ಜುಲೈ ವೇಳೆ ಭಾರತಕ್ಕೆ 50 ಕೋಟಿ ಕೊರೋನಾ ಲಸಿಕೆ ಲಭ್ಯ

By Kannadaprabha NewsFirst Published Nov 20, 2020, 8:52 AM IST
Highlights

‘ಮುಂದಿನ 3-4 ತಿಂಗಳಲ್ಲಿ ಕೊರೋನಾ ಲಸಿಕೆ ಲಭ್ಯವಾಗಲಿದೆ. ಜುಲೈ- ಅಗಸ್ಟ್‌ ವೇಳೆಗೆ 25ರಿಂದ 30 ಕೋಟಿ ಭಾರತೀಯರಿಗೆ 40 ರಿಂದ 50 ಕೋಟಿ ಡೋಸ್‌ನಷ್ಟುಕೊರೋನಾ ಲಸಿಕೆ ಲಭ್ಯವಾಗಲಿದೆ. 

ನವದೆಹಲಿ (ನ.20) : ಮುಂದಿನ 3-4 ತಿಂಗಳಲ್ಲಿ ಕೊರೋನಾ ಲಸಿಕೆ ಲಭ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌, ಲಸಿಕೆ ವಿತರಣೆ ಸಂಬಂಧ ಕೇಂದ್ರ ಸರ್ಕಾರ ಅತ್ಯಂತ ನಿಖರ ಮತ್ತು ವಿಸ್ತೃತವಾದ ಯೋಜನೆ ಸಿದ್ಧಪಡಿಸಿದೆ. ವೃದ್ಧರು ಮತ್ತು ಆರೋಗ್ಯ ಕಾರ್ಯಕರ್ತರು ಮೊದಲ ಆದ್ಯತೆಯಲ್ಲಿ ಲಸಿಕೆ ಪಡೆದುಕೊಳ್ಳಲಿದ್ದಾರೆ ಎಂದು ಪ್ರಕಟಿಸಿದ್ದಾರೆ.

ಎಫ್‌ಐಸಿಸಿಐ ಆಯೋಜಿಸಿದ್ದ ವೆಬಿನಾರ್‌ ಉದ್ದೇಶಿಸಿ ಮಾತನಾಡಿದ ಅವರು, ‘ಮುಂದಿನ 3-4 ತಿಂಗಳಲ್ಲಿ ಕೊರೋನಾ ಲಸಿಕೆ ಲಭ್ಯವಾಗಲಿದೆ. ಜುಲೈ- ಅಗಸ್ಟ್‌ ವೇಳೆಗೆ 25ರಿಂದ 30 ಕೋಟಿ ಭಾರತೀಯರಿಗೆ 40 ರಿಂದ 50 ಕೋಟಿ ಡೋಸ್‌ನಷ್ಟುಕೊರೋನಾ ಲಸಿಕೆ ಲಭ್ಯವಾಗಲಿದೆ. ಕೊರೋನಾ ಲಸಿಕೆಯನ್ನು ಆದ್ಯತೆಯ ಮೇಲೆ ವಿತರಿಸುವುದು ಸ್ವಾಭಾವಿಕ. ಕೊರೋನಾ ವಾರಿಯರ್‌ ಆಗಿ ಸೇವೆ ಸಲ್ಲಿಸಿದ ಆರೋಗ್ಯ ಕಾರ್ಯಕರ್ತರಿಗೆ ಹಾಗೂ 65 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ನೀಡಲಾಗುವುದು. ಬಳಿಕ 50ರಿಂದ 65 ವರ್ಷ ಆದವರಿಗೆ ಕೊರೋನಾ ಲಸಿಕೆಯನ್ನು ನೀಡಲಾಗುವುದು. ತದನಂತರದಲ್ಲಿ ಇತರೆ ಕಾಯಿಲೆಯಿಂದ ಬಳಲುತ್ತಿರುವ 50 ವರ್ಷದ ಒಳಗಿನವರು ಕೊರೋನಾ ಲಸಿಕೆ ಪಡೆಯಲಿದ್ದಾರೆ.

ಕೊರೋನಾ ಕೊಲ್ಲಲು ಕೊನೆಗೂ ಹೊಸ ಅಸ್ತ್ರ ಸಿಕ್ಕು, 30 ಸೆಕೆಂಡ್ ಸಾಕು! ..

ಕೊರೋನಾ ಲಸಿಕೆ ವಿತರಣೆಗೆ ತಜ್ಞರು ಹಾಗೂ ವಿಜ್ಞಾನಿಗಳ ಸಲಹೆಯನ್ನು ಪಡೆದು ಸವಿಸ್ತಾರವಾದ ಯೋಜನೆಯನ್ನು ರೂಪಿಸಲಾಗಿದೆ. ಮುಂದಿನ ವರ್ಷದ ಮಾಚ್‌ರ್‍- ಏಪ್ರಿಲ್‌ನಲ್ಲಿ ನಾವು ಏನು ಮಾಡಬೇಕು ಎಂಬುದನ್ನು ಈಗಿನಿಂದಲೇ ಯೋಜಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

click me!