ಭಾರತವೀಗ ಇಡೀ ವಿಶ್ವದ ಔಷಧಾಲಯ: ಪ್ರಧಾನಿ ಮೋದಿ!

Published : May 05, 2020, 11:06 AM ISTUpdated : May 05, 2020, 11:37 AM IST
ಭಾರತವೀಗ ಇಡೀ ವಿಶ್ವದ  ಔಷಧಾಲಯ: ಪ್ರಧಾನಿ ಮೋದಿ!

ಸಾರಾಂಶ

ಅಲಿಪ್ತ ನೀತಿ ದೇಶಗಳ ನಾಯಕರೊಂದಿಗೆ ಮೋದಿ ಸಂವಾದ|  ಮಾನವ ಕುಲ ಈಗ ಭಾರೀ ದೊಡ್ಡ ತೊಂದರೆಯಲ್ಲಿದೆ| 120 ದೇಶಗಳಿಗೆ ಔಷಧಗಳನ್ನು ರಫ್ತು ಮಾಡುವ ಮೂಲಕ ಭಾರತ ‘ವಿಶ್ವದ ಔಷಧಾಲಯ’ವಾಗಿ ಮಾರ್ಪಟ್ಟಿದೆ

ನವದೆಹಲಿ(ಮೇ.05): ಕೊರೋನಾ ವಿಚಾರ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಅಲಿಪ್ತ ನೀತಿ ದೇಶಗಳ ನಾಯಕರೊಂದಿಗೆ ಸೋಮವಾರ ವಿಡಿಯೋ ಕಾನ್ಫರೆನ್ಸ್‌ ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಮಾನವ ಕುಲ ಈಗ ಭಾರೀ ದೊಡ್ಡ ತೊಂದರೆಯಲ್ಲಿದೆ. ಇದರ ವಿರುದ್ದ ಆಲಿಪ್ತ ನೀತಿ ಹೊಂದಿರುವ ರಾಷ್ಟ್ರಗಳು ಹೋರಾಟ ಮಾಡುತ್ತಿದೆ. ಭಾರತ ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, 120 ದೇಶಗಳಿಗೆ ಔಷಧಗಳನ್ನು ರಫ್ತು ಮಾಡುವ ಮೂಲಕ ಭಾರತ ‘ವಿಶ್ವದ ಔಷಧಾಲಯ’ವಾಗಿ ಮಾರ್ಪಟ್ಟಿದೆ ಎಂದಿದ್ದಾರೆ.

ಅಲ್ಲದೇ ಪ್ರಜಾತಂತ್ರ, ಶಿಸ್ತು ಹಾಗೂ ಖಚಿತತೆಯಿಂದಾಗಿ ಈ ಹೋರಾಟವನ್ನು ಜನರ ಚಳುವಳಿಯನ್ನಾಗಿ ಮಾಡಬಹುದು. ಕೊರೋನಾ ಬಳಿಕದ ಜಾಗತೀಕರಣಕ್ಕೆ ಹೊಸ ಮಾರ್ಗಸೂಚಿ ರಚಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಟ್ರಂಪ್‌ ಪ್ರತೀಕಾರದ ಮಾತು: 24 ಔಷಧಗಳ ರಫ್ತು ನಿಷೇಧ ಹಿಂಪಡೆದ ಭಾರತ!

ಇದೇ ವೇಳೆ ಪಾಕಿಸ್ತಾನ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ ಅವರು, ಇಂಥ ಸನ್ನಿವೇಶದಲ್ಲೂ ಕೆಲವರು ಉಗ್ರವಾದ, ಸುಳ್ಳು ಸುದ್ದಿ ಹಾಗೂ ನಕಲಿ ವಿಡಿಯೋಗಳ ವೈರಸ್‌ ಹರಡುತ್ತಿದ್ದಾರೆ ಎಂದಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!
ದೆಹಲಿ ರಕ್ಷಣೆಗೆ ಸ್ವದೇಶಿ ಕ್ಷಿಪಣಿ ವ್ಯವಸ್ಥೆ