LIVE NOW
Published : Oct 14, 2026, 06:52 AM ISTUpdated : Oct 14, 2026, 08:38 AM IST

India Latest News Live: ಮಾಜಿ ಸಿಎಂ ಮಮತಾ ಬ್ಯಾನರ್ಜಿಗೆ ಚೂರಿ ಇರಿತ ಯತ್ನ ಆರೋಪ - ಮಹಿಳೆ ವಶಕ್ಕೆ, ದೂರು ದಾಖಲು

ಸಾರಾಂಶ

ಬೀಜಿಂಗ್‌: ಲಡಾಖ್‌ನಲ್ಲಿರುವ 28 ಆಯಕಟ್ಟಿನ ಸ್ಥಳಗಳಿಗೆ ಹೆಸರಿಡಲು ಹೊರಟಿರುವ ಭಾರತದ ನಿರ್ಧಾರವನ್ನು ಚೀನಾ ತೀವ್ರವಾಗಿ ವಿರೋಧಿಸಿದ್ದು, ‘ಈ ಪ್ರದೇಶಗಳು ತಮಗೆ ಸೇರಿವೆ’ ಎಂದು ಮೊಂಡಾಟ ಮೆರೆದಿದೆ. ಭಾರತವು ಅಧಿಕೃತ ಮ್ಯಾಪಿಂಗ್‌ನ ಭಾಗವಾಗಿ ಹೆಸರುಗಳನ್ನು ಇಡಲು ನಿರ್ಧರಿಸಿದ ಬೆನ್ನಲ್ಲೇ ಚೀನಾದ ವಿದೇಶಾಂಗ ಇಲಾಖೆ ವಕ್ತಾರೆ ಮಾವೋ ನಿಂಗ್, ‘ಭಾರತವು ಏಕಪಕ್ಷೀಯವಾಗಿ ಮತ್ತು ಕಾನೂನುಬಾಹಿರವಾಗಿ ಸ್ಥಾಪಿಸಿದ ಲಡಾಖ್ ಕೇಂದ್ರಾಡಳಿತ ಪ್ರದೇಶ ಎಂದು ಕರೆಯಲ್ಪಡುವ ಪ್ರದೇಶವನ್ನು ಚೀನಾ ಎಂದಿಗೂ ಗುರುತಿಸಿಲ್ಲ. ಭಾರತ ಪ್ರಮಾಣಿತ ಹೆಸರುಗಳ ಘೋಷಣೆಯನ್ನು ದೃಢವಾಗಿ ವಿರೋಧಿಸುತ್ತದೆ. ಈ ಕ್ರಮ ಕಾನೂನುಬಾಹಿರ ಮತ್ತು ಅಮಾನ್ಯ. ಚೀನಾ-ಭಾರತ ಗಡಿಯ ಪಶ್ಚಿಮ ವಲಯದಲ್ಲಿನ ಸಂಬಂಧಿತ ಪ್ರದೇಶಗಳು ಯಾವಾಗಲೂ ಚೀನಾಕ್ಕೆ ಸೇರಿವೆ ಎಂಬುದನ್ನು ಬದಲಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

ಸತ್ಯ ಬದಲಾಗಲ್ಲ: ಲಡಾಖ್‌ ನಮ್ಮ ಭಾಗ ಎಂದ ಚೀನಾಗೆ ಭಾರತ ಖಾರವಾಗಿಯೇ ಪ್ರತಿಕ್ರಿಯಿಸಿದೆ. ‘ಲಡಾಖ್ ಕೇಂದ್ರಾಡಳಿತ ಪ್ರದೇಶವು ಭಾರತದ ಅವಿಭಾಜ್ಯ ಅಂಗ, ಚೀನಾ ಎಷ್ಟೇ ನಿರಾಕರಿಸಿದರೂ ಈ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂದು ವಿದೇಶಾಂಗ ಇಲಾಖೆ ತಿರುಗೇಟು ನೀಡಿದೆ.

08:38 AM (IST) Oct 14

ಮಾಜಿ ಸಿಎಂ ಮಮತಾ ಬ್ಯಾನರ್ಜಿಗೆ ಚೂರಿ ಇರಿತ ಯತ್ನ ಆರೋಪ - ಮಹಿಳೆ ವಶಕ್ಕೆ, ದೂರು ದಾಖಲು

ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರತ್ತ ಚೂರಿ ಹಿಡಿದು ಬಂದ ಮಹಿಳೆಯೊಬ್ಬಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಿಂದ ಭದ್ರತಾ ಲೋಪವಾಗಿದೆ ಎಂದು ಟಿಎಂಸಿ ನಾಯಕಿ ದೋಲಾ ಸೇನ್ ಆರೋಪಿಸಿದ್ದು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Read Full Story

08:06 AM (IST) Oct 14

ಮೂರು ತಿಂಗಳ ಗರ್ಭಿಣಿ ಪತ್ರಕರ್ತೆಯ ಕೈ ಹಿಡಿದು ಎಳೆದರಾ ರಾಹುಲ್ ಗಾಂಧಿ? ಗಂಭೀರ ಆರೋಪ | ವಿಡಿಯೋ

ಸುಪ್ರೀಂ ಕೋರ್ಟ್ ಬಳಿ ನಡೆದ ಇಂಡಿಯಾ ಒಕ್ಕೂಟದ ಪ್ರತಿಭಟನೆ ವರದಿ ಮಾಡುವಾಗ ರಾಹುಲ್ ಗಾಂಧಿ ತಮ್ಮ ಕೈಹಿಡಿದು ಎಳೆದರು ಎಂದು ಗರ್ಭಿಣಿ ಪತ್ರಕರ್ತೆ ರಿಚಾ ಪರಾಷರ್ ಆರೋಪಿಸಿದ್ದಾರೆ. ಭದ್ರತಾ ಸಿಬ್ಬಂದಿ ತಳ್ಳಿದ್ದರಿಂದ ತಾವು ಮೆಟ್ಟಿಲು ಜಾರಿ ಬಿದ್ದಿರುವುದಾಗಿ ಅವರು ಆಘಾತ ವ್ಯಕ್ತಪಡಿಸಿದ್ದಾರೆ.
Read Full Story

08:02 AM (IST) Oct 14

ಭಾರತದ ಆರ್ಥಿಕ ಭವಿಷ್ಯದ ಬಗ್ಗೆ IMF ಅಚ್ಚರಿಯ ವರದಿ! ಅಮೆರಿಕಾ, ಚೀನಾಗೆ ಎಷ್ಟನೇ ಸ್ಥಾನ?

ಜಾಗತಿಕ ಬಿಕ್ಕಟ್ಟಿನ ನಡುವೆಯೂ 2026-27 ಮತ್ತು 2027-28ರಲ್ಲಿ ಭಾರತ ಶೇ.7ರಷ್ಟು ಆರ್ಥಿಕ ಪ್ರಗತಿ ಸಾಧಿಸಲಿದೆ ಎಂದು ಐಎಂಎಫ್‌ ವರದಿ ಹೇಳಿದೆ. ಪ್ರಬಲ ದೇಶೀ ಬೇಡಿಕೆ ಮತ್ತು ಯುವಜನತೆಯಿಂದಾಗಿ ಭಾರತ ವಿಶ್ವದಲ್ಲೇ ಅತಿ ವೇಗದ ಆರ್ಥಿಕತೆಯಾಗಲಿದೆ.

Read Full Story

07:41 AM (IST) Oct 14

ಎಲೆಕ್ಟ್ರಾನಿಕ್‌ ಯುದ್ಧ ನಡೆಸಬಲ್ಲ ಸಮರ್ಥಕ್‌ 16ಕ್ಕೆ ಕಾರವಾರದಲ್ಲಿ ನೌಕಾಪಡೆಗೆ ಸೇರ್ಪಡೆ

ಸಂಪೂರ್ಣ ದೇಶೀಯ ತಂತ್ರಜ್ಞಾನದಿಂದ ನಿರ್ಮಿಸಲಾದ ಬಹುಪಯೋಗಿ 'ಸಮರ್ಥಕ್' ಯುದ್ಧನೌಕೆಯು ಅಕ್ಟೋಬರ್ 16ರಂದು ಕಾರವಾರದಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿದೆ. ಇದು ಎಲೆಕ್ಟ್ರಾನಿಕ್‌ ಯುದ್ಧ, ಕರಾವಳಿ ಕಾವಲು, ವಿಪತ್ತು ಪರಿಹಾರ ಮತ್ತು ಮುಳುಗಿದ ನೌಕೆಗಳ ರಕ್ಷಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.

Read Full Story

07:22 AM (IST) Oct 14

ಫ್ರಾನ್ಸ್‌ನಲ್ಲಿ ಆಹಾರ ಭಯೋತ್ಪಾದನೆ! ರೆಫ್ರಿಜರೇಷನ್‌ ವ್ಯವಸ್ಥೆ ಮೇಲೆ ಸೈಬರ್ ದಾಳಿ

ಫ್ರಾನ್ಸ್‌ನ ಸೂಪರ್‌ಮಾರ್ಕೆಟ್‌ಗಳ ರೆಫ್ರಿಜರೇಷನ್‌ ವ್ಯವಸ್ಥೆ ಮೇಲೆ ದುಷ್ಕರ್ಮಿಗಳು ಭಾರೀ ಸೈಬರ್ ದಾಳಿ ನಡೆಸಿದ್ದಾರೆ. ಇದರಿಂದ ಫ್ರಿಜ್‌ಗಳ ಉಷ್ಣಾಂಶ 50 ಡಿಗ್ರಿ ಸೆಲ್ಸಿಯಸ್ ದಾಟಿ ಆಹಾರ ಪದಾರ್ಥಗಳು ಹಾಳಾಗಿವೆ. ಪರಿಣಾಮವಾಗಿ 700ಕ್ಕೂ ಹೆಚ್ಚು ಸೂಪರ್‌ಮಾರ್ಕೆಟ್‌ಗಳು ಬಾಗಿಲು ಮುಚ್ಚಿವೆ.
Read Full Story

More Trending News