LIVE NOW
Published : Mar 30, 2026, 06:52 AM ISTUpdated : Mar 30, 2026, 10:07 AM IST

India Latest News Live: 13 ವರ್ಷಗಳ ಕಳಂಕ ತೊಳೆದುಕೊಂಡ ಮುಂಬೈ ಇಂಡಿಯನ್ಸ್! ರೋಹಿತ್ ಶರ್ಮಾಗೆ ಆಗದ್ದನ್ನು ಮಾಡಿ ತೋರಿಸಿದ ಹಾರ್ದಿಕ್ ಪಾಂಡ್ಯ

ಸಾರಾಂಶ

ಪಾಲಕ್ಕಾಡ್‌: ಪ್ರಧಾನಿ ನರೇಂದ್ರ ಮೋದಿಯವರು ಕೇರಳದ ಪಾಲಕ್ಕಾಡ್‌ನಲ್ಲಿ ಭಾಗಿಯಾಗಿದ್ದ ಚುನಾವಣಾ ರ್‍ಯಾಲಿ ವೇಳೆ ಆಂಪ್ಲಿಫೈಯರ್‌ನಿಂದ ಹೊಗೆ ಕಾಣಿಸಿಕೊಂಡಿದೆ. ಇದು ಕೆಲ ಕಾಲ ಆತಂಕಕ್ಕೆ ಕಾರಣವಾಗಿದೆ.

ರ್‍ಯಾಲಿ ನಡೆಯಬೇಕಿದ್ದ ಸ್ಥಳವಾದ ಕೊಟ್ಟಮೈಡನಂಗೆ ಆಗಮಿಸುವ ಅರ್ಧ ಗಂಟೆಗೂ ಮುನ್ನ ಮೈಕ್ರೊಫೋನ್‌ಗಳಿಗೆ ಸಂಪರ್ಕಗೊಂಡಿರುವ ಆಂಪ್ಲಿಫೈಯರ್‌ನಿಂದ ಹೊಗೆ ಬರುತ್ತಿರುವುದು ಕಂಡುಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಕೂಡಲೇ ಹೊಗೆ ನಿಲ್ಲಿಸಲು ಕ್ರಮ ಕೈಗೊಂಡಿದ್ದಾರೆ. ಓವರ್‌ಲೋಡ್‌ನಿಂದ ಆಂಪ್ಲಿಫೈಯರ್ ಹೆಚ್ಚು ಬಿಸಿಯಾಗಿ ಘಟನೆ ನಡೆದಿದೆ ಎನ್ನಲಾಗಿದೆ.

 

10:07 AM (IST) Mar 30

13 ವರ್ಷಗಳ ಕಳಂಕ ತೊಳೆದುಕೊಂಡ ಮುಂಬೈ ಇಂಡಿಯನ್ಸ್! ರೋಹಿತ್ ಶರ್ಮಾಗೆ ಆಗದ್ದನ್ನು ಮಾಡಿ ತೋರಿಸಿದ ಹಾರ್ದಿಕ್ ಪಾಂಡ್ಯ

19ನೇ ಆವೃತ್ತಿಯ ಐಪಿಎಲ್‌ನಲ್ಲಿ, ಮುಂಬೈ ಇಂಡಿಯನ್ಸ್ ತಂಡವು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಗೆಲುವು ಸಾಧಿಸಿದೆ. ಈ ಮೂಲಕ, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ 13 ವರ್ಷಗಳಿಂದ ಮೊದಲ ಪಂದ್ಯದಲ್ಲಿ ಸೋಲುತ್ತಿದ್ದ ಕಳಂಕವನ್ನು ತಂಡವು ಅಳಿಸಿಹಾಕಿದೆ.
Read Full Story

09:57 AM (IST) Mar 30

ಗಂಡ ರೇ* ಮಾಡ್ತಿದ್ರೆ, ಹೊರಗೆ ಕಾವಲು ಕಾಯ್ತಿದ್ದ ಬ್ಯುಟಿ ಪಾರ್ಲರ್ ಆಂಟಿ ಯಾಸ್ಮೀನ್

ಬ್ಯೂಟಿ ಪಾರ್ಲರ್ ತರಬೇತಿ ನೆಪದಲ್ಲಿ ಯುವತಿಯರನ್ನು ಮನೆಗೆ ಕರೆಸಿಕೊಂಡು ಪತಿಯ ಅತ್ಯಾ*ಚಾರಕ್ಕೆ ಪತ್ನಿಯೇ ಸಹಾಯ ಮಾಡುತ್ತಿದ್ದ ಆಘಾತಕಾರಿ ಘಟನೆ ನಡೆದಿದೆ. ಪತಿ ಕೋಣೆಯೊಳಗೆ ಕೃತ್ಯ ಎಸಗುತ್ತಿದ್ದರೆ, ಪತ್ನಿ ಹೊರಗೆ ಕಾವಲು ಕಾಯುತ್ತಿದ್ದಳು. 

Read Full Story

09:23 AM (IST) Mar 30

ಜಾರಿ ಬಿದ್ದ ಪಾಕ್ ವಿದೇಶಾಂಗ ಸಚಿವ - 4 ಇಸ್ಲಾಮಿಕ್ ದೇಶಗಳ ಸಭೆಯಲ್ಲಿ ಘಟನೆ

ಅಮೆರಿಕ-ಇರಾನ್ ಯುದ್ಧದ ಮಧ್ಯಸ್ಥಿಕೆ ಕುರಿತು ಇಸ್ಲಾಮಾಬಾದ್‌ನಲ್ಲಿ ನಡೆದ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಕಿಸ್ತಾನದ ಉಪ ಪ್ರಧಾನಿ ಇಷಾಕ್ ದಾರ್ ಜಾರಿ ಬಿದ್ದರು. ಈ ಸಭೆಯಲ್ಲಿ ಸೌದಿ ಅರೇಬಿಯಾ, ಈಜಿಪ್ಟ್, ಮತ್ತು ಟರ್ಕಿ ದೇಶಗಳ ಸಚಿವರು ಭಾಗವಹಿಸಿದ್ದರು.

Read Full Story

09:11 AM (IST) Mar 30

IPL 2026 ಸೆಹ್ವಾಗ್-ಅಶ್ವಿನ್ ಮಾತಿನ ಚಕಮಕಿ - ಆಕ್ರೋಶ ಹೊರಹಾಕಿದ ನೆಟ್ಟಿಗರು!

ಐಪಿಎಲ್ ಕಾಮೆಂಟರಿ ವೇಳೆ ವಿರೇಂದ್ರ ಸೆಹ್ವಾಗ್ ಮತ್ತು ಆರ್. ಅಶ್ವಿನ್ ನಡುವೆ ವಾಗ್ವಾದ ನಡೆದಿದೆ. ಸೆಹ್ವಾಗ್ ಅವರು ಅಶ್ವಿನ್ ಅವರನ್ನು ಪದೇ ಪದೇ ಕಾಲೆಳೆದಿದ್ದು, ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಇಬ್ಬರ ಮೇಲೂ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

Read Full Story

08:24 AM (IST) Mar 30

ಭಾರತದಿಂದ ಶ್ರೀಲಂಕಾಕ್ಕೆ 38,000 ಮೆಟ್ರಿಕ್ ಟನ್ ಪೆಟ್ರೋಲ್, ಡೀಸೆಲ್‌ - ಪೆಟ್ರೋಲ್ ಬಂಕಲ್ಲೂ ಸೀಮೆಎಣ್ಣೆ ವಿತರಣೆಗೆ ಸದ್ಯ ಅವಕಾಶ - ಕೇಂದ್ರ

ಯುದ್ಧದಿಂದ ಎಲ್‌ಪಿಜಿ ಪೂರೈಕೆಯ ಮೇಲೆ ಉಂಟಾದ ಪರಿಣಾಮದಿಂದಾಗಿ, ಕೇಂದ್ರ ಸರ್ಕಾರವು 21 ರಾಜ್ಯಗಳಲ್ಲಿ ಸೀಮೆಎಣ್ಣೆ ವಿತರಣೆಯನ್ನು ಪುನರಾರಂಭಿಸಿದೆ. ಪೆಟ್ರೋಲ್, ಡೀಸೆಲ್ ಅಥವಾ ಗ್ಯಾಸ್‌ಗೆ ಯಾವುದೇ ಕೊರತೆಯಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ.

Read Full Story

08:22 AM (IST) Mar 30

ಶುಭಾರಂಭಕ್ಕೆ ಚೆನ್ನೈ ಸೂಪರ್ ಕಿಂಗ್ಸ್ vs ರಾಜಸ್ಥಾನ ರಾಯಲ್ಸ್ ಫೈಟ್! ಸಂಜು-ಜಡೇಜಾ ಮೇಲೆ ಎಲ್ಲರ ಕಣ್ಣು

ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್‌ ತಂಡಗಳು ಐಪಿಎಲ್‌ನಲ್ಲಿ ಸೆಣಸಾಡಲಿವೆ. ಈ ಬಾರಿ ರವೀಂದ್ರ ಜಡೇಜಾ ರಾಜಸ್ಥಾನ ಪರ ಆಡಿದರೆ, ಸಂಜು ಸ್ಯಾಮ್ಸನ್ ಚೆನ್ನೈ ಪರ ಕಣಕ್ಕಿಳಿಯಲಿದ್ದು, ಇದು ಕುತೂಹಲ ಕೆರಳಿಸಿದೆ. ಗಾಯದ ಸಮಸ್ಯೆಯಿಂದಾಗಿ ಎಂ.ಎಸ್‌.ಧೋನಿ ಹಾಗೂ ಡೆವಾಲ್ಡ್‌ ಬ್ರೆವಿಸ್‌ ಚೆನ್ನೈ ತಂಡಕ್ಕೆ ಅಲಭ್ಯರಾಗಿದ್ದಾರೆ.
Read Full Story

07:47 AM (IST) Mar 30

IPL 2026 - ಮುಂಬೈ ಇಂಡಿಯನ್ಸ್ vs ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ಐಪಿಎಲ್‌ನಲ್ಲಿ 13 ವರ್ಷಗಳ ಬಳಿಕ ತನ್ನ ಆರಂಭಿಕ ಪಂದ್ಯವನ್ನು ಗೆದ್ದ ಮುಂಬೈ ಇಂಡಿಯನ್ಸ್‌, ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಕೆಕೆಆರ್‌ ನೀಡಿದ 221 ರನ್‌ಗಳ ಬೃಹತ್ ಗುರಿಯನ್ನು, ರೋಹಿತ್ ಶರ್ಮಾ ಮತ್ತು ರಿಕೆಲ್ಟನ್‌ ಅವರ ಸ್ಫೋಟಕ ಆರಂಭಿಕ ಜೊತೆಯಾಟದ ನೆರವಿನಿಂದ ಮುಂಬೈ ಯಶಸ್ವಿಯಾಗಿ ಬೆನ್ನಟ್ಟಿತು.
Read Full Story

07:34 AM (IST) Mar 30

ದೆವ್ವ ಹಿಡಿದಿದೆ ಅಂತ ಫ್ಲೈಟ್ ತುರ್ತು ದ್ವಾರ ತೆರೆಯಲೆತ್ನಿಸಿವನ ಬಂಧನ - ಬೆಂಗಳೂರು ಕಾಶಿ ವಿಮಾನದಲ್ಲಿ ಆತಂಕದ ಘಟನೆ

ಬೆಂಗಳೂರಿನಿಂದ ವಾರಾಣಸಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ಎರಡು ಬಾರಿ ತುರ್ತು ನಿರ್ಗಮನ ದ್ವಾರವನ್ನು ತೆರೆಯಲು ಯತ್ನಿಸಿದ್ದಾನೆ. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಆತನನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ 'ನನ್ನ ಮೈಮೇಲೆ ದೆವ್ವ ಬಂದಿತ್ತು' ಎಂಬ ವಿಚಿತ್ರ ಹೇಳಿಕೆ ನೀಡಿದ್ದಾನೆ.

Read Full Story

More Trending News