ಪೆಸಿಫಿಕ್ ಮಹಾಸಾಗರದಲ್ಲಿ ಜನಿಸಿದ ಜಲರಾಕ್ಷಸ ಎಲ್ ನಿನೋ ಜಗತ್ತಿಗೆ ಆತಂಕ ಮೂಡಿಸಿದೆ. 2027ರಲ್ಲಿ 'ಸೂಪರ್ ಎಲ್ ನಿನೋ' ಪ್ರಭಾವದಿಂದ ಭಾರತದಲ್ಲಿ ಭೀಕರ ಬೇಸಿಗೆ ಎದುರಾಗಲಿದ್ದು, ಮುಂಗಾರಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಕಳೆದ ನಾಲ್ಕೈದು ತಿಂಗಳಿಂದ ಒಬ್ಬ ರಾಕ್ಷಸನ ವಿಧ್ವಂಸದ ಬಗ್ಗೆ ಮಾತ್ನಾಡ್ತಾನೆ ಇದ್ದೇವೆ. ಆ ರಾಕ್ಷಸ ಮತ್ಯಾರೂ ಅಲ್ಲ.. ಫಿಸಿಫಿಕ್ ಮಹಾಸಾಗರದಲ್ಲಿ ಜನ್ಮಿಸಿರೋ ಜಲ ರಾಕ್ಷಸ ಎಲ್ ನಿನೋ. ಹೌದು, ಈತನಜನ್ಮವಾದಗಿನಿಂದಲೂ ಭಯ ಹುಟ್ಟಿಸ್ತಾನೆ ಇದ್ದಾನೆ. ಈಗಾಗಲೇ ಹಲವು ಭಾಗದಲ್ಲಿ ನರಕವನ್ನು ತೋರಿಸಿದ್ದಾನೆ..