ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಆರೋಪಿ ಆಗಿರುವ ನ್ಯಾಷನಲ್ ಹೆರಾಲ್ಡ್ ಅಕ್ರಮ ಪರಭಾರೆ ಪ್ರಕರಣದಲ್ಲಿ ತಮ್ಮ ಚಾರ್ಜ್‌ಶೀಟನ್ನು ರದ್ದು ಮಾಡಿ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಶುಕ್ರವಾರ ದಿಲ್ಲಿ ಹೈಕೋರ್ಟ್ ಮೊರೆ ಹೋಗಿದೆ.
10:31 PM (IST) Dec 20
ಓಲಾ ಎಲೆಕ್ಟ್ರಿಕ್ ತನ್ನ ಆಕ್ರಮಣಕಾರಿ ಮಾರಾಟಕ್ಕೆ ಹೆಸರುವಾಸಿಯಾಗಿದೆ, ಆದರೆ ಅದರ ಮಾರಾಟದ ನಂತರದ ಸೇವೆ ತೀರಾ ನಿಧಾನಗತಿಯಲ್ಲಿದೆ. ಈ ಮೊದಲು ಸ್ಕೂಟರ್‌ಗಳಿಗೆ ಸೀಮಿತವಾಗಿದ್ದ ಸರ್ವೀಸ್ ವಿಳಂಬದ ಸಮಸ್ಯೆಯು ಈಗ ಕಂಪನಿಯ ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿಗೂ ವ್ಯಾಪಿಸಿದೆ.
08:35 PM (IST) Dec 20
ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪತ್ನಿ ಬುಷ್ರಾ ಬೀಬಿಗೆ ವಿಶೇಷ ನ್ಯಾಯಾಲಯ ತಲಾ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಸೌದಿ ರಾಜಕುಮಾರ ನೀಡಿದ್ದ ದುಬಾರಿ ಆಭರಣವನ್ನು ಅಕ್ರಮವಾಗಿ ಉಳಿಸಿಕೊಂಡ ಆರೋಪ ಇದಾಗಿದ್ದು, ದಂಪತಿಗೆ ಭಾರಿ ದಂಡವನ್ನೂ ವಿಧಿಸಲಾಗಿದೆ.
06:39 PM (IST) Dec 20
ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್ ಮುಖೇಶ್ ಅಂಬಾನಿಯ ಅಳಿಯ ಆನಂದ್ ಪಿರಾಮಲ್, ಶ್ರೀರಾಮ್ ಲೈಫ್ ಇನ್ಶುರೆನ್ಸ್‌ನಲ್ಲಿರುವ ತಮ್ಮ ಸಂಪೂರ್ಣ 14.72% ಪಾಲನ್ನು ಸುಮಾರು ₹600 ಕೋಟಿಗೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಈ ವ್ಯವಹಾರವು ಸನ್ಲಾಮ್ ಗ್ರೂಪ್‌ನ ಅಂಗಸಂಸ್ಥೆಯೊಂದಿಗೆ ನಡೆದಿದೆ.
05:51 PM (IST) Dec 20
ಚಂಡೀಗಢದಲ್ಲಿರುವ DRDO ದ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ಸಂಶೋಧನಾ ಪ್ರಯೋಗಾಲಯದ (TBRL) ರೈಲ್ ಟ್ರ್ಯಾಕ್ ರಾಕೆಟ್ ಸ್ಲೆಡ್ (RTRS) ಸೌಲಭ್ಯದಲ್ಲಿ ಡಿಸೆಂಬರ್ 18-19, 2025 ರಂದು ಪ್ರಯೋಗಗಳನ್ನು ನಡೆಸಲಾಯಿತು.
02:41 PM (IST) Dec 20
11:19 AM (IST) Dec 20
25 ವರ್ಷದ ಡೆಲಿವರಿ ಬಾಯ್ ಜಾಂಗ್ ಕ್ಸುಯೆಕಿಯಾಂಗ್, ಐದು ವರ್ಷಗಳಲ್ಲಿ 1.42 ಕೋಟಿ ರೂಪಾಯಿ ಉಳಿತಾಯ ಮಾಡಿ ಸುದ್ದಿಯಾಗಿದ್ದಾರೆ. ದಿನಕ್ಕೆ 13 ಗಂಟೆಗಳ ಕಾಲ ಕಠಿಣ ಪರಿಶ್ರಮ ಮತ್ತು ಕನಿಷ್ಠ ಜೀವನಶೈಲಿಯ ಮೂಲಕ ಈ ಸಾಧನೆ ಮಾಡಿರುವ ಅವರು, ಈಗ ಸ್ವಂತ ಹೋಟೆಲ್ ತೆರೆಯುವ ಕನಸು ಕಾಣುತ್ತಿದ್ದಾರೆ.