ಜಪಾನ್ ಹಿಂದಿಕ್ಕಿದ ಭಾರತ; ಏಷ್ಯಾ ಪೆಸಿಫಿಕ್‌ನಲ್ಲಿ ನಂ.3 ಪವರ್‌ಫುಲ್ ದೇಶ!

Published : Sep 27, 2024, 12:05 PM IST
ಜಪಾನ್ ಹಿಂದಿಕ್ಕಿದ ಭಾರತ; ಏಷ್ಯಾ ಪೆಸಿಫಿಕ್‌ನಲ್ಲಿ ನಂ.3 ಪವರ್‌ಫುಲ್ ದೇಶ!

ಸಾರಾಂಶ

ಭಾರೀ ವೇಗದ ಆರ್ಥಿಕಾಭಿವೃದ್ಧಿಯಿಂದ ಜಗತ್ತಿನ ಗಮನ ಸೆಳೆದಿರುವ ಭಾರತ ಇದೀಗ ಏಷ್ಯಾ ಪೆಸಿಫಿಕ್‌ ರಾಷ್ಟ್ರಗಳ ಪೈಕಿ ಮೂರನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಪಟ್ಟಿಯಲ್ಲಿ ಜಪಾನ್‌ ದೇಶವನ್ನು ಹಿಂದಿಕ್ಕಿರುವ ಭಾರತವು ಅಮೆರಿಕ ಮತ್ತು ಚೀನಾದ ನಂತರದ ಸ್ಥಾನಕ್ಕೆ ಏರಿದೆ.

ನವದೆಹಲಿ (ಸೆ.27): ಭಾರೀ ವೇಗದ ಆರ್ಥಿಕಾಭಿವೃದ್ಧಿಯಿಂದ ಜಗತ್ತಿನ ಗಮನ ಸೆಳೆದಿರುವ ಭಾರತ ಇದೀಗ ಏಷ್ಯಾ ಪೆಸಿಫಿಕ್‌ ರಾಷ್ಟ್ರಗಳ ಪೈಕಿ ಮೂರನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಪಟ್ಟಿಯಲ್ಲಿ ಜಪಾನ್‌ ದೇಶವನ್ನು ಹಿಂದಿಕ್ಕಿರುವ ಭಾರತವು ಅಮೆರಿಕ ಮತ್ತು ಚೀನಾದ ನಂತರದ ಸ್ಥಾನಕ್ಕೆ ಏರಿದೆ.

ಆಸ್ಟ್ರೇಲಿಯಾದ ಲೋವಿ ಇನ್‌ಸ್ಟಿಟ್ಯೂಟ್‌ ‘2024ನೇ ಆವೃತ್ತಿಯ ಏಷ್ಯಾ ಪವರ್‌ ಇಂಡೆಕ್ಸ್‌ (ಎಪಿಐ)’ ಹೆಸರಿನ ಈ ವರದಿ ಸಿದ್ಧಪಡಿಸಿದ್ದು, ಇದನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.

ಸೇತುವೆ ಕುಸಿತಕ್ಕೆ ದೋಷಪೂರಿತ ಡಿಪಿಆರ್ ಕಾರಣ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಏಷ್ಯಾ ಪೆಸಿಫಿಕ್‌ ರಾಷ್ಟ್ರಗಳು ಅಂದರೆ ಪಶ್ಚಿಮ ಪೆಸಿಫಿಕ್‌ ಮಹಾಸಾಗರಕ್ಕೆ ಅಂಟಿಕೊಂಡಿರುವ ದೇಶಗಳು. ಈ ದೇಶಗಳ ಪೈಕಿ ಮೂರನೇ ಶಕ್ತಿಶಾಲಿ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.

8 ಮಾನದಂಡ ಆಧರಿಸಿ ವರದಿ:

ಮಿಲಿಟರಿ ಶಕ್ತಿ, ರಕ್ಷಣಾ ಜಾಲ, ಆರ್ಥಿಕ ಸಾಮರ್ಥ್ಯ, ಜಾಗತಿಕ ಸಂಬಂಧಗಳು, ರಾಜತಾಂತ್ರಿಕ ಶಕ್ತಿ, ಸಾಂಸ್ಕೃತಿಕ ಪ್ರಭಾವ, ಅಪಾಯಗಳನ್ನು ಎದುರಿಸುವ ಶಕ್ತಿ, ಭವಿಷ್ಯದ ಸಂಪನ್ಮೂಲಗಳು - ಈ ಎಂಟು ಮಾನದಂಡಗಳನ್ನು ಇರಿಸಿಕೊಂಡು ಏಷ್ಯಾ ಪವರ್‌ ಇಂಡೆಕ್ಸ್‌ ತಯಾರಿಸಲಾಗುತ್ತದೆ.

ವರದಿಯಲ್ಲಿರುವ ಅಂಶಗಳು:

‘ಭಾರತ ಇನ್ನೂ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಅಭಿವೃದ್ಧಿ ಹೊಂದಿಲ್ಲವಾದರೂ, ಇದು ಈಗ ಜಪಾನ್‌ ದೇಶವನ್ನು ಹಿಂದಿಕ್ಕಿ ಏಷ್ಯಾ ಪೆಸಿಫಿಕ್‌ನಲ್ಲಿ ಮೂರನೇ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಭಾರತದ ಅಭಿವೃದ್ಧಿಯ ಬಗ್ಗೆ ಇನ್ನೂ ಸಾಕಷ್ಟು ನಿರೀಕ್ಷೆಗಳಿವೆ. ಅದೇ ರೀತಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಸಾಕಷ್ಟು ಇತಿಮಿತಿಗೂ ಇವೆ. ಭವಿಷ್ಯದಲ್ಲಿ ದೇಶವು ಇನ್ನಷ್ಟು ಶಕ್ತಿಶಾಲಿ ದೇಶವಾಗಿ ಹೊರಹೊಮ್ಮುವ ಸಾಧ್ಯತೆಗಳಿವೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಬಿಜೆಪಿ ಗೆದ್ದರೆ ಭಾರತ ಸೇರಲಿದೆ ಪಾಕ್ ಆಕ್ರಮಿತ ಕಾಶ್ಮೀರ, J&K ಚುನಾವಣಾ ಪ್ರಚಾರದಲ್ಲಿ ಯೋಗಿ ಭಾಷಣ!

‘ಭಾರತದ ಅತಿದೊಡ್ಡ ಶಕ್ತಿಯೆಂದರೆ ಅದರ ಜನಸಂಖ್ಯೆ, ಭೌಗೋಳಿಕ ವಿಸ್ತೀರ್ಣ ಮತ್ತು ಆರ್ಥಿಕತೆ. ಏಷ್ಯಾದ ಅನೇಕ ದೇಶಗಳಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದ್ದರೆ, ಅದಕ್ಕೆ ವ್ಯತಿರಿಕ್ತವಾಗಿ ಭಾರತದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೋವಿಡ್‌ ನಂತರ ಭಾರತ ಆರ್ಥಿಕವಾಗಿ ದೊಡ್ಡ ಪ್ರಗತಿ ಸಾಧಿಸಿದೆ. ಹಾಗೆಯೇ ಇನ್ನೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದುವ ಸಾಧ್ಯತೆಗಳನ್ನು ತನ್ನೊಡಲಿನಲ್ಲಿ ಇರಿಸಿಕೊಂಡಿದೆ. ಆದರೆ, ಆರ್ಥಿಕ ಸಂಬಂಧಗಳ ವಿಷಯದಲ್ಲಿ ಭಾರತ ಇನ್ನೂ ಹಿಂದುಳಿದಿದೆ. ರಕ್ಷಣಾ ಸಂಪರ್ಕ ಜಾಲದಲ್ಲಿ ದೇಶ 9ನೇ ಸ್ಥಾನಕ್ಕೆ ಕುಸಿದಿದೆ’ ಎಂದೂ ವರದಿ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್