪರೀಕ್ಷೆಯಲ್ಲಿ ಉಪತಳಿಗಳು ಪತ್ತೆಯಾಗಿದ್ದು, ಇಬ್ಬರೂ ಸೋಂಕಿತರು ಬೆಂಗಳೂರಿನ ಮೂಲದವರು ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ನಾಲ್ಕು ವಾರದಲ್ಲಿ 4ನೇ ಅಲೆ- ಮಂಜುನಾಥ್‌:

ಹೊಸ ಪ್ರಕರಣಗಳಿಂದಾಗಿ ಸದ್ಯದಲ್ಲೇ ರಾಜ್ಯದಲ್ಲಿ ನಾಲ್ಕನೇ ಅಲೆಯ ಎದುರಾಗುವ ಭೀತಿ ಉಂಟಾಗಿದೆ. ‘ಮುಂದಿನ 4-5 ವಾರದಲ್ಲೇ ರಾಜ್ಯದಲ್ಲಿ ಕೊರೋನಾ ನಾಲ್ಕನೇ ಅಲೆ ಕಾಣಿಸಿಕೊಳ್ಳಲಿದೆ. ವೇಗವಾಗಿ ಹರಡಿದರೂ ಸೋಂಕಿನ ತೀವ್ರತೆ ಕಡಿಮೆ ಇರುವುದರಿಂದ ಮೂರನೇ ಅಲೆ ಮಾದರಿಯಲ್ಲೇ ಒಂದೂವರೆ ತಿಂಗಳಲ್ಲಿ ಕಡಿಮೆಯಾಗಲಿದೆ’ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ಅಭಿಪ್ರಾಯಪಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
20 ತಿಂಗಳಲ್ಲಿ ಶೇ.55,000ರಷ್ಟು ಏರಿಕೆ ಷೇರು! ಅಚ್ಚರಿ!