ಅಹಮದಾಬಾದ್: ಖಾಸಗಿ ವಾಹನಗಳ ಮೇಲೆ ಜಾತಿ ಅಥವಾ ಸಮುದಾಯದ ಹೆಸರು, ಗುರುತು ಅಥವಾ ಸಂದೇಶವನ್ನು ಬರೆಯುವುದನ್ನು ನಿಷೇಧಿಸಿ ಗುಜರಾತ್ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ.
ಬಂದರು ಮತ್ತು ಸಾರಿಗೆ ಇಲಾಖೆಯು ಗುಜರಾತ್ ಮೋಟಾರು ವಾಹನ (3ನೇ ತಿದ್ದುಪಡಿ) ನಿಯಮಗಳು, 2026ಕ್ಕೆ ನ.17ರಂದು ಅಧಿಸೂಚನೆ ಹೊರಡಿಸಿದೆ. ಈ ನಿಯಮ ಬೈಕ್, ಆಟೋರಿಕ್ಷಾ, ಕಾರು, ಬಸ್, ಟ್ರಕ್ ಸೇರಿದಂತೆ ಎಲ್ಲ ಬಗೆಯ ಖಾಸಗಿ ವಾಹನಗಳಿಗೆ ಅನ್ವಯವಾಗುತ್ತದೆ. ಹೊಸ ನಿಯಮದ ಪ್ರಕಾರ, ವಾಹನಗಳ ಮೇಲೆ ಸನಾತನ, ಹಿಂದೂ, ಪಾಟಿದಾರ್, ರಜಪೂತ್ ಸೇರಿದಂತೆ ಯಾವುದೇ ಬಗೆಯ ಜಾತಿಸೂಚಕ ಹೆಸರು ಅಥವಾ ಗುರುತುಗಳನ್ನು ಚಿತ್ರಿಸುವುದನ್ನು ನಿಷೇಧಿಸಲಾಗಿದೆ. ಈ ನಿಯಮ ಕೇವಲ ನಂಬರ್‌ಪ್ಲೇಟ್‌ಗೆ ಮಾತ್ರ ಸೀಮಿತವಲ್ಲ. ಕಾರಿನಲ್ಲಿ ಎಲ್ಲೂ ಇಂಥ ಪದ, ಗುರುತು ಬಳಸುವಂತಿಲ್ಲ.ಸರ್ಕಾರದಿಂದ ವಿಶೇಷ ಅನುಮತಿ ಪಡೆದರೆ ಮಾತ್ರ ಇದಕ್ಕೆ ಅವಕಾಶ ಸಿಗಲಿದೆ.
05:42 AM (IST) Nov 23
05:31 AM (IST) Nov 23
05:20 AM (IST) Nov 23