Hindi Language: ದಕ್ಷಿಣ ಭಾರತದ ವಿರೋಧದ ನಡುವೆ ಹಿಂದಿ ರಾಷ್ಟ್ರ ಭಾಷೆ ಮಾಡಲು ಕೇಂದ್ರದ ಯತ್ನ!

By Suvarna NewsFirst Published Dec 3, 2021, 6:31 PM IST
Highlights
  • ಹಿಂದಿ ಭಾರತದ ರಾಷ್ಟ್ರ ಭಾಷೆಯನ್ನಾಗಿ ಮಾಡಲು ಕೇಂದ್ರದಿಂ ಯತ್ನ
  • ವಿಶ್ವ ಸಂಸ್ಥೆಯಲ್ಲಿ ಭಾರತದ ರಾಷ್ಟ್ರಭಾಷೆ ಹಿಂದಿ ಮಾಡಲು ತಯಾರಿ
  • ಸಂಸತ್ತಿನಲ್ಲಿ ಸಚಿವ ವಿ ಮರುಳೀಧರನ್ ಹೇಳಿಕೆ, ದಕ್ಷಿಣ ಭಾರತದ ವಿರೋಧ

ನವದೆಹಲಿ(ಡಿ.03):  ಭಾರತದ ರಾಷ್ಟ್ರ ಭಾಷೆ ಹಿಂದಿ(Hindi). ಆದರೆ ಹಿಂದಿ ಭಾಷೆಗೆ ಅಧಿಕೃತ ಮಾನ್ಯತೆ ಸಿಕ್ಕಿಲ್ಲ. ಈ ಕುರಿತು ಈ ಹಿಂದಿನ ಸರ್ಕಾರ ಸೇರಿದಂತೆ ಹಲವರು ಪ್ರಯತ್ನಿಸಿದ್ದಾರೆ. ಹಿಂದಿ ರಾಷ್ಟ್ರ ಭಾಷೆ(National Language) ಮಾಡಲು ದಕ್ಷಿಣ ಭಾರತದ ತೀವ್ರ ವಿರೋಧದಿಂದ ಪ್ರಯತ್ನಗಳು ಕೈಗೂಡಿರಲಿಲ್ಲ. ಇದೀಗ ದಕ್ಷಿಣ ಭಾರತೀಯರ ವಿರೋಧದ ನಡುವೆಯೇ ಕೇಂದ್ರ ಸರ್ಕಾರ  ಹಿಂದಿಗೆ ವಿಶ್ವಸಂಸ್ಥೆಯಲ್ಲಿ(United Nations) ರಾಷ್ಟ್ರ ಭಾಷೆ ಮಾನ್ಯತೆ ನೀಡಲು ತಯಾರಿ ನಡೆಸಿದೆ.

ಈ ಕುರಿತು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಸ್ಪಷ್ಟನೆ ನೀಡಿದೆ. ಹಿಂದಿ ರಾಷ್ಟ್ರ ಭಾಷೆ ಮಾಡಲು ಕೇಂದ್ರ ಏನು ಮಾಡಿದೆ. ಇದರ ಪ್ರಯತ್ನಗಳು ಎಲ್ಲಿವರೆಗೆ ಸಾಗಿದೆ ಎಂದು  ಬಿಜೆಡಿ ಸಂಸದ ಸುಜೀತ್ ಕುಮಾರ್ ಸಂಸತ್ತಿನಲ್ಲಿ ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಆರ್, ಕೇಂದ್ರ ಸರ್ಕಾರ ಹಿಂದಿ ರಾಷ್ಟ್ರ ಭಾಷೆ ಮಾನ್ಯತೆ ನೀಡಲು ಎಲ್ಲಾ ತಯಾರಿ ನಡೆಸಿದೆ ಎಂದರು. ಇಷ್ಟೇ ಅಲ್ಲ ವಿಶ್ವಸಂಸ್ಥೆಯಲ್ಲಿನ ಪ್ರಗತಿ ಕುರಿತು ಮಾಹಿತಿ ನೀಡಿದರು. 

ಹಿಂದಿ ಭಾಷೆಯ ಬಲವಂತದ ಹೇರಿಕೆಗೆ ಕರ್ನಾಟಕ ಸೇನಾಪಡೆ ಆಕ್ರೋಶ

ವಿಶ್ವಸಂಸ್ಥೆಯಲ್ಲಿ ಒಂದು ಭಾಷೆಗೆ ರಾಷ್ಟ್ರೀಯ ಮಾನ್ಯತೆ ನೀಡಲು ಯುಎನ್ ಜನರಲ್ ಅಸೆಂಬ್ಲಿಯ( UN General Assembly) ಮೂರನೇ ಎರಡಷ್ಟು ಸದಸ್ಯರ ಅಂಗೀಕಾರ ಅಗತ್ಯ. ಇದರ ಹೆಚ್ಚುವರಿ ವೆಚ್ಚವನ್ನು ಎಲ್ಲಾ ವಿಶ್ವಸಂಸ್ಥೆ ಸದಸ್ಯರಾಷ್ಟ್ರಗಳು ಭರಿಸಬೇಕು. ಈ ಕುರಿತ ಭಾರತ ಮುತುವರ್ಜಿಯಿಂದ ಕೆಲಸ ಮಾಡಿದೆ. ವಿಶ್ವಸಂಸ್ಥೆಯಲ್ಲಿ ಹಿಂದಿಗೆ ರಾಷ್ಟ್ರ ಭಾಷೆ ಮಾನ್ಯತೆ ನೀಡಿ, ಹಿಂದಿಯನ್ನು ಪ್ರಖ್ಯಾತ ಮಾಡಲು ಕೇಂದ್ರ ಪ್ರಯತ್ನಿಸುತ್ತಿದೆ. 2018ರಲ್ಲಿ ಹಿಂದಿ ಭಾಷೆಯನ್ನು ಉತ್ತೇಜಿಸಲು ಎರಡು ವರ್ಷಗಳ ಒಪ್ಪಂದ ಮಾಡಿಕೊಂಡಿದೆ ಎಂದ ಮರಳೀಧರನ್ ಹೇಳಿದ್ದಾರೆ.

ವಿಶ್ವಸಂಸ್ಥೆ ಒಂದು ರಾಷ್ಟ್ರದ ಭಾಷೆ ಮೇಲೆ ಒಪ್ಪಂದ ಮಾಡಿಕೊಂಡಿರುವುದು ಇದೇ ಮೊದಲು. ಇದರಿಂದ ವಿಶ್ವಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಹಿಂದಿ ಭಾಷೆಯಲ್ಲಿ ಖಾತೆ ತೆರಿದಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಹಿಂದಿ ವೆಬ್‌ಸೈಟ್ ಕೂಡ ಆರಂಭಿಸಿದೆ. ಹಿಂದಿ ಭಾಷೆಯಲ್ಲಿ ಬ್ರಾಡ್‌ಕಾಸ್ಟಿಂಗ್, ನ್ಯೂಸ್, ಮೊಬೈಲ್ ಆ್ಯಪ್ ಕೂಡ ತೆರೆದಿದೆ. ಈ ಒಪ್ಪಂ 2025ರ ವರೆಗೆ ಮುಂದವರಿಸಲಾಗಿದೆ ಎಂದು ಮರಳೀಧರನ್ ಹೇಳಿದ್ದಾರೆ.

ರೈಲು ಟಿಕೆಟ್ ಬುಕ್ ಮಾಡಿದ ಮಹಿಳೆಗೆ ಹಿಂದಿಯಲ್ಲಿ ಸಂದೇಶ: ಭುಗಿಲೆದ್ದ ಭಾಷಾ ಹೇರಿಕೆ ವಿವಾದ!

ವಿಶ್ವಸಂಸ್ಥೆಯಲ್ಲಿ ಹಿಂದಿ ಭಾಷೆಗೆ ಅಧೀಕೃತ ಮಾನ್ಯತೆ ಇನ್ನೂ ಸಿಕ್ಕಿಲ್ಲ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಹಿಂದಿಗೆ ರಾಷ್ಟ್ರೀಯ ಮಾನ್ಯತೆ ನೀಡಲು, ವಿಶ್ವಸಂಸ್ಥೆಯಲ್ಲಿ ಮಾನ್ಯತೆ ಗಿಟ್ಟಿಸಿಕೊಳ್ಳಲು ಪ್ರಯತ್ನ ಮತ್ತಷ್ಟು ಚುರುಕಾಗಲಿದೆ ಎಂದರು. ಇದೇ ವೇಳೆ ವಿಶ್ವಸಂಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ(PM Narendra modi) ಹಿಂದಿ ಭಾಷಣ ಮಾಡಿದ್ದಾರೆ. 2014, 2019, 2020 ಮತ್ತು 2021 ರಲ್ಲಿ ಮೋದಿ ಹಿಂದಿಯಲ್ಲಿ ಭಾಷಣ ಮಾಡಿದ್ದಾರೆ.  ಇನ್ನು 2015, 2016, 2017, ಮತ್ತು 2018ರಲ್ಲಿ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವೆ ತಮ್ಮ ಭಾಷಣವನ್ನು ಹಿಂದಿಯಲ್ಲಿ ಮಾಡಿದ್ದಾರೆ ಎಂದು ಮರಳೀಧರನ್ ಹೇಳಿದ್ದಾರೆ.

ಹಿಂದಿ ರಾಷ್ಟ್ರ ಭಾಷೆ ಮಾಡಲು ದಕ್ಷಿಣ ಭಾರತದ ರಾಜ್ಯಗಳ ತೀವ್ರ ವಿರೋಧವಿದೆ. ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣದ ರಾಜ್ಯಗಳು ಸತತ ಹೋರಾಟ ಮಾಡಿದೆ. ಉತ್ತರ ಭಾರತದ ಭಾಷೆಯನ್ನು ದಕ್ಷಿಣ ಭಾರತದ ಮೇಲೆ ಹೇರಿಕೆ ಯಾಕೆ? ಈ ಕುರಿತು ದಶಕಗಳಿಂದ ಹೋರಾಟ ನಡೆಸುತ್ತಿದೆ. ದಕ್ಷಿಣ ಭಾರತದಲ್ಲಿ  ಕೆಲ ಪಕ್ಷಗಳ ಅಸ್ತಿತ್ವ ಕೂಡ ಈ ಹಿಂದಿ ಹೇರಿಕೆ ವಿರುದ್ಧ ಮಾಡಿದ ಹೋರಾಟದ ಮೇಲೆ ನಿಂತಿದೆ.
 

click me!