ಕೊರೋನಾ ಸೋಂಕು: ರಷ್ಯಾ ಹಿಂದಿಕ್ಕಿ ಭಾರತ ನಂ.3!

By Kannadaprabha News  |  First Published Jul 6, 2020, 7:20 AM IST

ರಷ್ಯಾ ಹಿಂದಿಕ್ಕಿ ಭಾರತ ನಂ.3!| ನಿನ್ನೆ 23205 ಕೇಸ್‌, 415 ಸಾವು| ಇಂದು 7 ಲಕ್ಷ ಗಡಿ ದಾಟುವ ಸಂಭವ


ನವದೆಹಲಿ(ಜು.06): ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೋನಾ ವೈರಸ್‌ನಿಂದ ಅತಿ ಹೆಚ್ಚು ಬಾಧಿತವಾಗಿರುವ ದೇಶಗಳ ಪೈಕಿ ಅಮೆರಿಕ ಮತ್ತು ಬ್ರೆಜಿಲ್‌ ಬಳಿಕ ಭಾರತ ಈಗ ವಿಶ್ವದಲ್ಲೇ ಮೂರನೇ ಸ್ಥಾನಕ್ಕೆ ಏರಿದೆ. ಭಾರತದಲ್ಲಿ ಭಾನುವಾರ ಒಂದೇ ದಿನ 23205 ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 690349ಕ್ಕೆ ತಲುಪಿದೆ. 4ನೇ ಸ್ಥಾನಕ್ಕೆ ಇಳಿಕೆ ಕಂಡಿರುವ ರಷ್ಯಾದಲ್ಲಿ 6.81 ಲಕ್ಷ ಪ್ರಕರಣಗಳು ದಾಖಲಾಗಿವೆ. 29 ಲಕ್ಷಕ್ಕೂ ಅಧಿಕ ಸೋಂಕಿತರೊಂದಿಗೆ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, 15.78 ಲಕ್ಷ ಸೋಂಕಿತರೊಂದಿಗೆ ಬ್ರೆಜಿಲ್‌ ಎರಡನೇ ಸ್ಥಾನದಲ್ಲಿದೆ.

"

Latest Videos

undefined

ಸೋಂಕಿತರ ಅಡ್ಮಿಟ್‌ ಮಾಡಿಕೊಳ್ಳದಿದ್ರೆ ಕ್ರಿಮಿನಲ್‌ ಕೇಸ್‌!

ಇದೇ ವೇಳೆ ಕೊರೋನಾಕ್ಕೆ ಭಾನುವಾರ ಒಂದೇ ದಿನ ದೇಶದಲ್ಲಿ 415 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 19683ಕ್ಕೆ ಏರಿಕೆ ಆಗಿದೆ. ಭಾನುವಾರ 14675 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈ ವರೆಗೆ ಒಟ್ಟು 422586 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಇನ್ನು ಸೋಂಕಿತರ ಸಂಖ್ಯೆ ಅತಿ ಹೆಚ್ಚಿರುವ ರಾಜ್ಯವಾದ ಮಹಾರಾಷ್ಟ್ರದಲ್ಲಿ 7,074 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 206619ಕ್ಕೆ ತಲುಪಿದೆ. ಎರಡನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 111151ಕ್ಕೆ ತಲುಪಿದೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಪ್ರಕಣಗಳು 1 ಲಕ್ಷ ಗಡಿಗೆ ಸಮೀಪಿಸಿದ್ದು, 99444 ಪ್ರಕರಣಗಳು ದಾಖಲಾಗಿವೆ.

ಕಲಬುರಗಿಗೆ ಬರ್ತಿವೆ ‘ಮಹಾ’ ಮೃತದೇಹಗಳು!

ಟಾಪ್‌ 5 ಕೊರೋನಾ ದೇಶಗಳು

ದೇಶ ಸೋಂಕು ಸಾವು

ಅಮೆರಿಕ 29.53 ಲಕ್ಷ 1.32 ಲಕ್ಷ

ಬ್ರೆಜಿಲ್‌ 15.78 ಲಕ್ಷ 64,365

ಭಾರತ 6.90 ಲಕ್ಷ 19683

ರಷ್ಯಾ 6.81 ಲಕ್ಷ 10,161

ಪೆರು 2.99 ಲಕ್ಷ 10,412

click me!