ಇಂಫಾಲ್: ಕೊಂಚ ಶಾಂತವಾದಂತಿದ್ದ ಮಣಿಪುರದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಕಳೆದ 24 ತಾಸುಗಳಲ್ಲಿ ಕಮ್ಜಾಂಗ್ ಜಿಲ್ಲೆಯಲ್ಲಿರುವ ನಾಗಾ ಮತ್ತು ಕುಕಿ ಸಮುದಾಯಕ್ಕೆ ಸೇರಿದ ಸುಮಾರು 28 ಮನೆಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ. ಪರಿಣಾಮ ಗ್ರಾಮಸ್ಥರು ಊರು ತೊರೆದು ಸಮೀಪದ ಕಾಡು ಹಾಗೂ ಸೇನಾ ಕ್ಯಾಂಪ್‌ನಲ್ಲಿ ಆಶ್ರಯ ಪಡೆದಿದ್ದಾರೆ.
ಅತ್ತ ಶನಿವಾರ ರಾತ್ರಿ ಕಾಮ್‌ಜಾಂಗ್ ಜಿಲ್ಲೆಯಲ್ಲಿ ಸಶಸ್ತ್ರ ಗುಂಪುಗಳ ದಾಳಿಗೆ ನಾಗಾ ಸಮುದಾಯದ ಮೂವರು ಗಾಯಗೊಂಡರು. ಭಾನುವಾರ ಬೆಳಗ್ಗೆ ಕಾರೊಂದರ ಮೇಲಿನ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಅಸ್ಸಾಂ ರೈಫಲ್ಸ್, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಕಾಮ್‌ಜಾಂಗ್ ಪೊಲೀಸರನ್ನೊಳಗೊಂಡ ಜಂಟಿ ಪಡೆಯನ್ನುಬಾಧಿತ ಪ್ರದೇಶದಲ್ಲಿ ನಿಯೋಜಿಸಲಾಗಿದೆ.ಉಪ ಮುಖ್ಯಮಂತ್ರಿ ನೆಮ್ಚಾ ಕಿಪ್ಗೆನ್ ಅವರು ಈ ಹಿಂಸಾಚಾರವನ್ನು ಖಂಡಿಸಿದ್ದು, ಮನೆಗಳನ್ನು ಸುಟ್ಟದ್ದು ಅಸಹನೀಯ ಅಪರಾಧ ಎಂದಿದ್ದಾರೆ.
07:04 AM (IST) Oct 19
06:14 AM (IST) Oct 19
06:09 AM (IST) Oct 19
05:39 AM (IST) Oct 19