
ದುಬೈ(ಮೇ.05): ಕೇರಳ ಮೂಲದ ನೌಕರರೊಬ್ಬರು ಯುಎಇಯಲ್ಲಿ ಭರ್ಜರಿ 20 ಕೋಟಿ ರುಪಾಯಿಯ ಲಾಟರಿ ಗೆದ್ದಿದ್ದಾರೆ.
ತ್ರಿಶ್ಶೂರ್ ಜಿಲ್ಲೆಯ ದಿಲೀಪ್ ಕುಮಾರ್ ಎಲ್ಲಿಕೊಟ್ಟು ಪರಮೇಶ್ವರನ್ ಎಂಬವರೇ ಇಷ್ಟುಮೌಲ್ಯದ ಲಾಟರಿ ಗೆದ್ದ ಅದೃಷ್ಟವಂತ. ಅಬುಧಾಬಿಯ ಬಿಗ್ ಟಿಕೆಟ್ ಡ್ರಾ ದಲ್ಲಿ ಪರಮೇಶ್ವರನ್ 10 ಮಿಲಿಯನ್ ಧಿರ್ಹಂ (ಸುಮಾರು ಇಪ್ಪತ್ತು ಕೋಟಿ) ಲಾಟರಿ ಗೆದ್ದಿದ್ದು, ಇದರಲ್ಲಿ ಒಂದೂವರೆ ಕೋಟಿ ಸಾಲ ತೀರಿಸುವುದರ ಜತೆಗೆ ಮಕ್ಕಳ ಶಿಕ್ಷಣಕ್ಕೆ ಹಣ ವಿನಿಯೋಗಿಸುವುದಾಗಿ ಅವರು ಹೇಳಿದ್ದಾರೆ.
ಕೊರೋನಾ ಭೀತಿಯಿಂದ ಕೇರಳದಿಂದ ತವರಿಗೆ ಹೋದವರಿಗೆ ಲಾಟರಿ!
ಕಳೆದ 17 ವರ್ಷಗಳಿಂದ ಯುಎಇಯ ಅಜ್ಮಾನ್‌ನಲ್ಲಿ ಕುಟುಂಬದೊಂದಿಗೆ ನೆಲೆಸಿರುವ ಇವರು ಆಟೋ ಸ್ಪೇರ್ ಕಂಪನಿಯಲ್ಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಹತ್ತೂವರೆ ಸಾವಿರ ರುಪಾಯಿ ಕೊಟ್ಟು ಲಾಟರಿ ಖರೀದಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ