ಮದ್ಯ ಈಗ ಮತ್ತಷ್ಟು ಕಹಿ: ನಷ್ಟ ಭರಿಸಲು ಎಣ್ಣೆ ಮೇಲೆ ಶೇ.70ರಷ್ಟು ಹೆಚ್ಚು ತೆರಿಗೆ!

By Suvarna News  |  First Published May 5, 2020, 9:35 AM IST

ಕೊರೋನಾ ನಷ್ಟ ಭರಿಸಲು ಮದ್ಯದ ಮೇಲೆ ಶೇ.70ರಷ್ಟುಹೆಚ್ಚು ತೆರಿಗೆ!|  ಕೊರೋನಾ ಬಿಕ್ಕಟ್ಟಿನಿಂದಾಗಿ ಆರ್ಥಿಕವಾಗಿ ಭಾರೀ ನಷ್ಟದ ಸುಳಿಗೆ ಸಿಲುಕಿರುವ ರಾಜ್ಯ| ಹೊಸ ದರ ಮಂಗಳವಾರದಿಂದಲೇ ಜಾರಿಗೆ


ನವದೆಹಲಿ(ಮೇ.5): ಕೊರೋನಾ ಬಿಕ್ಕಟ್ಟಿನಿಂದಾಗಿ ಆರ್ಥಿಕವಾಗಿ ಭಾರೀ ನಷ್ಟದ ಸುಳಿಗೆ ಸಿಲುಕಿರುವ ದೆಹಲಿಯ ಆಪ್‌ ಸರ್ಕಾರ, ಮದ್ಯದ ದರವನ್ನು ಶೇ.70ರಷ್ಟುಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲು ನಿರ್ಧರಿಸಿದೆ. ಹೊಸ ದರ ಮಂಗಳವಾರದಿಂದಲೇ ಜಾರಿಗೆ ಬರಲಿದೆ ಎಂದು ಸರ್ಕಾರ ತಿಳಿಸಿದೆ.

ಹಾಲಿ ಮಾರಾಟ ಮಾಡುತ್ತಿರುವ ಎಲ್ಲಾ ಮಾದರಿಯ ಮದ್ಯದ ಗರಿಷ್ಠ ಮಾರಾಟದ ಶುಲ್ಕದ ಮೇಲೆ ಶೇ.70ರಷ್ಟುವಿಶೇಷ ಕೊರೋನಾ ಶುಲ್ಕ ವಿಧಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಅಂದರೆ ಯಾವುದಾದರೂ ಮದ್ಯದ ಬಾಟಲ್‌ ದರ 1000 ರು. ಇದ್ದರೆ ಇನ್ನು ಅದು 1700 ರು. ಆಗಲಿದೆ.

Latest Videos

undefined

"

ಮದ್ಯ ಮಾರಾಟ ಸ್ಥಗಿತದಿಂದ ಕೇಂದ್ರಕ್ಕೆ 27,000 ಕೋಟಿ ರೂ. ನಷ್ಟ!

ಕೊರೋನಾ ವಿರುದ್ಧದ ಹೋರಾಟಕ್ಕೆ ಆರ್ಥಿಕವಾಗಿ ಸದೃಢವಾಗಲು ಮತ್ತು ಮದ್ಯದ ಅಂಗಡಿಗಳ ಮುಂದೆ ಜನ ಜಂಗುಳಿಯನ್ನು ನಿಯಂತ್ರಿಸಲು ಮುಂದಾಗಿರುವ ದೆಹಲಿ ಸರ್ಕಾರ ಮದ್ಯದ ಮೇಲೆ ಭಾರಿ ಪ್ರಮಾಣದ ತೆರಿಗೆ ವಿಧಿಸಿದೆ.

ಇನ್ನು ಸೋಮವಾರ ದೆಹಲಿಯ 150 ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಹೀಗಾಗಿ ಮದ್ಯಪ್ರಿಯರು ದಿನವಿಡೀ ಸಾಲಿನಲ್ಲಿ ನಿಂತು ಮದ್ಯವನ್ನು ಖರೀದಿಸಿದ್ದರು. ಆದರೆ, ಈ ವೇಳೆ ಹಲವು ಕಡೆಗಳಲ್ಲಿ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಯಡವಟ್ಟು ಮಾಡಿದ್ದಾರೆ. ಹೀಗಾಗಿ ದೆಹಲಿಯಲ್ಲಿ ಮದ್ಯಪ್ರಿಯರ ಸಂಖ್ಯೆ ಕಡಿಮೆ ಮಾಡಬೇಕು ಎಂದು ಯೋಚಿಸಿರುವ ದೆಹಲಿ ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ.

click me!