ಪುಣೆ: ಮರಾಠಾ ಸಾಮ್ರಾಜ್ಯದ ಚಿಹ್ನೆಯಾಗಿರುವ ಶನಿವಾರ ವಾಡಾ ಕೋಟೆಯಲ್ಲಿ ಕೆಲ ಮುಸಲ್ಮಾನ ಮಹಿಳೆಯರು ನಮಾಜ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಸಂಸದೆ ಮೇಧಾ ಕುಲಕರ್ಣಿ ಅವರು ಸ್ಥಳಕ್ಕೆ ತೆರಳಿ ಅದನ್ನು ಶುದ್ದೀಕರಿಸಿದ್ದಾರೆ. ಇದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಶನಿವಾರವಾಡಾ ಕೋಟೆಯಲ್ಲಿ ಕೆಲ ಮಹಿಳೆಯರು ಶುಕ್ರವಾರ ನಮಾಜ್ ಮಾಡಿದ್ದರು. ಅದರ ಬೆನ್ನಲ್ಲೇ ಸ್ಥಳಕ್ಕೆ ತೆರಳಿದ ಮೇಧಾ, ಗೋಮೂತ್ರದಿಂದ ಶುದ್ದೀಕರಣ ಮಾಡಿ ದ್ದಲ್ಲದೆ, ಶಿವವಂದನೆ ಮಾಡಿದ್ದಾರೆ. ಬಳಿಕ ಮಾತನಾಡಿ, 'ಈ ಜನ ಕಂಡಲ್ಲೆಲ್ಲಾ ನಮಾಜ್ ಮಾಡಿ, ಅದನ್ನು ವಕ್ಸ್ ಆಸ್ತಿಗೆ ಸೇರಿಸಿಕೊಂಡು ಬಿಡುತ್ತಾರೆ' ಎಂದರು.

09:35 PM (IST) Oct 22
ವಿರೂಪಗೊಳಿಸಿದವರ ಹಿಡಿಯುವ ಬದಲು ಕಾಳಿ ಮೂರ್ತಿಯನ್ನೇ ಪಶಕ್ಕೆ ಪಡೆದ ಬಂಗಾಳ ಪೊಲೀಸ್, ಬಿಜೆಪಿ ಗರಂ ಆಗಿದೆ. ಕಳೆದ ವರ್ಷ ಬೆಂಗಳೂರಲ್ಲಿ ಗಣೇಶ ಮೂರ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವ್ಯಾನ್‌ನಲ್ಲಿ ಠಾಣೆಗೆ ಕೊಂಡೊಯ್ದಿದ್ದರು. ಈ ಘಟನೆ ಬಂಗಾಳದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
04:09 PM (IST) Oct 22
ತಂದೆಯ ಆರೋಗ್ಯ ನೋಡಿಕೊಳ್ಳಲು ಬಂದ ಖ್ಯಾತ ಸಿಂಗರ್ ರಿಷಬ್ ಹೃದಯಾಘಾತಕ್ಕೆ ಬಲಿ, ಯೇ ಆಶಿಖಿ, ಫಕೀರನಾ ಸೇರಿದಂತೆ ಹಲವು ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ರಿಷಬ್, ಕರ್ವಾ ಚೌತ್ ಆಚರಿಸಿದ ಕೆಲವೇ ದಿನದಲ್ಲಿ ಹದಯಾಘಾತಕ್ಕೆ ಬಲಿಯಾಗಿದ್ದಾರೆ.
03:35 PM (IST) Oct 22
ಜೈಶ್ ಇ ಮೊಹಮ್ಮದ್ ಉಗ್ರರಿಂದ ಮಹಿಳೆಯರಿಗೆ ಆನ್‌ಲೈನ್ ಜಿಹಾದಿ ಕೋರ್ಸ್, 500 ರೂ ಶುಲ್ಕ, ಈಗಾಗಲೇ ಜೈಶ್ ಇ ಮೊಹಮ್ಮದ್್ ಮಹಿಳಾ ಘಟಕ ಆರಂಭಗೊಂಡಿದೆ. ಮಸೂದ್ ಅಜರ್ ಸಹೋದರಿ ಇದೀಗ ಮಹಿಳೆಯರಿಗೆ ಆನ್‌ಲೈನ್ ಜಿಹಾದಿ ಕೋರ್ಸ್ ಆರಂಭಿಸಿದ್ದಾರೆ.
02:51 PM (IST) Oct 22
ವಾರ್ಷಿಕ 694 ಕೋಟಿ ರೂ ಇದ್ದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಸ್ಯಾಲರಿ ಹೈಕ್,ಈಗ ಎಷ್ಟು? ಈ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ನಾಡೆಲ್ಲ ಸ್ಯಾಲರಿ ಶೇಕಡಾ 22ರಷ್ಟು ಹೆಚ್ಚಳವಾಗಿದೆ. ಇದೀಗ ನಾಡೆಲ್ಲ ವಾರ್ಷಿಕವಾಗಿ ಪಡೆಯುವ ಸ್ಯಾಲರಿ ಎಷ್ಟಾಗಿದೆ ಗೊತ್ತಾ?
11:48 AM (IST) Oct 22
ಶಬರಿಮಲೆ ದರ್ಶನಕ್ಕೆ ಆಗಮಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಲಿಕಾಪ್ಟರ್ ಇಳಿದ ಹೆಲಿಪ್ಯಾಡ್‌ನ ಕಾಂಕ್ರೀಟ್ ಕುಸಿದಿದೆ. ಪ್ರತಿಕೂಲ ಹವಾಮಾನದಿಂದಾಗಿ ಕೊನೆಯ ಕ್ಷಣದಲ್ಲಿ ಲ್ಯಾಂಡಿಂಗ್ ಸ್ಥಳ ಬದಲಿಸಲಾಗಿತ್ತು.