ಇಂದು ಭಾರತ ವಿಶ್ವದ ವಿಶ್ವಾಸ ಗಳಿಸಿರುವ ದೇಶವಾಗಿದೆ: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

Published : Feb 05, 2026, 05:59 PM ISTUpdated : Feb 05, 2026, 06:02 PM IST
pm modi

ಸಾರಾಂಶ

ರಾಷ್ಟ್ರಪತಿ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ,  ಭಾರತದ ಆರ್ಥಿಕ ಶಕ್ತಿ, ಯುವ ಸಮುದಾಯದ ಬಲ ಮತ್ತು ಜಾಗತಿಕ ವಿಶ್ವಾಸದ ಬಗ್ಗೆ ವಿವರಿಸಿದರು. ಕಾಂಗ್ರೆಸ್ ಆಳ್ವಿಕೆಯ ತಪ್ಪುಗಳನ್ನು ಟೀಕಿಸಿದ ಅವರ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿ ವಿಪಕ್ಷಗಳು ಸಭಾತ್ಯಾಗ ಮಾಡಿದವು.

ನವದೆಹಲಿ: ರಾಷ್ಟ್ರಪತಿ ಭಾಷಣದ ವಂದನಾನ ನಿರ್ಣಯದ ಮೇಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಮಾತನಾಡಿದರು. ಪ್ರಧಾನಿಗಳು ಭಾಷಣ ಆರಂಭಿಸುತ್ತಿದ್ದಂತೆ ವಿಪಕ್ಷಗಳು ಘೋಷಣೆಗಳನ್ನು ಕೂಗಲು ಆರಂಭಿಸಿದರು. ಈ ಗದ್ದಲಗಳ ನಡುವೆಯೇ ಪ್ರಧಾನಿಗಳು ತಮ್ಮ ಮಾತುಗಳನ್ನು ಆರಂಭಿಸಿ ವಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡುವ ಕೆಲಸ ಮಾಡಿದರು. ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿ ವಿರೋಧ ಪಕ್ಷದ ನಾಯಕರು ಸಭಾತ್ಯಾಗ ಮಾಡಿದರು. ವಿಪಕ್ಷಗಳ ಅನುಪಸ್ಥಿತಿಯಲ್ಲಿಯೇ ಪ್ರಧಾನಿಗಳು ಭಾಷಣ ಮಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಈ ರೀತಿಯಾಗಿದೆ..

ಇಂದು ಭಾರತ ವಿಶ್ವದ ಸಮಸ್ಯೆಗಳಿಗೆ ಸ್ಪಂದಿಸುವ ದೇಶವಾಗಿದೆ. ಹಲವು ಅಭಿವೃದ್ಧಿ ಹೊಂದಿದ ದೇಶಗಳ ಜನಸಂಖ್ಯೆ ವೃದ್ಯಾಪ ಹಂತವನ್ನು ತಲುಪಿದ್ದು, ಆದ್ರೆ ಭಾರತ ಯುವ ಜನಸಂಖ್ಯೆಯ ಬಲದಿಂದ ಯಶಸ್ಸಿನತ್ತ ಸಾಗುತ್ತಿದೆ. ಸಾಮರ್ಥ್ಯ ಹೊಂದಿರುವ ಕನಸುಗಳ ಸಾಧನೆಯತ್ತ ದೃಢನಿಶ್ಚಯ ಹೊಂದಿರುವ ಪ್ರತಿಭಾನ್ವಿತ ಯುವ ಸಮುದಾಯವನ್ನು ಭಾರತ ಹೊಂದಿದೆ. ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಇಂದು ಭಾರತ ಸಹ ಒಂದಾಗಿದ್ದು, ಹೆಚ್ಚಿನ ಬೆಳವಣಿಗೆ ಮತ್ತು ಕಡಿಮೆ ಹಣದುಬ್ಬರ ಸಂಯೋಜನೆಯನ್ನು ನಮ್ಮ ದೇಶ ಹೊಂದಿದೆ. ಇದೆಲ್ಲವೂ ನಮ್ಮ ಆರ್ಥಿಕಶಕ್ತಿಯನ್ನು ತೋರಿಸುತ್ತದೆ ಎಂದರು.

ಇಂದು ಇಡೀ ಜಗತ್ತು ಅಸ್ಥಿರತೆಯನ್ನು ಅನುಭವಿಸುತ್ತಿದ್ದು, ಈ ಸಮಸ್ಯೆಯನ್ನು ನಿಭಾಯಿಸಲು ಹಲವು ದೇಶಗಳು ಪರದಾಡುತ್ತಿವೆ. ಎರಡನೇ ಮಹಾಯುದ್ಧದ ನಂತರ ಹೊಸ ಜಾಗತಿಕ ವ್ಯವಸ್ಥೆ ರೂಪುಗೊಂಡಿದ್ದು, ಜಗತ್ತು ಯುದ್ಧದ ಬಿಕ್ಕಟ್ಟುಗಳಲ್ಲಿ ಸಿಲುಕಿ ಹೆಣಗಾಡುತ್ತಿದೆ. ಆದರೆ ಭಾರತ ಹಲವು ದೇಶಗಳಿಗೆ ಆಶಾಕಿರಣವಾಗಿದೆ. ಇಂದು ದೇಶ ಅತ್ಯಂತ ವೇಗವಾಗಿ ಬೆಳವಣಿಗೆಯಾಗುತ್ತಿದೆ ಎಂದು ಹೇಳಿದರು.

ಭಾರತ ವಿಶ್ವದ ವಿಶ್ವಾಸ ಗಳಿಸಿದೆ

ಇಡೀ ಜಗತ್ತು MSME ಜಾಲದ ಮೇಲೆ ಭರವಸೆಯನ್ನು ಹೊಂದಿದೆ. ನಮ್ಮ ವ್ಯಾಪಾರ ಒಪ್ಪಂದಗಳನ್ನು ವಿಶ್ವಾದ್ಯಂತ ಪ್ರಶಂಸಿಸಲಾಗುತ್ತಿದೆ. ನಾವು ಅನೇಕ ನೀತಿಗಳ ಮೂಲಕ ವಿಶ್ವದ ವಿಶ್ವಾಸವನ್ನು ಗಳಿಸಿದ್ದೇವೆ. ಯುರೋಪ್ ಜೊತೆ 9 ಜಾಗತೀಕ ಒಪ್ಪಂದಗಳನ್ನು ಮಾಡಿಕೊಂಡಿದ್ದು, ಆರ್ಥಿಕವಾಗಿ ಪ್ರಗತಿ ಸಾಧಿಸಿದೆ. ಭಾರತ ಸುಧಾರಣೆಯ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಸಾಗುತ್ತಿದ್ದು, ಕಾಂಗ್ರೆಸ್ ಆಳ್ವಿಕೆಯಲ್ಲಿ ಯಾವುದೇ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿರಲಿಲ್ಲ. ಕಾಂಗ್ರೆಸ್‌ನಿಂದಾಗಿ ದೇಶದ ಆರ್ಥಿಕತೆ ಹಿಂದುಳಿದಿದೆ. ಕಾಂಗ್ರೆಸ್ ಆಳ್ವಿಕೆಯ ತಪ್ಪುಗಳನ್ನು ಸರಿ ಮಾಡಲು ನಮಗೆ ಹೆಚ್ಚು ಸಮಯ ವ್ಯಯವಾಗುತ್ತಿದೆ. ಆರ್ಥಿಕ ನೀತಿಗಳಿಂದಲೇ ದೇಶ ನಡೆಯುತ್ತದೆ. ಅಮೆರಿಕಾದಂತಹ ದೇಶಗಳೊಂದಿಗೆ ಭಾರತ ಒಪ್ಪಂದ ಮಾಡಿಕೊಂಡಿದೆ ಎಂದರು.

ಕೆಲವರು ತಮ್ಮನ್ನು ತಾವು ರಾಜರು ಅಂತ ಪರಿಗಣಿಸಿಕೊಳ್ಳುವರು ನಿನ್ನೆ ಆರ್ಥಿಕ ಅಸಮಾನತೆ ಬಗ್ಗೆ ಮಾತನಾಡೋದನ್ನು ಗಮನಿಸಿದೆ ಎಂದು ವಿಪಕ್ಷಗಳನ್ನು ತಮಾಷೆ ಮಾಡಿದರು. ನುಸುಳುಕೋರರ ಪರವಾಗಿ ವಕಾಲತ್ತು ವಹಿಸುವ ಇವರನ್ನು ಯುವಕರು ಹೇಗೆ ಕ್ಷಮಿಸಲು ಸಾಧ್ಯ? ನುಸುಳುಕೋರರು ಅವರ ಸ್ವಾತಂತ್ರ್ಯ, ಜೀವನೋಪಾಯದ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ. ಈ ಜನರು ಅಂತಹ ಜನರಿಗೆ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಟಿಎಂಸಿ ವಿರುದ್ಧ ಪ್ರಧಾನಿಗಳು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಸರಾಯಿ ಅಂಗಡಿ ವಿರುದ್ಧ ರೊಚ್ಚಿಗೆದ್ದು ರಸ್ತೆಯಲ್ಲೇ ಮದ್ಯದ ಹೊಳೆ ಹರಿಸಿದ ನಾರಿಯರು: 15 ಲಕ್ಷ ಮೌಲ್ಯದ ಮದ್ಯ ಉಡೀಸ್

ಅಭಿವೃದ್ಧಿ ಹೊಂದುತ್ತಿರುವ ಅತಿದೊಡ್ಡ ದೇಶವು ಅಭಿವೃದ್ಧಿ ಹೊಂದುತ್ತಿರುವ ದೇಶದೊಂದಿಗೆ ವ್ಯವಹರಿಸುವುದು ದೊಡ್ಡ ವಿಷಯ. ನಿಮ್ಮಲ್ಲಿ ಸಾಮರ್ಥ್ಯವಿದ್ದಾಗ, ನಿಮ್ಮ ನಾಗರಿಕರಲ್ಲಿ, ದೇಶವಾಸಿಗಳಲ್ಲಿ ಶಕ್ತಿ ಇದ್ದಾಗ ಇಂತಹ ಒಪ್ಪಂದಗಳು ಸಂಭವಿಸುತ್ತದೆ. ನಮ್ಮ ಸರ್ಕಾರ ಬ್ಯಾಂಕ್‌ಗಳಲ್ಲಿನ ನಿಷ್ಕ್ರಿಯ ಆಸ್ತಿಗಳನ್ನು ಶೇ.1ಕ್ಕಿಂತ ಕಡಿಮೆ ಮಾಡಿದೆ. ದೇಶದ ಜನರು ನಮ್ಮ ಬ್ಯಾಂಕ್‌ಗಳ ಮೇಲೆ ವಿಶ್ವಾಸ ಹೊಂದಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟ್ಟ ಕಂದನ ಬಿಟ್ಟು ವಿದೇಶಕ್ಕೆ ಹೋದ ತಾಯಿ : ಅಮ್ಮನಿಗಾಗಿ ಮಗು ಅಳುವ ವೀಡಿಯೋ ವೈರಲ್ ಆಗ್ತಿದ್ದಂತೆ ವ್ಯಾಪಕ ಆಕ್ರೋಶ
ಪರ ಪುರುಷನ ಜೊತೆ ಮಲಗಿದ್ರೆ ಮಾತ್ರ ಮನೆಯೊಳಗೆ ಪ್ರವೇಶ: ದೂರಿನಲ್ಲಿ ಮಹಿಳೆ ಶಾಕಿಂಗ್​ ವಿಷ್ಯ ಬಯಲು